by editor m.rajappa vyasagondanahalli | shukradeshe news online news Kannada ಸೆ 12 _2025 ..

ಸುದ್ದಿ ಜಗಳೂರು

ಈರುಳ್ಳಿ ಬೆಳೆದ ರೈತ ಕಂಗಾಲು ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ ಪಾತಳಕ್ಕೆ ಕುಸಿದ ಈರುಳ್ಳಿ ಬೆಲೆ
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಿಂದ ತಿಪ್ಪೆಗೆ ಸುರಿದ ವ್ಯಾಸಗೊಂಡನಹಳ್ಳಿ ರೈತ ನಾಗಪ್ಪ

ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆಯಿಂದ ರೈತಾಪಿ ವರ್ಗ ಕಂಗಾಲಾಗಿದ್ದು, ರೈತರಿಗೆ ಈರುಳ್ಳಿ ಬೆಲೆ ಪಾತಳಕ್ಕೆ ಕುಸಿದ ಹಿನ್ನಲೆಯಲ್ಲಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈರುಳ್ಳಿ ಬೆಳೆದ ರೈತನ ಸಂಕಷ್ಟ ಜೀವನವೇ ದುಸ್ತರಗೊಳಿಸಿದೆ. ಬದುಕಿಗೆ ಆಸರೆಯಾಗಬೇಕಿದ್ದ ಈರುಳ್ಳಿ ಬಾಳಲ್ಲಿ ಕಣ್ಣಿರು ಹಾಕುವಂತೆ ಮಾಡಿದೆ.

ಜಗಳೂರು ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದ ರೈತ ಗೌಡಜ್ಜಿರ ನಾಗಪ್ಪ ಎಂಬುವವರು ಸುಮಾರು ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದು ಇದೀಗ ಕನಿಷ್ಠ ಬೆಲೆ ಸಿಗದೇ ಕಂಗಾಲಾಗಿದ್ದಾರೆ .ಬೇಸೆತ್ತು ಈರುಳ್ಳಿಯನ್ನ ತಿಪ್ಪೆಗೆ ಸುರಿದಿದ್ದಾರೆ. ಸಂಬಂಧಿಸಿದ ಸರ್ಕಾರ ಬೆಳೆದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗಳೂರು‌ ತಾಲ್ಲೂಕಿನಾದ್ಯಂತ ಈರುಳ್ಳಿ ಬೆಳೆಗಾರರು ಈ ಬಾರಿ ಕಂಗಾಲು ಮಾಡಿದಂತಾಗಿದೆ. ಎರಡು ಸಾವಿರದಿಂದ ಮೂರು ಸಾವಿರ ಇದ್ದ ಬೆಲೆ, ಈಗ ದಿಡೀರನೆ ಪಾಕಿಟ್ ಗೆ 200 ರಿಂದ 100 ಕ್ಕೆ ಇಳಿದಿದೆ. ಯಾವ ಸರ್ಕಾರಗಳು ಬಂದರೂ ರೈತರ ಸಂಕಷ್ಟ ಪರಿಹರಿಸುವುದು ಅಷ್ಟಕ್ಕಷ್ಟೇ ಎನ್ನುವಂತಾಗಿದ್ದು, ರೈತರ ಹೆಸರಿನಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಕಾಳಜಿವಹಿಸಲಿ ಎಂದು ಪತ್ರಿಕೆ ಮೂಲಕ ರೈತರು ಮನವಿ ಮಾಡಿಕೊಂಡಿದ್ದಾರೆ.


