ದಾವಣಗೆರೆ:
ದಿನಾಂಕ 29/12/2025 ರಂದು ದಾವಣಗೆರೆಯ ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಸಂಸ್ಕಾರ ಭಾರತಿ ಕರ್ನಾಟಕ ದಾವಣಗೆರೆ, ಲಯನ್ಸ್ ಕ್ಲಬ್ ದಾವಣಗೆರೆ ಹಾಗೂ ಜಿಲ್ಲಾ ಬ್ಯಾಂಕ್ ನೌಕರರ ಸಂಘ ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಕವಿ ಕುವೆಂಪು ಜನ್ಮ ದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆ ಏರ್ಪಡಿಸಲಾಗಿತ್ತು
ಕಾರ್ಯಕ್ರಮವನ್ನ ಜಗಳೂರು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಉದ್ಗಾಟಿಸಿ ಮಾತನಾಡಿದರು ಕನ್ನಡ ನಾಡಿನ ಅದಮ್ಯ ಚೇತನ ಜ್ಘಾನಪೀಠ ಪ್ರಶಸ್ತಿ ಪುರಸ್ಕೃತರು ಯುಗದ ಕವಿ ಜಗದ ಕವಿ ವಿಶ್ವಮಾನವ ಎಂದೇ ಪ್ರಖ್ಯಾತಿ ಪಡೆದ ಕುವೆಂಪುರವರಿಂದ ಕನ್ನಡ ನಾಡು ಸಮೃದ್ದ ಮತ್ತು ಸಂಪತ್ಬರಿತವಾಗಿದೆ.ಇಂತ ವಿನೂತನ ಕಾರ್ಯಕ್ರಮದಲ್ಲಿ ಎನ್ ಟಿ ಎರ್ರಿಸ್ವಾಮಿ ಕೃತಿ ಬಿಡುಗಡೆ ವಿಶಿಷ್ಟವಾಗಿದೆ ಎಂದರು.
ಶ್ರೀ ಎನ್ ಟಿ ಎರ್ರಿಸ್ವಾಮಿಯವರ ವಿರಚಿತ 5 ಪುಸ್ತಕ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಕವಿ ಕುವೆಂಪು ರಚಿತ ಭಾವಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಭಾವಪೂರ್ಣವಾಗಿ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.
ವಿಶೇಷ ಚೇತನ ಶಿಕ್ಷಕರಾಗಿದ್ದು, ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ್ಯ ದಾವಣಗೆರೆಯ ಕ್ರಿಯಾಶೀಲ ಹಾಗೂ ಬಹುಮುಖ ಪ್ರತಿಭೆಯಾದ ಹನುಮಂತನಾಯ್ಕ ಸಿ ನಾಗರಕಟ್ಟೆ ಅವರು ತಮ್ಮ ಸೊಗಸಾದ ಗಾಯನದಿಂದ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾನ್ಯ ಶ್ರೀ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ, ಶಾಸಕರು, ಜಗಳೂರು ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಶ್ರೀ ವಾಮದೇವಪ್ಪ, ಗೌರವ ಕಾರ್ಯದರ್ಶಿ ಬಿ ದಿಳ್ಯಪ್ಪ ಕೋಶಧ್ಯಕ್ಷರು ರಾಘವೇಂದ್ರ ನಾಯರಿ,ಡಾ ಬಿ ಆರ್ ರವಿಕಾಂತೇ ಗೌಡ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್(IPS)ಡಾ ದಾದಾಪೀರ್ ನವಿಲೇ ಹಾಳ್. ಎಲ್ ಎಸ್ ಪ್ರಭುದೇವ್, ಕೆ ಬಿ ಪರಮೇಶ್ವರಪ್ಪ ಹಾಗೂ ಇತರೆ ಗಣ್ಯ ಅತಿಥಿಗಳು ಅವರ ಗಾಯನವನ್ನು ಮೆಚ್ಚಿ ಅಭಿನಂದನೆ ವ್ಯಕ್ತಪಡಿಸಿ, ಹನುಮಂತ ನಾಯ್ಕ ಸಿ ಅವರನ್ನು ಸನ್ಮಾನಿಸಿದರು.
ಸಭಿಕರು ಕೂಡ ದೀರ್ಘ ಕರತಾಡನದ ಮೂಲಕ ಗೌರವ ಸಲ್ಲಿಸಿದರು.
