ಜಗಳೂರು .
ಜಾತಿ ಕಾಲಂನಲ್ಲಿ ಉಪಜಾತಿ ನಮೂದಿಸಬೇಡಿ ಉಪಾರ ಎಂದು ಬರೆಸುವಂತೆ ಉಪಾರ ಸಮಾಜದ ತಾಲ್ಲೂಕು ಅದ್ಯಕ್ಷ ಜಮ್ಮಾಪುರ ರಂಗಪ್ಪ ತಿಳಿಸಿದ್ದಾರೆ.
ಸುದ್ದಿ ಜಗಳೂರು
‘ಪಟ್ಟಣದ ಪತ್ರಿಕಾ ಭವನದಲ್ಲಿ ಕರೆಯಲ್ಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದ್ದು ನಮ್ಮ ಸಮುದಾಯ ಅತ್ಯಂತ ಹಿಂದೂಳಿದ ಸಮುದಾಯವಾಗಿದೆ. ಕಳೆದ ದಿನಮಾನಗಳಲ್ಲಿ ನಂಜನಗೊಡಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಉಪ್ಪಾರ ಸಮುದಾಯವನ್ನ ಎಸ್.ಟಿ ಮೀಸಲು ಪಟ್ಟಿಗೆ ಸೇರಿಸುತ್ತೆವೆ ಎಂದು ಭರವಸೆ ನೀಡಿದ್ದರು ಆದರೆ ಇದುವರೆಗೂ ಟಿ.ಮೀಸಲು ಪಟ್ಟಿಗೆ ಸೇರಿಸದೇ ಇರುವುದಿಲ್ಲ ಕೇವಲ ಬರವಸೆ ಉರುಳಾಗಿದೆ ಎಂದರು. ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿಯ ಕಾಲಂನಲ್ಲಿ ಯಾವುದೆ ಕಾರಣಕ್ಕೂ ಉಪಜಾತಿಯ ವಿವರವನ್ನು ನಮೂದಿಸಬಾರದು. ಸಮುದಾಯದ ಜನಸಂಖ್ಯೆಯ ಬಗ್ಗೆ ಸ್ಪಷ್ಟತೆಗಾಗಿ ಉಪ್ಪಾರ ಎಂದೇ ಬರೆಸುವಂತೆ ಹೇಳಿಕೆ ನೀಡಿದರು.
ಉಪ್ಪಾರ ಸಮಾಜದ ಮುಖಂಡ ಗಿಡ್ಡನಕಟ್ಟೆ ಬಂಗಾರಪ್ಪ ಮಾತನಾಡಿ ‘ಉಪ್ಪಾರ ಜಾತಿಯಲ್ಲಿ ಅನೇಕ ಉಪಜಾತಿಗಳಿವೆ . ಉಪಾಜಾತಿ ಬರೆಸಬೇಡಿ ಪ್ರಮುಖವಾಗಿ ಜಾತಿ ಸಮೀಕ್ಷೇ ವೇಳೆ ಉಪ್ಪಾರ ಎಂಬ ಜಾತಿಯನ್ನು ಮಾತ್ರ ಬರೆಯಿಸಬೇಕಿದೆ. ಇನ್ನಾವುದೇ ಇತ್ಯಾದಿ ಉಪಜಾತಿಗಳನ್ನು ಜಾತಿ ಕಾಲಂನಲ್ಲಿ ನಮೂದಿಸಿದಾಗ ನಮ್ಮ ಜಾತಿಯ ಸಂಖ್ಯೆ ಕಡಿಮೆಯಾಗಿ, ಮೀಸಲಾತಿ ಪ್ರಮಾಣ ಕಡಿಮೆಯಾಗುತ್ತದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ಎಂದರು.
ಸಮಾಜದ ಕಾರ್ಯಧರ್ಶಿ ಗುರುಸ್ವಾಮಿ ಮಾತನಾಡಿ ಸಮಾಜದ ಯುವಕರು ಸ್ವಯಂಪ್ರೇರಿತವಾಗಿ ಸಮಾಜದ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದ್ದಾರೆ ನಮ್ಮ ಸಮುದಾಯದಲ್ಲಿ ರಾಜಕೀಯ ಪ್ರಾತ್ಯನಿದ್ಯ ಅತ್ಯಂತ ಕೆಳಸ್ತರದಲ್ಲಿರುವ ಸಮುದಾಯವನ್ನ ಎಸ್ .ಟಿ ಮೀಸಲು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಹಾಲಪ್ಪ.ಉಪ್ಪಾರ ಸಮಾಜದ ಜಿಲ್ಲಾ ಕಾರ್ಯಧರ್ಶಿ ಗಿಡ್ಡನಕಟ್ಟೆ ಕಾಂತರಾಜು. ಮುಖಂಡ ಬಂಗಾರಪ್ಪ. ಮಾಕುಂಟೆ ಮಹಾಂತೇಶ್. ಪುಟ್ಟರಾಜು.ಉದ್ಗಾಟ್ಟ ಹನುಮಂತಪ್ಪ ಸೇರಿದಂತೆ ಹಾಜುರಿದ್ದರು.