ಈರುಳ್ಳಿ ಬೆಲೆ ಇಳಿಕೆಯಿಂದ ರೈತರಿಗೆ ಸಂಕಷ್ಠ ಎದುರಾಗಿದೆ. ವ್ಯಾಸಗೊಂಡನಹಳ್ಳಿ ಗ್ರಾಮದ ರೈತ ನಾಗಪ್ಪ ಸುಮಾರು .ಎರಡು ಎಕರೆ ಜಮೀನಿನಲ್ಲಿ ಬೆಳೆದ 200 ಪಾಕೀಟ್ ತುಂಬಿದ ಈರುಳ್ಳಿ ಚೀಲವನ್ನ ಬೇಸರಗೊಂಡು ತಿಪ್ಪೆಗೆ ಸುರಿದಿದ್ದಾರೆ.
ಸರ್ಕಾರ ರೈತರ ಸಮಸ್ಯೆ ಬಗೆಹರಿಸಬೇಕೆಂದು ರೈತ ಮನವಿ ಮಾಡಿಕೊಂಡಿದ್ದಾರೆ.ಈರುಳ್ಳಿ ಬೆಳೆ ಬೆಳೆಯಲು ಸಾಕುಷ್ಟು ಖರ್ಚಾಗುತ್ತಿದ್ದು ಬೀಜ ಗೊಬ್ಬರ.ಬೇಸಾಯ .ಕಳೆ ಅಧಿಕ ಖರ್ಚಾ ಬರಲಿದೆ ಅದರೆ ಈ ಬಾರಿ ಈರುಳ್ಳಿ ಬೆಳೆಗೆ ಬೆಲೆ ಸಿಗದೇ ರೈತರು ನೆಲ ಕಚ್ಚಿ ರೈತರು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ ಎಂದು ಶುಕ್ರದೆಸೆ‌ನ್ಯೂಸ್ ಆನ್ ಲೈನ್ ಮೀಡಿಯಾದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ತೊಗರಿ, ಕಡಲೆಯಂತೆ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಲಿ
ರೈತ ನಾಗಪ್ಪ.

. ಮಾರುಕಟ್ಟೆಗಳಲ್ಲಿ ದಲ್ಲಾಳಿಗಳು ಈರುಳ್ಳಿಗೆ ಕಡಿಮೆ ಬೆಲೆಗೆ ಖರಿದಿಸಲು ಹಿಂಸೆ ನೀಡುತ್ತಿದ್ದಾರೆ. ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹ ಮಾಡಿ ಬೆಲೆ ಬಂದಾಗ ಮಾರಾಟ ಮಾಡುತ್ತಾರೆ. ಹೀಗಾಗಿ ಈರುಳ್ಳಿ ಬೆಳೆದ ರೈತನ ಸ್ಥಿತಿ ಚಿಂತಾಜನಕವಾಗಿದೆ. ಕಷ್ಟ ಪಟ್ಟು ತಿಂಗಳುಗಟ್ಟಲೇ ನೀರುಣಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಈರುಳ್ಳಿ ಬೆಲೆ ಕಣ್ಣಿರು ತರಿಸುತ್ತಿದೆ.


ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಬೆಳೆದ ರೈತರ ಗೋಳು ಹೆಚ್ಚಾಗುತ್ತಿದೆ. ಸಂಕಷ್ಟಗಳ ಸರಮಾಲೆಯಿದ್ದು, ನಿರ್ದಿಷ್ಠ ಬೆಲೆ ನಿಗದಿಯಾಗದೆ ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದಂತಾಗಿದ್ದು,ರೈತರು ಸಾಲ ಸೂಲ ಮಾಡಿ ಬೆಳೆದ ಬೆಳೆಗೆ ಸರಿಯಾದ ರೀತಿ ಬೆಲೆ ಸಿಗದೇ ಕಂಗಾಲಾಗಿ ಕಣ್ಣೀರು ಹಾಕುವಂತಾಗಿದೆ.ಒಟ್ಟಾರೆ ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಸರಿಯಾದ ರೀತಿ ಬೆಳೆಗೆ ಬೆಲೆ ಸಿಗದೇ ಕಂಗಾಲಾಗಿರುವ ರೈತರು ಬೇಸರಗೊಂಡು ಈರುಳ್ಳಿಯನ್ನ ತಿಪ್ಪೆಗೆ ಮತ್ತು ರಸ್ತೆಗೆ ಸುರಿದು ಆಳುವ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕ

ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

Leave a Reply

Your email address will not be published. Required fields are marked *

You missed

error: Content is protected !!