ಗ್ರಾಮದ ಇತಿಹಾಸದಲ್ಲಿಯೇ ಪ್ರಪ್ರಥಮ ಡಾಕ್ಟರೇಟ್ ಪದವಿ ಪಡೆದ ಪ್ರಸನ್ನಕುಮಾರ್ ಎಂ.ಡಿ.
ಜಗಳೂರು ಸುದ್ದಿ,
ಜಗಳೂರು ಮೇ.25:ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಬಸಮ್ಮ ದಿ.ದಾಸಪ್ಪ ಎಂ.ಟಿ.ಎಂಬ ದಂಪತಿಗಳಿಗೆ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪ್ರಸನ್ನ ಕುಮಾರ್ ಎಂ.ಡಿ.ಅವರು ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡಾ.ಶಿವಮೂರ್ತಿ.ಎ ಅವರ ಮಾರ್ಗದರ್ಶನದಲ್ಲಿ ‘ಕ್ರೀಡಾಪಟುಗಳ ಆಯ್ಕೆ ಸೈಕೋಮೋಟರ್ ಸಾಮರ್ಥ್ಯಗಳು ಹಾಗೂ ಯೋಗಕ್ಷೇಮದ ಮೇಲೆ ಯೋಗಾಭ್ಯಾಸಗಳ ಪರಿಣಾಮ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿರುತ್ತಾರೆ.ಈ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ(ಪಿಎಚ್ ಡಿ) ಪದವಿ ನೀಡಿ ಗೌರವಿಸಲಾಗಿದೆ.
ಜಗಳೂರಿನಿಂದ ಮೂರು ಕಿ.ಮೀ ಅಂತರದಲ್ಲಿರುವ ಲಿಂಗಣ್ಣನಹಳ್ಳಿ ಗ್ರಾಮದಲ್ಲಿ ಸುಮಾರು 300 ಕ್ಕೂ ಅಧಿಕ ಮನೆಗಳಿದ್ದು.ಈ ವರೆಗೂ ಯಾರೊಬ್ಬರೂ ಪಿಎಚ್ ಡಿ ಪದವಿ ಪಡೆದಿಲ್ಲ.ಕುವೆಂಪು ವಿಶ್ವವಿದ್ಯಾಲಯದಲ್ಲಿಯೇ ದೈಹಿಕ ಶಿಕ್ಷಣ ಸ್ನಾತಕೋತ್ತರ ವಿಭಾಗದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನಕುಮಾರ್ ಎಂ.ಡಿ ಅವರ ಚೊಚ್ಚಲ ಪಿಎಚ್ ಡಿ ಪದವಿ ಸಾಧನೆಯ ಹೆಗ್ಗಳಿಕೆಗೆ ಪಾತ್ರರಾಗಿದ್ದು ಇವರಿಗೆ ಕುಟುಂಬದ ಸಂಬಂಧಿಗಳು,2012-15 ನೇ ಸಾಲಿನ ಜಗಳೂರು ಪ್ರಥಮದರ್ಜೆಕಾಲೇಜಿನ ಹಳೇ ವಿದ್ಯಾರ್ಥಿಗಳ ಸ್ನೇಹಿತ ಬಳಗ,ಪ್ರಾಧ್ಯಾಪಕ ವೃಂದ,ಸೇರಿದಂತೆ ಹಿತೈಶಿಗಳು ಅಭಿನಂದನೆ ಸಲ್ಲಿಸಿದ್ದಾರೆ.
