ಶುಕ್ರದೆಸೆ ನ್ಯೂಸ್: ಕ್ಷೇತ್ರದ ಮತದಾರರೆ ನನಗೆ ಬಿ ಪಾರಂ ಕೊಟ್ಟು ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣದಲ್ಲಿ ನಿಲ್ಲಿಸಿ ಮತ ಹಾಕುವರು ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡಿದ ವರಿಷ್ಠರ ಮತಗಳು ಈ ಕ್ಷೇತ್ರದಲ್ಲಿಲ್ಲ .ಎಂದು ಮಾಜಿ ಶಾಸಕ ಹೆಚ್ ಪಿ ಆರ್ ಸೋಕ್ಷ್ಮವಾಗಿ ವರಿಷ್ಠರಿಗೆ ತಿರುಗೇಟು ನೀಡಿದ್ದಾರೆ . ಬಂಡಾಯ ಅಭ್ಯರ್ಥಿಯಾದ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರಿಗೆ ಕಲ್ಲೇದೇವರಪುರ ಹಾಗೂ ಬೆಣ್ಣೆ ಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ವಾದ್ಯ ಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು. ಜಗಳೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಅವರ ಆಪಾರ ಬೆಂಬಲಿಗರೊಂದಿಗೆ ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವರ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದು ದೇವರ ಅರ್ಶಿವಾದ ಸ್ವಿಕರಿಸಿ ನಂತರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ವಿವಿಧ ಗ್ರಾಮಗಳಾದ ಬೆಣ್ಣೆಹಳ್ಳಿ ದೋಣಿಹಳ್ಳಿ ಸೇರಿದಂತೆ ಇನ್ನು ಮುಂತಾದ ಗ್ರಾಮಗಳಲ್ಲಿ ಮನೆ ಮನೆ ಭೇಟಿ ನೀಡಿ ಮತದಾರರ ಬಳಿ ಕೈ ಮುಗಿದು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ವರ್ಧಿಸಿರುವ ನನಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿ ನಿಮ್ಮಗಳ ಸೇವೆ ಮಾಡಲು ಆವಕಾಶ ಕಲ್ಪಿಸುವಂತೆ ಮತದಾರರ ಬಳಿ ಮತ ಯಾಚಿಸಿ ಮನವಿ ಮಾಡಿಕೊಂಡರು. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡದೆ ನಾನು ಒಬ್ಬ ಮಾಜಿ ಶಾಸಕ ಎಂದು ಪರಿಗಣಿಸದೆ ಬೇರೊಬ್ಬರಿಗೆ ಟಿಕೆಟ್‌ ನೀಡಿ ಬಿ ಪಾರಂ ನೀಡಲಾಗಿದೆ . ಆ ಹಿನ್ನಲೆಯಲ್ಲಿ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸುವಂತೆ ನಿಮ್ಮ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿದ್ದೆನೆ. ಕ್ಷೇತ್ರದ ನಿಜವಾದ ಮತದಾರರು ನೀವುಗಳು ನಾನು ಪಕ್ಷೇತರ ಅಭ್ಯರ್ಥಿಯಾಗಲು ಬೆಂಬಲವಾಗಿ ನನ್ನ ಬೆನ್ನಿಗೆ ನಿಂತು‌ ಬಿ ಪಾರಂ ನೀಡಿ ಮೆ 10 ರಂದು ನಡೆಯಲಿರುವ‌ ಚುನಾವಣೆಯಲ್ಲಿ ಮತ ಹಾಕುವರೆ ನನಗೆ ನಿಜವಾದ ವರಿಷ್ಠರು ನೀವೆ ನಮ್ಮ ವರಿಷ್ಠರು ಎಂದು ಮತದಾರರ ಮನ ಗೆದ್ದರು. ನಾನು ನಮ್ಮ ಆಪಾರ ಜನಸ್ತೋಮದೊಂದಿಗೆ ಪಟ್ಟಣದಲ್ಲಿ ನಾಮ ಪತ್ರ ಸಲ್ಲಿಸಿರುವುದನ್ನ ಕಂಡ ಕಾಂಗ್ರೆಸ್ ಪಕ್ಷದ ವರಿಷ್ಠರು ನನಗೆ ಕರೆ ಮಾಡಿದ್ದರು ಆದರೆ ನಾನು ಯಾವುದೇ ವರಿಷ್ಠರ ಒತ್ತಡಕ್ಕೆ ನಾನು ಮಣೆಯುವುದಿಲ್ಲ ಸೊಪ್ಪು ಹಾಕುವುದಿಲ್ಲ ಮತದಾರರು ಉಹಪೋಹಗಳಿಗೆ ಕಿವಿಗೊಡಬೇಡಿ. ನಂಬಿದ ಮತದಾರರೆ ನನಗೆ ಅಭಿಮಾನಿ ದೇವರುಗಳು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜಯಗಳಿಸಲು ಹೋರಾಟ ಮಾಡುವೆ .ಈಗಾಗಲೆ ನಮ್ಮ ಪರವಾಗಿ ಕ್ಷೇತ್ರದಲ್ಲಿ ಅಲೆಯಿದೆ ಮತದಾರರು ಬುದ್ದಿವಂತರಿದ್ದಾರೆ ಯಾರಿಗೆ ಮತ ನೀಡಬೇಕೆಂದು ತಿರ್ಮಾನಿಸುವರು.

