ಶುಕ್ರದೆಸೆ ನ್ಯೂಸ್: ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಹೊಂದಿರುವ ಜಗಳೂರಿನ ದೊಡ್ಡ ಮಾರಿಕಾಂಬ ದೇವಿ ಜಾತ್ರಮಹೋತ್ಸವ 24 ರಿಂದ ವಿಜೃಂಭಣೆಯಿಂದ ಜರುಗಲಿದೆ. ಏಪ್ರಿಲ್ ದಿ 25 ರಿಂದ ದಿ 28 ರವರೆಗೆ ವಿವಿಧ ಪೂಜಾ ಕಾರ್ಯಗಳು ಜರುಗುವುವು. ಜಗಳೂರಿನ ಶಕ್ತಿ ದೇವತೆ ಮಹಾ ಪವಾಡ ಸದೃಶ ದೇವಿ ಮಹಿಮೆ ಹರಕೆ ಹೊತ್ತರೆ ಕಷ್ಟ ಕಾರ್ಪುಣ್ಯಿಗಳು ಮಾಯವಾಗುವುವು
ಜಗಳೂರು ಪಟ್ಟಣದ ಹೊರಕೆರೆಯಲ್ಲಿ ನೆಲೆಸಿರುವ ದೊಡ್ಡ ಮಾರಿಕಾಂಬ ದೇವಿಯ ಮಹಿಮೆ ಹೊಂದಿರುವ ಆದಿದೇವತೆ ಹೌದು. ಈ ದೇವತೆಗೆ ಖೀಲಾಮ್ಮ ದಡಾರದಮ್ಮ ಎಂಬ ಇಬ್ಬರು ಮಕ್ಕಳೊಂದಿಗೆ ಅಕ್ಕ ಪಕ್ಕ ಕೂರಿಸಿಕೊಂಡು ಮಹಾ ರಥೋತ್ಸವ ನಡೆಸಿಕೊಡುವ ದೇವಿಯೆ ದೊಡ್ಡ ಮಾರಿಕಾಂಬ ದೇವಿ ವೈಶಿಷ್ಟ್ಯತೆಯಿದೆ ತಲಾ ತಲಾಂತರದ ಪರಂಪರೆಯಿದೆ ಎಂದು ಪೂಜಾರಿ ಗಂಗಣ್ಣ ತಿಳಿಸುವರು .ದೊಡ್ಡ ಮಾರಮ್ಮನ ತಂಗಿಯನ್ನ ಸಣ್ಣ ಮಾರಮ್ಮ ಗಾಳಿ ಮಾರಮ್ಮ ದೇವಿ ಕಣ್ವಕುಪ್ಪೆಯಲ್ಲಿ ನೆಲೆಸಿದ್ದಾಳೆ ಎಂಬ ಪ್ರತೀತಿಯಿದೆ .ಪುನ ಜಾತ್ರೆ ಸಮಯದಲ್ಲಿ ಜಗಳೂರಿನಲ್ಲಿ ನೆಲೆಸುವಳು ದೊಡ್ಡ ಮಾರಿಕಾಂಬದೇವಿಯ ತವರು ಮನೆ ಜಮ್ಮಾಪುರ ಜಾತ್ರೆ ಮುಗಿದ ನಂತರ ಮೂರು ದಿನಗಳ ಕಾಲ ತವರು ಮನೆಗೆ ಹೋಗಿ ತವರು ಮನೆ ಉಡಿಅಕ್ಕಿ ಹಾಕಿಸಿಕೊಂಡು ಬರುವಳು ಎಂಬ ಪ್ರತೀತಿಯಿದೆ. ಭಕ್ರರ ಉದ್ದರಿಸುವ ಮಹಾತಾಯಿ ಭಕ್ತರಿಗೆ ಯಾವುದೆ ರೋಗರುಜಿನೆಗಳು ಬರದಂತೆ ಕಾಪಾಡುವಳು ಈ ದೇವೆತೆ ಬಗ್ಗೆ ಜನಪದರು ಹಾಡು ಕಟ್ಟಿ ಹಾಡುವ ಮೂಲಕ ದೇವಿಯ ಪರಂಪರೆ ಐತಿಹ್ಯಗಳ ಬಗ್ಗೆ ತಿಳಿಸುವರು. ಈ ದೇವೆತೆಗೆ ಕೈ ಮುಗಿದು ಹರಕೆ ಕಟ್ಟಿಕೊಂಡರೆ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುವುದು ರೋಗರುಜಿನೆಗಳು ಮಾಯವಾಗುವುವು ಕೈ ಮುಗಿದು ಬೇಡಿಕೊಂಡ ಇಷ್ಟಾರ್ಥ ಕೆಲಸಗಳು ಈಡೇರಿಸುವ ಮಹಾ ಮಹಿಮೆಯ ಗ್ರಾಮ ದೇವತೆ ಜಾತ್ರೆ ಇದೆ ತಿಂಗಳು ಏಪ್ರಿಲ್ 24 ರಂದು ಜಾತ್ರಮಹೋತ್ಸವ ಜಗಳೂರಿನಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಜಗಳೂರಿನ ಶಕ್ತಿ ದೇವತೆ ಹೊರಕೆರೆಯಲ್ಲಿರುವ ಶ್ರೀ ದೊಡ್ಡ ಮಾರಿಕಾಂಬ ದೇವಿ ಜಾತ್ರೆ ಪ್ರತಿ 5 ವರ್ಷಕೊಮ್ಮೆ ಜರುಗುವ ಮಾರಿಕಾಂಬ ಜಾತ್ರಮಹೋತ್ಸವ ಈ ಬಾರಿ ವಿಷೇಶತೆಯಿಂದ ಜರುಗುಲಿದೆ .