ಕ್ಷೇತ್ರದ ಮತದಾರರೇ ನನಗೆ ಸ್ಟಾರ್ ಕ್ಯಾಂಪಿನ್ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಗೆಲವು ಖಚಿತ: ಬಂಡಾಯ ಅಭ್ಯರ್ಥಿ ಹೆಚ್.ಪಿ. ರಾಜೇಶ್ ಬಾರಿ ಜನಸ್ತೋಮದೊಂದಿಗೆ ರೊಡ್ ಶೊ ನಡೆಸಿ ನಾಮಪತ್ರ ಸಲ್ಲಿಕೆ
ಶುಕ್ರದೆಸೆ ನ್ಯೂಸ್: : ಕ್ಷೇತ್ರದ ಮತದಾರರೇ ನನ್ನ ಕೈ ಹಿಡಿಲಿದ್ದಾರೆ , ಅವರ ಆಸೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಧರ್ಮಾ ಯುದ್ದದಲ್ಲಿ ಬರುವ ಮೆ 10 ರಂದು ನಡೆಯಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದು ಗೆಲವು ನಿಶ್ಚಿತ ಎಂದು ಮಾಜಿ ಶಾಸಕ ಹೆಚ್.ಪಿ ರಾಜೇಶ್ ಹೇಳಿದರು.
ಪಟ್ಟಣದ ಈಶ್ವರ ದೇವಾಸ್ಥಾನಕ್ಕೆ ಆಪಾರ ಅಭಿಮಾನಿಗಳೊಂದಿಗೆ ತೆರಳಿ ದೇವರ ದರ್ಶನ ಪಡೆದು ನಂತರ ಮುಖ್ಯ ರಸ್ತೆಯಲ್ಲಿ ಬಾರಿ ಜನಸ್ತೋಮದೊಂದಿಗೆ ರೋಡ ಶೊ ನಡೆಸಿ ತಾಲ್ಲೂಕು ಕಛೇರಿಗೆ ತೆರಳಿ ಬುಧವಾರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಕಾಂಗ್ರೇಸ್ ಪಕ್ಷ ನನಗೆ ಟಿಕೇಟ್ ಕೊಡುತ್ತೇನೆ ಎಂದು ನಂಬಿಸಿ ಮೋಸ ಮಾಡಿದೆ ಹಿನ್ನಲೆಯಲ್ಲಿ ಕ್ಷೇತ್ರದ ಮತದಾರರು ನೀವು ಪಕ್ಷೇತರರಾಗಿ ಸ್ವರ್ಧೆ ಮಾಡಿ ನಿಮಗೆ ಬೆಂಬಲ ಕೊಡುವ ಮೂಲಕ ಗೆಲ್ಲಿಸಿಕೊಂಡು ಬಂದೇ ಬರುತ್ತೇವೆ ಎಂದು ಕ್ಷೇತ್ರದ ಮತದಾರರ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದೆನೆ .ಯಾವುದೇ ಕಾರಣಕ್ಕೂ ನಾನು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಷ್ಟೆ ಹಣ ಖರ್ಚಾದರು ಚುನಾವಣೆ ನಿಮ್ಮ ಅಶಿರ್ವಾದಿಂದ ಗೆದ್ದೆ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತದಾರ ಪ್ರಭುವೇ ನನಗೆ ಸ್ಟಾರ್‌ಪ್ರಚಾರಕರು :- ಬುಧವಾರ ನಾಮಪತ್ರ ಸಲ್ಲಿಸಿದ್ದು ನಾನು ನುಡಿದಂತೆ 25 ಸಾವಿರಕ್ಕೂ ಅಧಿಕ ಬೃಹತ್ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿರುತ್ತೇನೆ. ಕ್ಷೇತ್ರದ ಮತದಾರ ಪ್ರಭುವೇ ಸ್ಟಾರ್ ಪ್ರಚಾರಕರು, ಅವರೇ ನನ್ನ ಅಭಿಮಾನಿ ದೇವರುಗಳು ಅವರ ನಡೆತೆಯಂತೆ ನಾನು ನಡೆದುಕೊಳ್ಳುತ್ತೇನೆ. ಬಂಡಾಯ ಅಭ್ಯರ್ಥಿ ಹೆಚ್ ಪಿ ರಾಜೇಶ್ ರವರಿಗೆ ಅಭಿಮಾನಿಗಳಿಂದ ಬೃಹತ್ ಸೇಬಿನ ಹಾರ ಹಾಕಿ ಬೃಹತ್ ಮೆರವಣಿಗೆ ಚಾಲನೆ ನೀಡಲಾಯಿತು. ನಾನು ಕೋರನ್ ವೇಳೆ ಪುನರ್ ಜನ್ಮ ಪಡೆದಿದ್ದೆನೆ ನನಗೆ ಬ್ಲಾಕ್ ಪಂಗಸ್ ಆಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಸಿರಿಗೆರೆ ಶ್ರೀಗಳ ಅಶಿರ್ವಾದ ಎಸ್ ಎಸ್ ಮಲ್ಲಿಕಾರ್ಜುನರವರು ಸಹಕಾರದಿಂದ ಉತ್ತಮ ವೈಧ್ಯಕೀಯ ಚಿಕಿತ್ಸೆ ಪಡೆಯಲು ಸಹಕಾರ ನೀಡಿದರ ಫಲವಾಗಿ ಪುನರ್ ಜನ್ಮ ಪಡೆದಿರುತ್ತೆನೆ ..