ನಾನು ಕ್ಷೇತ್ರದಲ್ಲಿ ಶಾಸಕನಾಗಿ 57 ಕೆರೆ ನೀರು ತುಂಬಿಸುವ ಯೋಜನೆ ನಮ್ಮ ಅವಧಿಯಲ್ಲಿಯೆ ಜಾರಿಯಾಗಿದ್ದು ಅಪ್ಪರ್ ಭದ್ರಾ ಯೋಜನೆಗೆ ಈ ಪ್ರದೇಶದಿಂದ ಒಕ್ಕೊರಲಿನಿಂದ ಹೋರಾಟದ ಪ್ರತಿಫಲವಾಗಿದೆ .ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಲಾಗಿತ್ತು.ವಸತಿ ಯೋಜನೆ.ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ. ಶುದ್ದಕುಡಿಯುವ ನೀರಿನ ಘಟಕ ಸ್ಥಾಪನೆ. ಸಮುದಾಯ ಭವನ ಗಂಗಾ ಕಲ್ಯಾಣ ಯೋಜನೆಗಳು.ಸಣ್ಣ ಕೆರೆ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳಡಿಯಲ್ಲಿ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಆದರೆ ಶಾಸಕ ಎಸ್ ವಿ ರಾಮಚಂದ್ರ ಈ ಕ್ಷೇತ್ರವನ್ನ ವ್ಯಾಪಾರ ಕೇಂದ್ರವನ್ನಾಗಿ ಮಾಡಿಕೊಂಡು ಭ್ರಷ್ಟಚಾರದ ಆಡಳಿತ ನಡೆಸಿ ತಾಲ್ಲೂಕು ಕೇಂದ್ರದಲ್ಲಿ 40 ಪರಿಷಂಟೆಜ್ ರಾಜಕಾರಣ ಮಾಡಿದ್ದಾರೆ .ಕ್ಷೇತ್ರದ ಮಹತ್ವದ ಯೋಜನೆ 57 ಕೆರೆ ತುಂಬಿಸುವ ಯೋಜನೆಡಿ ಕಾಮಗಾರಿಯಲ್ಲಿ ಪರಿಷಂಟೆಜ್ ಪಡೆದು ಅಧಿಕಾರದ ಆಮಲಿನಲ್ಲಿ ಮಹತ್ವದ ಯೋಜನೆಗಳಾದ ಅಪ್ಪರ ಭದ್ರಾ ಯೋಜನೆ ಬಹುಗ್ರಾಮ ಕುಡಿಯುವ ನೀರಿನ 57 ಕೆರೆ ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿವೆ . .ನಾನು ಬರುವ ಚುನಾವಣೆಯಲ್ಲಿ ಶಾಸಕ ರಾಮಚಂದ್ರ ನನ್ನು ಸೋಲಿಸಿ ಈ ಮಹತ್ವದ ಯೋಜನೆಗಳಿಗೆ ಆದ್ಯತೆ ನೀಡಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವೆ .ಕಾಯಕವೇ ಕೈಲಾಸ ಎಂದು ಹೇಳುವಂತೆ ಬಸವಣ್ಣರವರ ನುಡಿದಂತೆ ನಡೆಯಲು ನಾವು ಬದ್ದರಾಗಿ ಕ್ಷೇತ್ರದ ಸರ್ವ ಧರ್ಮದ ಜನರ ಶಾಂತಿ ಕಾಪಾಡಲು ಬದ್ದವಾಗಿದ್ದೆನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..

ಈ ಸಂಧರ್ಭದಲ್ಲಿ ಮುಖಂಡ ಎಲ್ ಬಿ ಬೈರೇಶ್. ಬಸಾವಪುರ ರವಿಚಂದ್ರ .ನಾಯಕ ಸಮಾಜದ ಕಾರ್ಯಧರ್ಶಿ ಲೋಕಣ್ಣ.ಮಾಜಿ ತಾಪಂ ಸದಸ್ಯ ಕುಬೇಂದ್ರಪ್ಪ.ಬಿದರಕೆರೆ ಗೋಬ್ಬರದ ಅಂಗಡಿ ವೀರೆಶ್.ಸೂರಲಿಂಗಪ್ಪ. ಮುಖಂಡ ಎನ್ ಎಸ್ ರಾಜಣ್ಣ . ಗುರುಮೂರ್ತಿ. ವೀರಸ್ವಾಮಿ .ಕೊಟ್ಟಿಗೆರೆ ತಿಪ್ಪೇಸ್ವಾಮಿ. ವಕೀಲರಾದ ಒಬಳೇಶ್..ಮಾಜಿ ಜಿಪಂ ರವರ ಪತಿ ವೆಂಕಟೇಶ್. ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!