ಲೀಗಲ್ ಸೆಲ್ ಚೇರ್ಮನ್
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ
ಡಿ.ವಿ.ಜಿ.

ದಿನಾಂಕ: 10/09/2025 ರಂದು ಸುಮಾರು ಸಂಜೆ 5:53 ಪಿ.ಎಂ. ಗಂಟೆಗೆ ನಾನು ಫೇಸ್ ಬುಕ್ ನೋಡುತ್ತಿರುವಾಗ ರವಿರಾಜ್ ವಿ ಹಿಂದೂ ಮತ್ತು ದರ್ಶನ್ ಪವರ್ ಎಂಬ ಹೆಸರಿನ ಫೇಸ್ ಬುಕ್ ಖಾತೆದಾರರು ಹಾಲಿ ಕರ್ನಾಟಕ ರಾಜ್ಯದ ತೋಟಗಾರಿಕ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜನ್ ರವರು ಈ ಹಿಂದೆ ಹಿಂದು ಮತ್ತು ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ಮಾತನಾಡಿರುವ ವಿಡಿಯೋವನ್ನು ರವಿರಾಜ್ ವಿ ಹಿಂದೂ ಎಂಬವರು ಫೇಸ್ ಬುಕ್ ನಲ್ಲಿ. ತಮ್ಮ ಫೇಸ್ ಬುಕ್ ಖಾತೆಯಲಿ, ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್ ರವರು ಮಾತನಾಡಿರುವ ಭಾಷಣವನ್ನು ಎಡಿಟ್ ಮಾಡಿ, ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಅವರ ತಂದೆಯ ಬಗ್ಗೆ, ಅವಹೇಳನಕಾರಿಯಾಗಿ ದಾರ್ಮಿಕಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಫೇಸ್ ಬುಕ್ ನಲೆ, ಕ್ರಿಯೇಟ್ ಮಾಡಿ, ಬಿಟ್ಟಿದ್ದನ್ನು ದಾವಣಗೆರೆಯ ದರ್ಶನ್ ಪವ‌ರ್ ಎಂಬುವರು ನೋಡಿ, ಲೈಕ್ ಮಾಡಿ, ಸುಮಾರು 14 ಕ್ಕಿಂತ ಹೆಚ್ಚು ಜನರಿಗೆ ಶೇರ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ, ನೋಡುವಂತೆ ಮಾಡಲು ಹಾಗೂ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಅವರ ತಂದೆಯವರಿಗೆ ತೇಜೋವಧೆಯುಂಟು ಮಾಡುವ ಕೆಲಸವನ್ನು ಮಾಡಿರುತ್ತಾರೆ,

ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರ ವಿಡಿಯೋವನ್ನು ಎಡಿಟ್ ಮಾಡಿ ಹರಿಬಿಟ್ಟಿರುವ ರವಿರಾಜ್ ವಿ ಹಿಂದು ಮತ್ತು ದರ್ಶನ್ ಪವರ್ ಎಂಬ ಫೇಸ್ ಬುಕ್ ಖಾತೆಯಲಿರುವ ವೆಕ್ತಿಳನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ನೀಡಿದ ಲಿಖಿತ ದೂರನ್ನು ಸ್ವೀಕರಿಸಿ, ಪ್ರಕರಣವನ್ನು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!