ಭ್ರಷ್ಟ ಕೋಮುವಾದ ಸೃಷ್ಠಿಸುವ ಪಕ್ಷ ಬಿಜೆಪಿ ಸೋಲಿಸಿ ನನಗೆ ಒಂದು ಬಾರಿ ನಿಮ್ಮಗಳ ಸೇವೆ ಮಾಡಲು ಆವಕಾಶ ನೀಡಿ ನಿಮ್ಮ ಮನೆ ಮಗನಾಗಿ ಕೆಲಸ ಮಾಡುವೆ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವಿಶ್ವಾಸ

ಶುಕ್ರದೆಸೆ ನ್ಯೂಸ್: ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾದ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಹಾಗೂ ಬಿ ಜೆ ಪಿ ಶಾಸಕ ಎಸ್ ವಿ ರಾಮಚಂದ್ರರವರ ಆಡಳಿತವನ್ನ ಈಗಾಗಲೇ ತಾಲ್ಲೂಕಿನ ಜನತೆ ನೋಡಿದ್ದು ಪುನ ಅವರಿಗೆ ಮತ ನೀಡಿದೆ ನಮ್ಮಂತ ಹೊಸಬರಿಗೆ ಒಂದು ಬಾರಿ ಶಾಸಕನಾಗಲು ಆವಕಾಶ ಕಲ್ಪಿಸಿದರೆ ನಿಮ್ಮ ಮತ್ತು ಕ್ಷೇತ್ರದ ಅಗತ್ಯ ಸೇವೆಯನ್ನು ಕಸಗೂಡಿಸಿ ಕೆಲಸ ಮಾಡುವೆ ,ಕಾಂಗ್ರೆಸ್ ಪಕ್ಷ ನನಗೆ ಈ ಬಾರಿ ಬಿಫಾರಂ ನೀಡಿದ್ದು. ನನಗೂ ಒಂದು ಬಾರಿ ಶಾಸಕ ನಾಗುವ ಅವಕಾಶ ಮಾಡಿ ಕೊಟ್ಟರೆ ಕ್ಷೇತ್ರದ ಅಭಿವೃದ್ದಿಯೆಂಬ ಗಂಟೆ ಬಾರಿಸುವೆ ನಾನು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ ನಿಮ್ಮಗಳ ಅಗತ್ಯ ಸೇವೆ ಮಾಡಲು ಬಂದಿರುವೆ ಎಂದು ಮತದಾರರಲ್ಲಿ ಮತ ಯಾಚಿಸಿದರು. ತಾಲ್ಲೂಕಿನ ಗಡಿ ಗ್ರಾಮವಾದ ಚಿಕ್ಕ ಉಜ್ಜಿನಿ ಗ್ರಾಮದಲ್ಲಿ‌ ಮೆ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಪ್ರಚಂಡ ಬಹುಮತಗಳಿಂದ ಗೆಲ್ಲಿಸಿದರೆ ಕ್ಷೇತ್ರದಲ್ಲಿ ಯಾರು ಕಂಡರಿಯದ ಸೇವೆ ಮಾಡುವೆ ಎಂದು ಗ್ರಾಮ ದೇವರ ದರ್ಶನ ಪಡೆದು ಕಾಂಗ್ರೆಸ್ ಪಕ್ಷದ ಬಾವುಟದೊಂದಿಗೆ ಮತದಾರರಿಗೆ ಪಕ್ಷದ ಕರ ಪತ್ರ ನೀಡಿ ಕಾರ್ಯಕರ್ತರ ಆಪಾರ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತ ಬೇಟೆಗೆ ಚಾಲನೆ ನೀಡಿದರು .

ಜಗಳೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು ಈಗಿನ ಬಿ ಜೆ ಪಿ ಶಾಸಕ ಎಸ್ ವಿ ರಾಮಚಂದ್ರರವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಬಿಜೆಪಿಗೆ ಮಾರಾಟವಾಗಿದ್ದರು ಈಗಾಗಲೇ ನಾಲ್ಕು ವಿಧಾನಸಭಾ ಚುನಾವಣೆ ಏಕೆ ನಡೆದವು. ಅವರು ಮಾಡಿದ ಪಕ್ಷಾಂತರ ರಾಜಕಾರಣದಿಂದ ಕಾಂಗ್ರೆಸ್ ತೊರೆದ ಪರಿಣಾಮ ಅನಾಥವಾಗಿದ್ದು. ಇದೀಗ ಆತಂಕಬೇಡ ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದ .ನಾನು ರಾಜನಾಗಲು ಅಧಿಕಾರ ಬೇಡ ನಿಮ್ಮ ಸೇವಕನಾಗಲು ನಿಮ್ಮ ಅಮೂಲ್ಯ ಮತ ನೀಡಿ ಜಯಶೀಲರನ್ನಾಗಿ ಮಾಡಲು ಮೆ 10 ರಂದು ನನಗೆ ಮತದಾನ ಮಾಡಿ ಎಂದು ಮತದಾರರಲ್ಲಿ ಕೈ ಮುಗಿದು ಮತ ಯಾಚಿಸಿದರು.

