ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ಪಟ್ಟಣದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ರೋಡ ಶೋ ಮೂಲಕ ಮತ ಬೇಟೆ
ಶುಕ್ರದೆಸೆ ನ್ಯೂಸ್: ಪಟ್ಟಣಕ್ಕೆ ಮಂಗಳವಾರ ಬಿಜೆಪಿ ಪಕ್ಷದ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಸ್ಟೇಡಿಯಂ ನಲ್ಲಿ ಎಲೆಕ್ಯಾಪ್ಟ್ರ್ ಮೂಲಕ ಪಟ್ಟಣಕ್ಕೆ ಅಗಮಿಸಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ರೋಡ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಶಾಸಕ ಎಸ್ ವಿ ಅರ್ ಪರ ಮತಯಾಚನೆ ಮಾಡಿ ನಂತರ ಕಾರ್ಯಕರ್ತರುನ್ನುದ್ದೆಶಿಸಿ ಮಾತನಾಡಿದರು. ರಾಜ್ಯದಲ್ಲಿ 14೦ ಕ್ಕೂ ಹೆಚ್ಚು ಕ್ಷೇತ್ರದಲ್ಲಿ ನಾನು ಸಂಚರಿಸಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದೆವೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪುನ ಅಧಿಕಾರ ಗದ್ದುಗೆ ಹಿಡಿಯುವುದು ಶತ ಸಿದ್ದ ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರ ಅತ್ಯಂತ ಬಹುಮತದಿಂದ ಜಯಗಳಿಸುವುದು ನಿಶ್ಚಿತ
ಜಗಳೂರು ಪ್ರದೇಶಕ್ಕೆ ನೀರಾವರಿ ಸೌಲಭ್ಯಕ್ಕೆ ಒತ್ತು ; ನಮ್ಮ ಆಡಳಿತಾವಧಿಯಲ್ಲಿ ಶಾಸಕ ರಾಮಚಂದ್ರರವರು ನಮಗೆ ಒತ್ತಡ ತಂದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ 57 ಕೆರೆ ತುಂಬಿಸುವ ಯೋಜನೆ ಹಾಗೂ ಅಪ್ಪರ್ ಭದ್ರಾ ನೀರಾವರಿ ಸೌಲಭ್ಯಗಳನ್ನು ಅನುಷ್ಠಾನ ಮಾಡಿ ಈ ಬಾಗದ ರೈತರ ಜೀವನಾಡಿ ನಾಡಿಮಿಡಿತ ಅರಿತ ನಾವು ನೀರಾವರಿ ಸೌಲಭ್ಯ ಒದಗಿಸಿ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಅನುದಾನವನ್ನು ನಮ್ಮ ಸರ್ಕಾರದಿಂದ ಕಲ್ಪಿಸಲಾಗಿದೆ. ಜಗಳೂರಿಗೆ 3500 ಸಾವಿರ ಕೋಟಿ ಅನುದಾನ ನೀಡಿದ್ದು ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಷೇತ್ರಕ್ಕೆ ಅನುದಾನ ಲಭ್ಯವಾಗಿದೆ. ನಮ್ಮ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ ಗೆಲುವು ನಿಶ್ಚಿತ ಕಾರ್ಯಕರ್ತರು ಅವರ ಕೈ ಬಲಪಡಿಸಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಜಿ ಎಂ ಸಿದ್ದೇಶ್ವರ ಮಾತನಾಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತದಿಂದ ರಾಜ್ಯಕ್ಕೆ ಅನೇಕ ಯೋಜನೆಗಳು ವರದಾನವಾಗಿದ್ದು ಕ್ಷೇತ್ರದಲ್ಲಿ ಶಾಸಕ ಎಸ್ ವಿ ರಾಮಚಂದ್ರ ಉತ್ತಮ ಆಡಳಿತ ನೀಡುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ.
ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ ನನ್ನ ಬೆನ್ನಿಗೆ ನಿಂತು ನಾನು ಮಾಡುವಂತ ಅಭಿವೃದ್ಧಿ ಕೆಲಸಗಳಿಗೆ ಬೆಂಬಲವಾದ ಸಂಸದರು .ಮಾಜಿ ಮುಖ್ಯಮಂತ್ರಿಗಳ ನೀಡಿರುವ ಮಹತ್ವದ ಯೋಜನೆಗಳು ಜನರ ಕಣ್ಣಿಗೆ ಕಾಣಲಿವೆ ಈ ಬಾರಿ ನನಗೆ ಮತ ನೀಡಿದರೆ ಮತ್ತೂಷ್ಟು ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನವೀನ್ ಕುಮಾರ್.ಶಾಸಕರ ಪತ್ನಿ ಇಂದಿರಾ ರಾಮಚಂದ್ರ. ಬಿಜೆಪಿ ಅಧ್ಯಕ್ಷ ಮಹೇಶ್.ಮಾಜಿ ಜಿಪಂ ಸದಸ್ಯ ಎಸ್ ಕೆ ಮಂಜಣ್ಣ.ಸೇರಿದಂತೆ ಹಾಜರಿದ್ದರು.