ಕಾನಿಪ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಜೆ.ಓ ರವಿಕುಮಾರ್ ನಾಮಪತ್ರ ಸಲ್ಲಿಕೆ.
ಜಗಳೂರು ಸುದ್ದಿ,
ಜಗಳೂರು,ಡಿ.23:ಪಟ್ಟಣದ ಪತ್ರಕರ್ತರ ಭವನದಲ್ಲಿ ಕಾನಿಪ ಸಂಘದ ತಾಲ್ಲೂಕು ಅಧ್ಯಕ್ಷಸ್ಥಾನಕ್ಕೆ ಜೆ.ಓ ರವಿಕುಮಾರ್ ಅವರು ಚುನಾವಣೆ ಅಧಿಕಾರಿ ವೇದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.

ಡಿ.21ರಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು,ಡಿ.24 ರಂದು ಮಧ್ಯಾಹ್ನ 12 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯದಿನಾಂಕವಾಗಿದೆ.ಮಧ್ಯಾಹ್ನ 12.30 ರಿಂದ 3 ಗಂಟೆವರೆಗೆ ನಾಮಪತ್ರ ಪರಿಶೀಲನೆ,ಡಿ.25 ನಾಮಪತ್ರ ಹಿಂಪಡೆಯಲು ಹಾಗೂ ಅಂತಿಮಪಟ್ಟಿ ಪ್ರಕಟಣೆ,ಡಿ.28 ರಂದು 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮತದಾನ ನಡೆಯುತ್ತದೆ.ಮಧ್ಯಾಹ್ನ 2.30 ರಿಂದ ಮತದಾನ ಎಣಿಕೆ ಫಲಿತಾಂಶ ಪ್ರಕಟಣೆಗೊಳಿಸಲಾಗುವುದು ಎಂದು ಚುನಾವಣೆ ಅಧಿಕಾರಿ ವೇದಮೂರ್ತಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಜೈಮುನಿ, ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಎಸ್.ಚಿದಾನಂದ,ಪತ್ರಕರ್ತರಾದ ಹೆಚ್ ಆರ್ ಬಸವರಾಜ್,ರಾಜಪ್ಪ ಎಂ ವ್ಯಾಸಗೊಂಡನಹಳ್ಳಿ,ಸಿ.ಬಸವರಾಜ್,ಓ ಮಂಜಣ್ಣ,ಮಂಜಯ್ಯ,ಮಾರಪ್ಪ,ಮಾದಿಹಳ್ಳಿ ಮಂಜುನಾಥ್,ಮಹಾಲಿಂಗಪ್ಪ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!