ಹಿಂದು ಮುಸ್ಲಿಂ ಬಾಂಧವರು ಸಹೋದರ ರಂತೆ ಜೀವನ ನಡೆಸುತ್ತಿದ್ದೇವೆ ರಂಜಾನ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಪವಿತ್ರ ಹಬ್ಬ..!
ಶುಕ್ರದೆಸೆ ನ್ಯೂಸ್: ಜಗಳೂರು:- ತಾಲೂಕಿನಲ್ಲಿ ಹಿಂದು ಮುಸ್ಲಿಂ ಬಾಂಧವರು ಸಹೋದರರಂತೆ ಜೀವನ ನಡೆಸುತ್ತಿದ್ದೇವೆ ರಂಜಾನ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಪವಿತ್ರ ಹಬ್ಬವಾಗಿದೆ ಎಂದು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ.ಬಿ ದೇವೇಂದ್ರಪ್ಪ ಹೇಳಿದರು.
ಶನಿವಾರ ಪಟ್ಟಣದ ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ರಂಜಾನ್ ಹಬ್ಬವು ಮುಸ್ಲಿಂ ಸಮುದಾ ಯಕ್ಕೆ ಪವಿತ್ರ ಹಬ್ಬವಾಗಿದ್ದು ಉಳ್ಳವಾರು ಇಲ್ಲದವರಿಗೆ ನೀಡುವುದೆ ಹಬ್ಬದ ಸಂದೇಶವಾಗಿದೆ. ನಾನು ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೇನೆ ಮತ್ತು ಸಮುದಾಯದ ಅಭಿವೃದ್ದಿ ಗೆ ಒತ್ತು ನೀಡಿದ್ದೇನೆ ಎಂದರು ಹೇಳಿದರು.
ಈ ಸಂಧರ್ಭದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ದೇವೆಂದ್ರಪ್ಪ, ಪಕ್ಷೇತರ ಅಭ್ಯರ್ಥಿ ಎಚ್.ಪಿ ರಾಜೇಶ್ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ , ಶಕೀಲ್, ಹೊಮಣ್ಣ,ಇಮಾಮ್ ಆಳಿ, ಅನ್ವರ್ ಸಾಬ್ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿಲು ಭಾಗವಹಿಸಿ ಹಾಜರಿದ್ದರು.