ಜಗಳೂರು ತಾಲೂಕಿನಲ್ಲಿ ಮೆದಗಿನಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ಪ್ರೇರಣಾ ಸಮಾಜ ಸೇವಾ ಸಂಸ್ಥೆ ಹಾಗೂ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಸಂಯುಕ್ತಾಶ್ರಯದಲ್ಲಿ, ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿತ್ತು,
ಕಾರ್ಯಕ್ರಮದ ಉದ್ಘಾಟನೆಯನ್ನು ಜ್ನಾನ ತರಂಗಿಣಿ ವಿಧ್ಯಾ ಸಂಸ್ಥೆ ಕಾರ್ಯದರ್ಶಿ, ಡಾ. ಪಿ. ಎಸ್. ಅರವಿಂದನ್ ಚಾಲನೆ ನೀಡಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಯೋಗಾಸನ ಪ್ರಮುಖ ಪಾತ್ರ ವಹಿಸುತ್ತೆದೆ, ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು, ನಕಾರಾತ್ಮಕ ಚಿಂತನೆಗಳಿಂದ ದೂರ ಉಳಿಯಲು ಬಹು ಮುಖ್ಯ ಪಾತ್ರವಹಿಸುತ್ತದೆ ಎಂದರು
ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ವೈಧರಾದ ಡಾ. ಶ್ವೇತಾರವರು ಉದ್ದೇಶಿಸಿ ಮಾತನಾಡಿದರು ೧೨ ಕ್ಕೂ ಹೆಚ್ಚು ಯೋಗಾಸನಗಳನ್ನು, ಪ್ರದರ್ಶಿಸಿದರು, ಪ್ರತಿ ಆಸನದ ಬಳಿಕ ಅದರ ಪ್ರಯೋಜನಗಳನ್ನು, ವಿವರವಾಗಿ ಮಕ್ಕಳಿಗೆ ತಿಳಿಸುವುದು ಅತ್ಯವಶ್ಯಕ ಎಂದರು
.
ಈ ಸಂದರ್ಭದಲ್ಲಿ ಪ್ರೇರಾಣಾ ಸಮಾಜ ಸೇವಾ ಸಂಸ್ಥೆ ನಿರ್ದೇಶಕ ಫಾದರ್, ರೊನಾಲ್ಡ್ ಫುರ್ಟಾಡೊ,, ಮೊರಾರ್ಜಿ ದೇಸಾಯಿ ವಸತಿ ಶಾಲೆ (ಆಂಗ್ಲ ಮಾಧ್ಯಮ)ದ ಪ್ರಾಂಶುಪಾಲರು ಶ್ರೀ ಬಸವರಾಜ್ . , ಆಲ್ ಫಾತಿಮಾ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಶಾಹೀನಾ ಬೇಗಂ, ಪತ್ರಕರ್ತ. ರಖೀಬ್, ಶ್ರೀಮತಿ ಸುಜಾತಾ, ಶ್ರೀಮತಿ ಆಸಮಬಾನು, ಶ್ರೀಮತಿ ಯಶೋಧಾ ಸೇರಿದಂತೆ ಹಾಜುರಿದ್ದರು.
