ಜಗಳೂರು ಸುದ್ದಿ : ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರುನ್ನು ಮೂರು ಬಾರಿ ಸೋಲಿಸಿದ್ದು ಪುನ ನಾಲ್ಕನೇ ಬಾರಿ ಸೋಲಿಸಿ ನಾನು ಶಾಸಕನಾಗುವುದು ಶತಸಿದ್ದ ಎಂದು ಹಾಲಿ ಶಾಸಕ ಎಸ್ ವಿ ಆರ್ ಮಾಜಿ ಶಾಸಕ ಹೆಚ್ ಪಿ ಆರ್ ಗೆ ಸವಾಲು ಹಾಕಿದ್ದಾರೆ. ಶುಕ್ರದೆಸೆ ನ್ಯೂಸ್: ಪಟ್ಟಣದ ವಿಧ್ಯಾನಗರದ ಕೆನರಾ ಬ್ಯಾಂಕ್ ಬಳಿ ಒಂದನೇ ಮಹಡಿ ಕಟ್ಟಡದಲ್ಲಿ ಗುರುವಾರ ನೂತನ ಬಿಜೆಪಿ ಕಛೇರಿ ಉದ್ಗಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೆ ಜನರ ಕಣ್ಣಿಗೆ ಕಾಣಲಿದ್ದು ಮತ್ತೂಷ್ಟು ಕ್ಷೇತ್ರವನ್ನ ಮಾದರಿ ತಾಲ್ಲೂಕುನ್ನಾಗಿ ಮಾಡಲು ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಯಾಚನೆ ಮಾಡುವೆ.ಬರುವ ಚುನಾವಣೆಯಲ್ಲಿ ನಾನು ನಾಲ್ಕನೆ ಬಾರಿಯಾಗಿ ಶಾಸಕನಾಗುವುದು ಶತಸಿದ್ದ ನನಗೆ ಬರುವ ಮೆ 10 ರಂದು ನಡೆಯಲಿರುವ ಚುನಾವಣೆ ಎಂಬ ಯುದ್ದದಲ್ಲಿ ಮತದಾರರು ಅತ್ಯಂತ ಬಹುಮತಗಳುನ್ನು ನನಗೆ ನೀಡುವ ಮೂಲಕ ಗೆದ್ದೆಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಕಾರ್ಯಕರ್ತರು ಸಂಪರ್ಕ ಕಛೇರಿಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಸಂಪರ್ಕಿಸಲು ಸೂಕ್ತ ಕಚೇರಿಗೆ ಭೇಟಿ ನೀಡಿ ಈ ಕಛೇರಿಯನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. . ಸಂಸದ ಜಿ ಎಂ ಸಿದ್ದೇಶ್ವರ ನೂತನ ಕಛೇರಿ ಉದ್ಗಾಟನೆ ಮಾಡಿ ನಂತರ ಕಾರ್ಯಕರ್ತರುನ್ನುದ್ದೆಶಿಸಿ ಮಾತನಾಡಿದರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ಎರಡು ಬಾಗಿಲು ಆಗಿದ್ದು ಪಕ್ಷೇತರ ಅಭ್ಯರ್ಥಿ ಹಾಗೂ ಕೈ ಅಭ್ಯರ್ಥಿ ನಡುವೆ ಮುಸುಕಿನ ಗುದ್ದಾಟವಿದೆ ಇವೆರಡರ ನಡುವೆ ನಮ್ಮ ಬಿಜೆಪಿ ಗೆಲ್ಲುವು ಖಚಿತ ಎಂದು ಮೈಮರೆತು ಕೂರಬೇಡಿ. ಬಿಜೆಪಿ ಕಾರ್ಯಕರ್ತರು ಶಾಸಕ ರಾಮಚಂದ್ರರವರ ಗೆಲುವಿಗೆ ಕಂಕಣ ಬದ್ದರಾಗುವಂತೆ ಕರೆ ನೀಡಿದರು.ನಮ್ಮ ಬಿಜೆಪಿ ಸರ್ಕಾರದ ಕೊಡುಗೆಯಿಂದ ಕ್ಷೇತ್ರಕ್ಕೆ ನೀರಾವರಿ ಯೋಜನೆ ಸಹಕಾರಿಯಾಗಿದ್ದು ಶಾಸಕ ರಾಮಚಂದ್ರರವರು ಕ್ಷೇತ್ರಕ್ಕೆ 3500 ಕೋಟಿ ರೂಗಳ ಅನುದಾನ ಕಲ್ಪಿಸಿ 57 ಕೆರೆ ತುಂಬಿಸುವ ಯೋಜನೆ ಅಪ್ಪರ್ ಭದ್ರಾ .ಬಹುಗ್ರಾಮ ಕುಡಿಯುವ ನೀರಿನ ಮಹತ್ವದ ಯೋಜನೆಗಳುನ್ನು ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಸಹಕಾರದಿಂದ ಜಾರಿಗೆ ಬಂದಿವೆ ನಮ್ಮ ಪಕ್ಷದ ಕಾರ್ಯಕರ್ತರು ನಮ್ಮ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲು ಅತ್ಯಂತ ಬಹುಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಮನವಿಮಾಡಿಕೊಂಡರು..ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೋವಿಡ್ ವೇಳೆಯಲ್ಲಿ ದೇಶದ ಜನತೆಗೆ ವಾಕ್ಸಿನ್ ಚಿಕಿತ್ಸೆ ಸೌಲಭ್ಯ ಇದಗಿಸಿ ಜನರ ಜೀವ ಕಾಪಾಡಿದೆ. ಪ್ರಪಂಚದ ವಿವಿಧ ದೇಶಗಳಾದ ಅಮೇರಿಕಾ .ಚೀನಾ .ರಷ್ಯಾ ಇನ್ನಿತರೆ ದೇಶಗಳ ಆರ್ಥಿಕತೆ ದಿವಾಳಿಯಾಗಿದ್ದು ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿದ್ದು ದೇಶದ ಆಡಳಿತ ವ್ಯವಸ್ಥೆ ಸುಧಾರಣೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರ ಪತ್ನಿ ಇಂದಿರಾ ರಾಮಚಂದ್ರ .ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ. ಬಿಜೆಪಿ ಮಂಡಲ ಅದ್ಯಕ್ಷ ಹೆಚ್ ಸಿಮಹೇಶ್.ಮಾಜಿ ಜಿಪಂ ಸದಸ್ಯ ಸೊಕ್ಕೆ ನಾಗರಾಜ್.ಜಿಲ್ಲಾ ಎಸ್ಸಿ ಮೊರ್ಚಾ ಕಾರ್ಯಧರ್ಶಿ ನಾಗರಾಜ್. .ಮಾಜಿ ಜಿಪಂ ಸದಸ್ಯೆ ಜಯಲಕ್ಷ್ಮಿ .ಮಾಜಿ ಜಿಪಂ ಸದಸ್ಯೆ ರಶ್ಮಿ. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಣ್ಣ ಸೇರಿದಂತೆ ಮುಂತಾದವರು ಹಾಜರಿದ್ದರು.