ಬರದ ನಾಡಿನಲ್ಲಿ ಅಕ್ಷರ ಬೀಜ ಬಿತ್ತಿದ ನಾಲಂದ ಕಾಲೇಜಿನ ವಿದ್ಯಾರತ್ನ‌ ಡಾ ತಿಪ್ಪೇಸ್ವಾಮಿ ನೆನೆದು ಭಾವುಕರಾದ ದೇವೆಂದ್ರಪ್ಪ :ನನಗೆ ಆಶ್ರಯ ನೀಡಿ ಅಸರೆಯಾದ ವಿದ್ಯಾರತ್ನ ನನ್ನ ಗುರುಗಳ ಅಶಿರ್ವಾದದಿಂದ ಶಿಕ್ಷಣ ಉದ್ಯೋಗ ಒದಗಿಸಿದ ನನ್ನ ಆರಾದ್ಯ ದೇವರು ವಿದ್ಯಾರತ್ನ ಟಿ. ತಿಪ್ಪೇಸ್ವಾಮಿರವರು ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆಯಲ್ಲಿ 33 ವರ್ಷಗಳ ಕಾಲ ಸೇವಕನಾಗಿ ಸೇವೆ ಮಾಡಿ ಇದೀಗ ನಿಮ್ಮಗಳ ಸೇವೆ ಮಾಡಲು ಬಂದಿರುವೆ ಎಂದು ನೆನೆದು ಭಾವುಕರಾಗದರು.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಸ್ ಟಿ ಘಟಕದ ಕೆಪಿ ಪಾಲಯ್ಯ ಮಾತನಾಡಿದರು ,ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಿಡಿಯದ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಗೆ ಪಕ್ಷ ಎರಡು ಬಾರಿ ಕಾಂಗ್ರೆಸ್ ಟಿಕೇಟ್ ನೀಡಿ ಒಂದು ಬಾರಿ ಶಾಸಕರನ್ನಾಗಿ ಮಾಡಿದ ಕೀರ್ತಿಯಿದೆ . ಮತ್ತೊಂದು ಬಾರಿ ಸೋಲು ಅನುಭವಿಸಿದ್ದಾರೆ .ಆದರೆ ಪಕ್ಷ ತಿರ್ಮಾನಕ್ಕೆ ಬದ್ದತೆ ಬೇಕು ಎಂದು ಗುಡುಗಿದರು. ಹೊರಗಿನ ಅನ್ಯ ತಾಲೂಕಿನ ಎಸ್.ವಿ.ರಾಮಚಂದ್ರ ರವರನ್ನು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದೇವೆ.ಈ ಬಾರಿ ಕಷ್ಟಗಳ ಮಧ್ಯೆ ಪಕ್ಷಕ್ಕಾಗಿ ಮತ್ತು ಕಾಂಗ್ರೆಸ್ ನಿಲುವಿನ ಹೋರಾಟದಲ್ಲಿ ಬೆಳೆದ ಬಿ.ದೆವೇಂದ್ರಪ್ಪರಂತ ಹೊಸಬರನ್ನು ಗೆಲ್ಲಿಸಲು ಕಂಕಣ ಬದ್ದರಾಗುವಂತೆ ಜನರಿಗೆ ತಿಳಿಸಿದರು..57 ಕೆರೆ ತುಂಬಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಸಿರಿಗೆರೆ ಶ್ರೀಗಳ ಸಹಕಾರವಿದೆ.ಆದರೆ ನೀರಾವರಿ ಯೋಜನೆಗಳನ್ನು ಹಾಲಿ ಶಾಸಕ ಹಾಗೂ ಮಾಜಿ ಶಾಸಕರು ಸ್ವಯಂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ,ಬಡವರ್ಗದವರ ಧ್ವನಿಯಾಗಿದ್ದ ಕ್ಷೇತ್ರದಲ್ಲಿ ತನ್ನದೆಯಾದ ವ್ಯಕ್ತಿತ್ವದೊಂದಿಗೆ ಮಾಜಿ ಶಾಸಕ ಜಿ ಹೆಚ್ ಆಶ್ವರೆಡ್ಡಿಯವರು ಅವರ ಆಡಳಿತಾವಧಿಯಲ್ಲಿ ಈ ಕ್ಷೇತ್ರಕ್ಕೆ ಗುರುತರವಾದ ಆಡಳಿತಕ್ಕೆ ಸಾಕ್ಷಿಯಾಗಿದ್ದಾರೆ , ಮಾಜಿ ಸಂಸದ ಚನ್ನಯ್ಯ ಒಡೆಯರ್ ಜನಪರ ಮುತ್ಸದ್ದಿ ರಾಜಕಾರಣಿಗಳುನ್ನು ನಾವು ಸ್ಮರಿಸಬೇಕಿದೆ.ಅವರ ಸಹಕಾರ,ಕಾಂಗ್ರೆಸ್ ಪಕ್ಷದಿಂದ ನಾನು ರಾಜ್ಯನಾಯಕನಾಗಿರುವೆ. ಕಳೆದ ಬಾರಿ ಸ್ಪರ್ಧಿಸಿದ ಮಾಜಿ ಶಾಸಕರು 30 ಸಾವಿರ ಅಂತರದಿಂದ ಸೋಲು ಅನುಭವಿಸಿದ್ದನ್ನು ಕೆಪಿಸಿಸಿ ಕಛೇರಿಯಲ್ಲಿ ರಾಷ್ಟ್ರ ನಾಯಕ ಕಾಂಗ್ರೆಸ್ ವರೀಷ್ಠ ಸರ್ಜಿವಾಲ ಪ್ರಶ್ನಿಸಿದ್ದರು. ಟಿಕೇಟ್ ವಿಚಾರದಲ್ಲಿ ನನ್ನ ಪಾತ್ರವಿಲ್ಲ.ಸಜ್ಜನಿಕೆ ವ್ಯಕ್ತಿತ್ವದ ಕೆ.ಪಿ. ಪಾಲಯ್ಯ ಎಲ್ಲಾ ಧರ್ಮ ಜಾತಿಗಳ ಮನೆಯಮಗ ಅವರಿಗೆ ಮುಂದಿನ ದಿನಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯವಿದೆ ಎಂದು ಪ್ರಶಂಸಿದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಆಡಳಿತಾವಧಿಯಲ್ಲಿ 159 ಪ್ರಣಾಳಿಕೆಗಳನ್ನು ಈಡೇರಿಸಿದ ಹೆಗ್ಗಳಿಕೆ ನಮಗಿದೆ.ಈ ಬಾರಿ 4 ಗ್ಯಾರಂಟಿ ಯೋಜನೆ ಭರವಸೆ ನೀಡಿದ್ದೇವೆ.ಆದರೆ ಬಿಜೆಪಿ ಪಕ್ಷದ ಭರವಸೆಯ ಪ್ರಣಾಳಿಕೆಯಲ್ಲಿ ಕೇವಲ 45 ಈಡೇರಿಸಿಲ್ಲ ಎಂದು ಆರೋಪಿಸಿದರು.

