ಏಪ್ರಿಲ್ 26 ರಂದು ಬೆಳಿಗ್ಗೆ 11 ಗಂಟೆಗೆ ಜಗಳೂರು ಪಟ್ಟಣಕ್ಕೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಆಗಮನ ಬಿಜೆಪಿ ಪಕ್ಷದ ಪರ ಮತಯಾಚನೆ ಜಗಳೂರು ಪಟ್ಟಣಕ್ಕೆ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕಿಚ್ಚ ಸುದೀಪ್ ಆಗಮಿಸಲಿದ್ದಾರೆ ಎಂದು ಬಿ ಜೆ ಪಿ ಪಕ್ಷದ ಮಾಜಿ ಅಧ್ಯಕ್ಷ ಡಿ ವಿ ನಾಗಪ್ಪ ತಿಳಿಸಿದ್ದಾರೆ .ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದರು ನಟ ಕಿಚ್ಚ ಸುದೀಪ್ ರವರ ಆಗಮನ ಹಿನ್ನಲೆಯಲ್ಲಿ ಜಗಳೂರು ಪಟ್ಟಣದಲ್ಲಿ ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ. ಮಂಗಳವಾರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರು ನಮ್ಮ ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ರಾಮಚಂದ್ರರವರ ಪರ ರೋಡ ಶೋ ನಡೆಸಿ ಮತಯಾಚನೆ ಮಾಡಿದ ಬೆನ್ನಲ್ಲೆ ಪುನ ಬುಧವಾರ ಬೆಳಿಗ್ಗೆ 11 ಗಂಟೆಗೆ ಎಲೆಕ್ಯಾಪ್ಟ್ರ್ ಮೂಲಕ ನಟ ಸುದೀಪ್ ನಗರಕ್ಕೆ ಆಗಮಿಸಿ ಪಟ್ಟಣದ ಪ್ರವಾಸಿ ಮಂದಿರದಿಂದ ಡಾ ಬಿ ಆರ್ ಅಂಬೇಡ್ಕರ್ ವೃತ್ತದವರೆಗೂ ರೋಡ್ ಶೋ ನಡೆಸಿ ಮತದಾರರ ಗಮನ ಸೆಳೆಯುವರು. ಇವರೊಂದಿಗೆ ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ರಾಮಚಂದ್ರ . ಶಾಸಕರ ಪತ್ನಿ ಇಂದಿರಾ ರಾಮಚಂದ್ರ .ಬಿಜೆ ಪಿ ತಾಲ್ಲೂಕು ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್.ಸೇರಿದಂತೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಮುಖಂಡ ದ್ಯಾಮನಗೌಡ್ರು. ಮಾಜಿ ಜಿಪಂ ಸದಸ್ಯ ಎಸ್ ಕೆ ಮಂಜುನಾಥ. ಬಿಜೆಪಿ ಮುಖಂಡ ಬಿದರಕೆರೆ ರವಿಕುಮಾರ್.ಗೊಲ್ಲರಹಟ್ಟಿ ತಿಪ್ಪೇಸ್ವಾಮಿ. ಸೇರಿದಂತೆ ಹಾಜರಿದ್ದರು.