ನಾನು ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳುನ್ನು ಮಾಡುವ ಮೂಲಕ ಮಹತ್ವದ ಯೋಜನೆ 57 ಕೆರೆ ತುಂಬಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯರವರ 250 ಕೋಟಿ ರೂಗಳಿಗೆ ಅನುಮೋದನೆ ನೀಡಲಾಯಿತು ನಂತರ ಬಂದ ಮಾಜಿ ಮುಖ್ಯಮಂತ್ರಿಗಳಾದ ಕುಮಾರ್ ಸ್ವಾಮಿ .ಯಡಿಯೊರಪ್ಪ ಸರ್ಕಾರದಲ್ಲಿ 650 ಕೋಟಿ ರೂಗಳಿಗೆ ಹೆಚ್ವಿನ ಅನುದಾನ ನೀಡುವ ಮೂಲಕ ಜಾರಿಗೆ ಬಂದಿದೆ ಎಂದು ಸ್ಮರಿಸಿದರು.
ಎಸ್.ವಿ.ರಾಮಚಂದ್ರರೇ ನನಗೆ ಎದುರಾಳಿ: -ನಾನು ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮುಂದಿಟ್ಟುಕೊಂಡು ಮತ ಕೇಳುತ್ತೇನೆ. , ಪಕ್ಷೇತರರಾಗಿ ಜನರ ಆಸೆಯಂತೆ ಚುನಾವಣೆ ಮಾಡುವೆ . ನಾನು ಈಗ ಪಕ್ಷೇತರನಾಗಿ ಸ್ಪರ್ದಿಸಿದ್ದು, ಎಲ್ಲಾ ಚುನಾವಣೆಯಲ್ಲೂ ಎಸ್.ವಿ.ರಾಮಚಂದ್ರ ಎದುರಾಳಿಯಾಗಿದ್ದಾರೆ.
ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ವಿ.ರಾಮಚಂದ್ರ ಪ್ರತಿ ಸ್ಪರ್ಧಿಯಾಗಿದ್ದು ಅವರ ವಿರುದ್ದ ಸಾವಿರಾರು ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗಳೂರಿನ ಮಹತ್ವದ ಯೋಜನೆಗಳಾದ ಅಪ್ಪರ್ ಭದ್ರಾ ಯೋಜನೆ ಹಾಗೂ 57 ಕೆರೆ ತುಂಬಿಸುವ ಯೋಜನೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಮಹತ್ವದ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಈ ಯೋಜನೆಗಳು ನಮ್ಮ ಸರ್ಕಾರದದ ಆಡಳಿತಾವಧಿಯಲ್ಲಿ ಸಿರಿಗೆರೆ ಶ್ರೀಗಳ ಅಶಿರ್ವಾದಿಂದ ಜಾರಿಗೆ ತರಲು ಶ್ರಮಿಸಿದ್ದೆವೆ ಪುನ ನಾನು ಈ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ನೆನೆಗುದಿಗೆ ಬಿದ್ದಿರುವ ಮಹತ್ವದ ಯೋಜನೆಗಳ ಕಾಮಗಾರಿಗಳುನ್ನು ಕೈಗೆತ್ತಿಕೊಂಡು ಅಭಿವೃದ್ಧಿಗೆ ಶ್ರಮಿಸುವೆ ಎಂದರು
ಈ ಸಂರ್ಭದಲ್ಲಿ ಮಾಜಿ ಶಾಸಕ ಟಿ ಗುರುಸಿದ್ದನಗೌಡ ಅವರ ಪುತ್ರರಾದ ಪವಿ. ನಿಂಗನಹಳ್ಳಿ ಕೃಷ್ಣ ಮೂರ್ತಿ ಮಾಜಿ ಎಪಿಎಂಸಿ ಅಧ್ಯಕ್ಷ ಎಲ್ ಬಿ ಬೈರೇಶ್, ಗಿರಿಶ್ ಒಡೆಯರ್, ಬಿದರಕೆರೆ ವೀರೇಶ್, ಬಸವಾಪುರ ರವಿಚಂದ್ರ, ವೆಂಕಟೇಶ್, ರೇವಣ್ಣ, ಅಂಗಡಿ ಲೋಕೇಶ್, ಪುರಷೋತ್ತಮನಾಯ್ಕ್. ಸೇರಿದಂತೆ ಮತ್ತಿತರರು ಹಾಜರಿದ್ದರು.