ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ 40ಅಥವಾ 50 ಅಡಿ ಗೊಂದಲಕ್ಕೆ ಶಾಸಕರು ತೆರೆ ಎಳೆಯಲಿ:ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ.
ಜಗಳೂರು ಸುದ್ದಿ,
ಜಗಳೂರು,ಮೇ.31:ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ₹20 ಕೋಟಿ ಹಣ ಬಿಡುಗಡೆಯಾಗಿದ್ದು, ಎರಡು ಬದಿ 40 ಅಡಿ ವಿಸ್ತರಣೆ ಗೊಂದಲವಿದೆ ಶಾಸಕರು ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.
ಶನಿವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು,ಸ್ಥಳೀಯ ಆಡಳಿತ ಸಂಸ್ಥೆ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸದಸ್ಯರುಗಳೊಂದಿಗೆ ಚರ್ಚಿಸಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕು.ಕೆಲವರು ಕೋರ್ಟ್ ಮೊರೆಹೋಗಿದ್ದು ಅವರನ್ನು ವಿಶ್ವಾಸಕ್ಕೆ ಗಳಿಸಿಕೊಂಡು,ಕಾಮಗಾರಿ ತ್ವರಿತಗತಿಯಲ್ಲಿ ಸಾಗಲು ಶಾಸಕರು ಗಮನಹರಿಸಬೇಕು ಅಭಿವೃದ್ದಿ ವಿಚಾರದಲ್ಲಿ ನಮ್ಮ ಹಸ್ತ ಕ್ಷೇಪವಿಲ್ಲ.50 ಅಡಿ ವಿಸ್ತರಣೆಗೆ ಮಾತುಕತೆ ಮಾಡೋಣ ಎಂಬುದು ಅನುಮಾನಕ್ಕೆ ಆಸ್ಪದ ಎಂದು ಟೀಕಿಸಿದರು.
ಪಟ್ಟಣ ಚಿಕ್ಕದಾಗಿದೆ ಸರ್ವತೋಮುಖ ಅಭಿವೃದ್ದಿ ಅವಶ್ಯಕತೆಯಿದೆ.ಬೆಂಗಳೂರಿನ ಚಿಕ್ಕಪೇಟೆ ಮಾದರಿಯಾಗಬೇಕು.ಪಟ್ಟಣದಲ್ಲಿ ವ್ಯಾಪಾರ,ವಹಿವಾಟು ಬೆಳೆಯಬೇಕಿದೆ.ರಸ್ತೆ ವಿಸ್ತರಣೆ ಸಿಸಿ ರಸ್ತೆ ಕಾಮಗಾರಿ ಶೀಘ್ರ ಮುಕ್ತಾಯವಾದರೆ ರೈತರು,ಸಂಚಾರಿಗಳಿಗೆ ಕಿರಿಕಿರಿ ತಪ್ಪುತ್ತದೆ,ಸಂಚಾರ ಸುಗಮವಾಗುತ್ತದೆ ಎಂದರು.
ವರ್ತುಲ ರಸ್ತೆಪ್ರಸ್ತಾವನೆಗೆ ಸ್ವಾಗತರ್ಹ:ಇತ್ತೀಚಿನ ಕಾರ್ಯಕ್ರಮದಲ್ಲಿ ಶಾಸಕರ ಹೇಳಿಕೆಯಂತೆ ವರ್ತುಲ ರಸ್ತೆ ನಿರ್ಮಾಣದ ಪ್ರಸ್ತಾವನೆಗೆ ಸಹಮತವಿದೆ.ಪಟ್ಟಣದಲ್ಲಿ ರಸ್ತೆ ಅಭಿವೃದ್ದಿ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ನವೀನ್ ಕುಮಾರ್,ಮುಖಂಡರಾದ ಮಂಜಣ್ಣ,ಬಿದರಕೆರೆ ರವಿಕುಮಾರ್,ಓಬಳೇಶ್,ಪೂಜಾರ ಸಿದ್ದಪ್ಪ,ಸೇರಿದಂತೆ ಮತ್ತಿತರರು ಇದ್ದರು.
