10 ಕೋಟಿ ರೂಗಳಲ್ಲಿ ಪಟ್ಟಣದ ಹೃದಯ ಬಾಗದಲ್ಲಿರುವ ಕೆರೆಯನ್ನ ಪಕ್ಷ ಬೇದ ಮರೆತು ಅಭಿವೃದ್ದಿಗೆ ಒತ್ತು ನೀಡುವೆ ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು
ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೆರೆಗೆ ಭಾಗಿನ ಅರ್ಪಣೆ ಶುದ್ದ ನೀರಿನ ಘಟಕ ಲೋಕರ್ಪಣೆ ಮಹಿಳಾ ಸಮುದಾಯ ಭವನ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದರು ನಾನು ಶಾಸಕನಾಗಿ ಕೇವಲ ಎರಡು ವರ್ಷಗಳಲ್ಲಿ ಗ್ರಾಮೀಣ ರಸ್ತೆಗಳು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ಪಟ್ಟಣದ ಮುಖ್ಯರಸ್ತೆ ಅಗಲಿಕರಣ ಮಾಡಲು ನಿಷ್ಟುರ ಹೋರಾಟ ಮಾಡಿದ್ದೆನೆ ಪಕ್ಷಬೇದ ಜಾತಿ ಮತಬೇದ ಹೋರಾಟದ ಅಭಿವೃದ್ದಿಯೆ ನನ್ನ ಸಂಕಲ್ಪ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಮ್ಮ ಚಿಕ್ಕಮ್ಮನಹಟ್ಟಿ ಗ್ರಾಮದ ಕೆರೆ ರಾಜ್ಯಕ್ಕೆ ಮಾದರಿ ಕೆರೆಯನ್ನಾಗಿ ನಿರ್ಮಿಸಿದ್ದೆವೆ.10 ಕೋಟಿ ರೂಗಳಲ್ಲಿ ಜಗಳೂರು ಪಟ್ಟಣದ ಹೃದಯ ಬಾಗದಲ್ಲಿರುವ ಕೆರೆಯನ್ನ ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು..
ಮಾಜಿ ಶಾಸಕ ಟಿ. ಗುರುಸಿದ್ದನಗೌಡ್ರು ಮಾತನಾಡಿ ಧರ್ಮಕಾರ್ಯ ಮಾಡುವ ದರ್ಮಸ್ಥಳ ವೀರೇಂದ್ರ ಹೆಗಡೆಯವರಿಗೆ ಸರ್ಕಾರಗಳು ನೊಬೇಲ್ ಪ್ರಶಸ್ತಿ ನೀಡಲಿ ಎಂದರು ಗೋಪಾಲಕೃಷ್ಣ ಗೋಕಲೆ ಅವರ ದೂರ ದೃಷ್ಠಿಯಂತೆ ನಾನು ಶಾಸಕನಾದ ಅವಧಿಯಲ್ಲಿ ಹೆಚ್ಚು ಚೆಕ್ ಡ್ಯಾಂ ನಿರ್ಮಾಣಕ್ಕೆ ಶ್ರಮಿಸಿದ್ದೆನೆ.ಬಿಸ್ತುವಳ್ಳಿ ಗ್ರಾಮಕ್ಕೆ ಇತಿಹಾಸವಿದೆ .ಅಂದು ಪಾಳೆಗಾರರ ಕಾಲದಲ್ಲಿ ಕಟ್ಟಿಸಿದ ದೇವಾಸ್ಥಾನಗಳನ್ನ ಕಾಪಾಡಿಕೊಂಡು ಬಂದ ಕೀರ್ತಿ ನಮ್ಮ ಲಿಂಗಾಯ್ತ ಸಮುದಾಯಕ್ಕೆ ಸೇರಿದೆ.ಕ್ಷೇತ್ರದ ಕೆರೆಗಳು ತುಂಬಿವೆ ಆದರೆ ಮುಂದಿನ ಶಾಶ್ವತ ನಿರ್ವಹಣೆಗೆ
ಜಿಲ್ಲಾಧಿಕಾರಿ ಅದ್ಯಕ್ಷತೆಯಲ್ಲಿ ಕೆರೆ ತುಂಬಿಸುವ ಯೋಜನೆ ಸುವ್ಯವಸ್ಥೆತವಾಗಿ ಸಾಗಲು ಸಮಿತಿ ಮಾಡಬೇಕು ಕೆರೆ ತುಂಬಿಸುವ ಯೋಜನೆ ಸಾರ್ಥಕವಾಗಿದೆ ಆದರೆ ವಿದ್ಯುತ್ ಸಮಸ್ಯೆಯಾಗದಂತೆ ಯೋಜನೆ ರೂಪಿಸಬೇಕೆಂದರು .
