ಪಿಎಸಿಎಸ್ ನೂತನ ಆಧ್ಯಕ್ಷರಾಗಿ ಜೆ.ಎಚ್.ರಘುರಾಮ ರೆಡ್ಡಿ ಅವಿರೋಧ ಆಯ್ಕೆ.

ಜಗಳೂರು ಸುದ್ದಿ,
ಜಗಳೂರು,ಸೆ.16:ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಚ್.ರಘುರಾಮರೆಡ್ಡಿ ಅವಿರೋಧ ಆಯ್ಕೆಯಾದರು.

ತೆರವಾದ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಜೆಎಚ್.ರಘುರಾಮರೆಡ್ಡಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಲಾಗಿದ್ದು.ಸಾಲಗಾರರ ಕ್ಷೇತ್ರದಿಂದ 11‌ ಜನ,ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬರು ನಿರ್ದೇಶಕ ಸೇರಿ ಒಟ್ಟು 12 ಜನ ನಿರ್ದೇಶಕರು,ಪಿಎಲ್ ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಆದಿಮನಿ ಅವರುಗಳು ಸರ್ವಾನುಮತದಿಂದ ಆಯ್ಕೆಮಾಡಲಾಯಿತು ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆ ಅಧಿಕಾರಿ ಹರೀಶ್‌ ಘೋಷಿಸಿದರು.

ನೂತನ ಅಧ್ಯಕ್ಷ ಜೆ.ಹೆಚ್.ರಘುರಾಮರೆಡ್ಡಿ ಮಾತನಾಡಿ,ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಸಹಕಾರ ಸಂಘದ ನಿರ್ದೇಶಕರುಗಳುಗಳಿಗೆ ಅಭಿನಂದನೆಗಳು.ರೈತರ ಸಾಲಮರುಪಾವತಿ,ಸರ್ಕಾರದ ಅನುದಾನಗಳ ಸದ್ಬಳಕೆ ಸೇರಿದಂತೆ ಸಹಕಾರ ಸಂಘದ ಆರ್ಥಿಕ ಲಾಭಾಂಶಗಳಿಸಲು ಮತ್ತು ರೈತರಿಗೆ ಸೌಲಭ್ಯಕ್ಕಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಬಿ.ಶಂಕರಪ್ಪ,ನಿರ್ದೇಶಕರಾದ ಜೆ.ಕೆ ಕಾಮೇಶ್,ಟಿ.ವೆಂಕಟೇಶ್,ಜೆ.ಎಚ್.ರಮೇಶ್ ಗೌಡ,ಬಾಲಮ್ಮ,ಆರ್‌.ಶಾಮಲ,ಡಿ.ಬಾಲರಾಜ್,ಕೆ.ಆರ್.ಶ್ರೀನಿವಾಸ್,ಎಸ್.ಸೂರಲಿಂಗಪ್ಪ,ತಿಪ್ಪೇಸ್ವಾಮಿ,ಜಿ.ಡಿ.ತಿಪ್ಪೇಸ್ವಾಮಿರೆಡ್ಡಿ,ಪಿಎಲ್ ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಆದಿಮನಿ,ಬಿಜೆಪಿ ಮುಖಂಡರಾದ ಕಮಂಡಲಗೊಂದಿ ಸುಧೀರ್ ರೆಡ್ಡಿ,ಇಂದ್ರೇಶ್,ಅರವಿಂದ ಪಾಟೀಲ್,ಮಲ್ಲಾಪುರ ಸತ್ಯಪ್ಪ,ರಮೇಶ್ ರೆಡ್ಡಿ,ಪ್ರಕಾಶ್ ರೆಡ್ಡಿ,ರಂಗನಾಥಗೌಡ,ಗ್ರಾ.ಪಂ‌ಮಾಜಿ ಅಧ್ಯಕ್ಷ ಶ್ರೀನಿವಾಸ್,ಸದಸ್ಯ ಶಿವಣ್ಣ,ತಿಪ್ಪೇಸ್ವಾಮಿ,ಶ್ರೀಧರ್ ರೆಡ್ಡಿ,ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!