ಶುಕ್ರದೆಸೆ ನ್ಯೂಸ್: ತಾಲ್ಲೂಕಿನ ಗೋಗುದ್ದು ಗ್ರಾಮದ ಹಣ್ಣಿನ ವ್ಯಾಪಾರಿ ಈಶ್ವರಪ್ಪರವರ ಪುತ್ರಿ ಸಹನ ಎಂಬ ವಿಧ್ಯಾರ್ಥಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೆರ್ಗಡೆಯಾಗಿದ್ದಾಳೆ . ದಲಿತ ಕುಟುಂಬದಲ್ಲಿ ಜನಿಸಿದ ಸಹನ ದಾವಣಗೆರೆ ಜಿಲ್ಲೆ ಮೊರಾರ್ಜಿ ವಸತಿಯುತ ಕಾಲೇಜಿನಲ್ಲಿ ತಂಗಿ ಉತ್ತಮ ವಿಧ್ಯಾಭ್ಯಾಸ ಮಾಡುವ ಮೂಲಕ ಪಿಯುಸಿ ಫಲಿತಾಂಶದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೆರ್ಗಡೆಯಾಗಿ ಜಗಳೂರು ತಾಲ್ಲೂಕಿಗೆ ಹಾಗೂ ಹುಟ್ಟಿದ ಗ್ರಾಮಕ್ಕೆ ಮತ್ತು ತಂದೆ ತಾಯಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ . ಗೊಗುದ್ದು ಗ್ರಾಮದ ಹಣ್ಣಿನ ವ್ಯಾಪಾರಿ ತಂದೆ ಈಶ್ವರಪ್ಪ ತಾಯಿ ಸರಿತಮ್ಮ ಎಂಬ ದಂಪತಿಗಳ ಮಗಳಾದ ಸಹನ . ಮೊರಾರ್ಜಿ ದೇಸಾಯಿ ವಸತಿಯುತ ವಿಜ್ಞಾನ ಪದವಿ ಪೂರ್ವ ಕಾಲೇಜು ಅವರಗೊಳ್ಳ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ವಿಧ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ರೈತಪಿ ಕೆಲಸಗಳನ್ನು ಕೂಲಿ ನಾಲಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ತಂದೆ ಈಶ್ವರಪ್ಪ ತಾಯಿ ಸರಿತಮ್ಮ ಇವರು ತಮ್ಮ ಮಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲಿ ಎಂದು ಕನಸುಗಳನ್ನು ಕಟ್ಟಿಕೊಂಡು ಹಗಲು ರಾತ್ರಿ ಕಷ್ಟಪಟ್ಟು ಮಗಳನ್ನು ಪ್ರೋತ್ಸಾಹಿಸಿ ಈ ರೀತಿಯಾಗಿ ವಿದ್ಯಾಭ್ಯಾಸವನ್ನು ಮಾಡಿಸಿರುವುದು ಸಂತೋಷದಾಯಕವಾಗಿದೆ. ಸಹನಳ ಸಾಧನೆಗೆ ಊರಿನ ಗ್ರಾಮಸ್ಥರು ಸಂಬಂಧಿಕರು ಹಿತೈಷಿಗಳು ಸ್ನೇಹಿತರು ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಲಿ ಎಂದು ಹಾರೈಸಿದರು ಸಹನ ಎಂಬ. ವಿಧ್ಯಾರ್ಥಿ ಗಳಿಸಿರುವ ಅಂಕಗಳು ಕೇಳುಗರ ನಿಬ್ಬೆರಗಿಸುವಂತ ಸಾಧನೆ ಮಾಡಿದ್ದಾಳೆ ಕನ್ನಡ -98 ಇಂಗ್ಲಿಷ್ -85 ಭೌತಶಾಸ್ತ್ರ -92 ರಾಸಾಯನಿಕ ಶಾಸ್ತ್ರ 93 ಗಣಿತ-98 ಜೀವಶಾಸ್ತ್ರ 97 ಒಟ್ಟು ಆರು ನೂರಕ್ಕೆ563 ಅಂಕಗಳನ್ನು ಗಳಿಸಿ ಕಾಲೇಜಿಗೆ ತಾಲೂಕಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