ಜಗಳೂರು ಪ್ರದೇಶಕ್ಕೆ ಅಂದು ಯುವಕರಿಗೆ ಕನ್ಯ ಕೊಡದ ಪರಿಸ್ಥಿತಿಯಿತ್ತು ಇದೀಗ ಸಿರಿಗೆರೆ ಶ್ರೀಗಳ ಅಶಿರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ವರವಾಗಿದೆ ಮುಂದೊಂದು ದಿನ ಜಗಳೂರು ಅಡಿಕೆ ನಾಡು ಆಗಲಿದೆ.ಬಿಸ್ತುವಳ್ಳಿ ಕೆರೆ ಅಪ್ಪರ್ ಭದ್ರಾ ಯೋಜನೆಗೆ ಕೈಬಿಟ್ಟು ಹೋಗಿತ್ತು ಪುನ ನಮ್ಮ ಅವಧಿಯಲ್ಲಿ ಅಪ್ಪರ್ ಭದ್ರಾ ಯೊಜನೆಗೆ ಸೇರಿಸಲಾಯಿತ್ತು .
ನನ್ನ ಅವಧಿಯಲ್ಲಿ ಪ್ರಾರಂಭ ಮಾಡಿದ ಅಪ್ಪರ್ ಭದ್ರಾ ಯೋಜನೆ ಕಾಮಗಾರಿಗೆ ಅನುದಾನ ಕೊರತೆಯಿಂದ ಮಂದಗತಿಯಲ್ಲಿ ಸಾಗುತ್ತಲಿದೆ .ತ್ವರಿತವಾಗಿ ಚುರುಕುಗೋಳಿಸಲು ಅನುದಾನ ನೀಡಲು ಸರ್ಕಾರಗಳ ಮೇಲೆ ಒತ್ತಡ ತರುವೆ.ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ
ಜಲತಜ್ಘರಾದ ದೇವರಾಜ್ ರೆಡ್ಡಿ ಮಾತನಾಡಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಂದರ ಕೆರೆ ಅಭಿವೃದ್ದಿಪಡಿಸಲಾಗಿದೆ. ಕೆರೆಯನ್ನ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತೆ ಕರೆ ನೀಡಿದರು. ನೀರು ಅಮೂಲ್ಯವಾದದ್ದು ನಮ್ಮ ಗ್ರಾಮದಲ್ಲಿ ಬಿದ್ದ ಮಳೆ ನೀರು ನಮ್ಮಲ್ಲೆಯೇ ಉಳಿಯುವಂತೆ ಮಾಡಿ ಕೆರೆಯನ್ನ ಸ್ವಚವಾಗಿಡಲು ಕೈಜೋಡಿಸುವಂತೆ ಸಲಹೇ ನೀಡಿದರು
ಪ್ರಾಸ್ತವಿಕವಾಗಿ ಪ್ರಾಂಶುಪಾಲರಾದ ಬಿ ಎನ್ ಎಂ ಸ್ವಾಮಿ ಮಾತನಾಡಿದರು .ಮುಖಂಡ ಬಿಸ್ತುವಳ್ಳಿ ಬಾಬು ವಂದಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ಕೆಂಚಪ್ಪ. ಶ್ರೀ ಧರ್ಮಾಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ದೇಶಕ ಪ್ರವೀಣಕುಮಾರ್ .ಗ್ರಾಮ ಪಂಚಾಯ್ತಿ ಸದಸ್ಯರಾದ ಲೋಲಾಕ್ಷಮ್ಮ.ಶ್ರೀ ಧ.ಗ್ರಾ.ಯೋಜನಾಧಿಕಾರಿ.ಪಿಡಿಓ ಶಿವಕುಮಾರ್. ವಾಸಂತಿ.ಗ್ರಾಮ ಪಂಚಾಯಿತಿ ಸದಸ್ಯರಾದ ಬೋಗೇಶ್ವರಪ್ಪ. ಕಾಂಗ್ರೇಸ್ ಮುಖಂಡರಾದ ಬಿ.ಮಹೇಶ್ವರಪ್ಪ . ಒಕ್ಕೂಟದ ಅದ್ಯಕ್ಷರಾದ ಕವಿತಾ.ಗ್ರಾಮಸ್ಥರಾದ ರೆವಣಸಿದ್ದಪ್ಪ .ರತ್ನಶೇಖರಪ್ಪ.ಮುಂತಾದವರು ಹಾಜುರಿದ್ದರು.