ಈಗಾಗಲೇ ಮಾರಿಕಾಂಬ ದೇವರ ಸಮಿತಿಯವರು ಜಾತ್ರೆ ಪೂರ್ವತಯಾರಿ ನಡೆಸಿ ಪಟ್ಟಣದ ವಿವಿಧ ಮುಖ್ಯ ಬೀದಿಗಳಲ್ಲಿ ಲೈಟಿಂಗ್ಸ್ ಆಳವಡಿಸಿ ಜಗಳೂರು ಪಟ್ಟಣವು ಜಗಮಗಿಸುವಂತ ಐತಿಹಾಸಿಕ ನಾಡ ಹಬ್ಬದಂತೆ ಜಗಳೂರು ಜಾತ್ರೆ ಸಾಗುವುದು. ಅದರಲ್ಲೂ ಜಗಳೂರು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜಾತ್ರೆ ಜರುಗುವುದರಿಂದ ಒಂದೆಡೆ ಚುನಾವಣೆ ಕಾವು ರಂಗು ರಂಗಿನಲ್ಲಿ ಜಾತ್ರಮಹೋತ್ಸವ ಜರುಗುವುದರಿಂದ ಈ ಬಾರಿ ಯಾರಿಗೆ ಅದೃಷ್ಟದ ಮಾಲೆ ಸಿಗುವುದು ಮಹಾತಾಯಿ ಯಾರಿಗೆ ಪ್ರಸಾದ ನೀಡುವಳು ಎಂದು ಕಾದು ನೋಡಬೇಕಾಗಿದೆ.. ಒಟ್ಟಾರೆ ಈ ಬಾರಿ ಜಗಳೂರು ಜಾತ್ರೆ ನಡೆಯುವುದೆ ಒಂದು ವೈಶಿಷ್ಟ್ಯ ಈಗಿನ ಹೊರಕೆರೆ ದೇವಿಯ ವಿಶಾಲವಾದ ಹೊರಾಂಗಣದಲ್ಲಿ ವಿವಿಧ ಲೈಟಿಂಗ್ಸ್ ಗಳಿಂದ ದೇವಾ ಮಂದಿರ ಆಲಂಕಾರಗೊಂಡು ಸಿಂಗಾರಗೊಳ್ಳುವ ನಗರ ದೇವತೆ ಶ್ರೀ ದೊಡ್ಡಮಾರಕಾಂಬದೇವಿ ಜಾತ್ರಮಹೋತ್ಸವ ಜರುಗುವುದು. ದೇವಿಗೆ ವಿಶೇಷ …. ಪೂಜಾಕೈಂಕಾರ್ಯಗಳು.ಜರುಗುವುವು. .ಏಪ್ರಿಲ್ ದಿನಾಂಕ 25_4_2023 ಮಂಗಳವಾರದಿಂದ ದಿ 28 ರವರೆಗೆ ವಿವಿಧ ಪೂಜಾ ಕಾರ್ಯಗಳು ಜರುಗುವುವು. ದಿ 25 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ಈಗಿನ ಪಂಪಹೌಸ್ ಬಳಿ ಗಂಗಾಪೂಜೆ ನೇರವೇರುವುದು ನಂತರ ದಿ.26_4_2023 ರಂದು ಬುಧವಾರ ಭಕ್ತಾಧಿಗಳಿಂದ ದೇವಿಗೆ ಇಷ್ಟರ್ಥಗಳಿಂದ ಹರಕೆ ಮೀಸಲು ಒಪ್ಪಿಸುವುದು. ದಿ 27_4_2023 ರ ಮಧ್ಯಾಹ್ನ 4_30 ಸಮಯಕ್ಕೆ ದೇವತಾಕಾರ್ಯ ಸೇರಿದಂತೆ 28_4_2023 ಶುಕ್ರವಾರ ಸಂಜೆ 5,30 ರ ಸಮಯದಲ್ಲಿ ಮಾರಿಕಾಂಬ ರಥೋತ್ಸವ ಜರುಗುವುದು . ಕ್ರೀಡಾ ಪಂದ್ಯವಳಿ ಮನೋರಂಜನೆ ದಿ 27 .28 ರ ಎರಡು ದಿನಗಳ ಕಾಲ ಕಾಟಾ ನಿಕಾಲಿ ಜಂಗಿ ಕುಸ್ತಿ ಪಂದ್ಯಗಳಿರುತ್ತವೆ . ಇಲ್ಲಿ ನಡೆಯುವ ಪಂದ್ಯಗಳು ಜನರಿಗೆ ಮನೋರಂಜನೆ ನೀಡುವವು ಪಂದ್ಯದಲ್ಲಿ ಜಯಗಳಿಸಿದ ತಂಡಗಳಿಗೆ ಆಕರ್ಷಕ ಬಹುಮಾನಗಳಿರುತ್ತವೆ .ಒಟ್ಟಾರೆ ಈ ಬಾರಿ ಜಗಳೂರಿನ ಜಾತ್ರ ಮಹೋತ್ಸವದ ವೈಭವದ ಮೆರುಗು ಭಕ್ತಾಧಿಗಳ ಮಹಾಪೂರವೇ ಸಾಗರದಂತೆ ಸಾಗಲಿದೆ ಎಂದು ಮಾರಿಕಾಂಬ ಭಕ್ತಮಂಡಳಿ ತಿಳಿಸಿದ್ದಾರೆ