ಅಮರ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಮಧು ಕುಮಾರ್ ಮಾತನಾಡಿದರು ,ನಮ್ಮ ಸಂಸ್ಥೆಗೂ ಮತ್ತು ದೇವೆಂದ್ರಪ್ಪರವರಿಗೂ ಅವಿನಾಭಾವ ಸಂಬಂಧವಿದೆ ಕಡು ಕಷ್ಟದಿಂದ ಬಡತನದಲ್ಲಿ ಜನಿಸಿ ಶಿಕ್ಷಣ ಪಡೆದು ನಮ್ಮ ಕಾಲೇಜಿನಲ್ಲಿ ಸೇವೆ ಮಾಡಿ ಇದೀಗ ಶಾಸಕ ಸ್ಥಾನಕ್ಕೆ ಆಯ್ಕೆಯಾಗಲು ಕಣದಲ್ಲಿರುವ ದೇವೆಂದ್ರಪ್ಪ ರವರ ಸಾವಿರ ಕಷ್ಟದ ಮೆಟ್ಟಿಲುಗಳ ಹಿಂದೆ ಅವರ ಆಪಾರ ಶ್ರಮವಿದೆ.ಕಾಂಗ್ರೆಸ್ ಪಕ್ಷದ ದೇವೆಂದ್ರಪ್ಪ ರವರಿಗೆ ಮತ ನೀಡಿ ಎಂದು ಮತ ಯಾಚನೆಯಲ್ಲಿ ತೋಡಗಿದ್ದರು.

ಕ್ಷೇತ್ರದ 20ಕ್ಕೂ ಹೆಚ್ಚು ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಸಂಗ ಕಂಡು ಬಂದಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹ ಮ್ಮದ್,ಎಸ್.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾ ಗಟ್ಟೆ ಶೇಖರಪ್ಪ.ಪ್ರಚಾರ ಸಮಿತಿ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ ಅಮರ ಭಾರತಿ ವಿದ್ಯಾಕೇಂದ್ರದ ಕಾರ್ಯದರ್ಶಿ ಮಧು ಕುಮಾರ್,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್,ಮಹಮ್ಮದ್ ಅಲಿ, ಮುಖಂಡರಾದ ಓಮಣ್ಣ ಗುತ್ತಿದುರ್ಗ ರುದ್ರೇಶ್.ಅಹಮ್ಮದ್ ಅಲಿ, ಚಿಕ್ಕ ಉಜ್ಜಿನಿ ಬರಮೇಶ್. ಸಾವಿತ್ರಮ್ಮ,ಸೇರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!