By editor m rajappa vyasagondanahalli

shukradeshe news Kannada online portal Kannada news on published on January 18

ಜಗಳೂರು ಬ್ರೇಕಿಂಗ್ ನ್ಯೂಸ್

ಜಗಳೂರು ತಾಲ್ಲೂಕಿನ ರಸ್ತೆ ಮಾಕುಂಟೆ ಗ್ರಾಮದ ನಿಂಗಪ್ಪ‌ ಎಂಬುವವರು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ತಾಲ್ಲೂಕಿನ ರಸ್ತೆ ಮಾಕುಂಟೆ ಗ್ರಾಮದ ನಿಂಗಪ್ಪ ಎಂಬುವ ರೈತ ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲ ತೀರಿಸಲಾಗದೆ ಸಾಲಭಾದೆಯಿಂದ ದಿನಾಂಕ_ಜನವರಿ 16 ರಂದು ಶುಕ್ರವಾರ ಮೃತಪಟ್ಟಿರುತ್ತಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ರೈತನ ಜಮೀನಿನಲ್ಲಿ ಸರಿಯಾದ ರೀತಿ ಬೆಳೆ ಕೈಗೆ ಸಿಗದೆ ಅತ್ತಿರದ ಬಿದರಕೆರೆ ಗ್ರಾಮೀಣ ಬ್ಯಾಂಕ್ ನಲ್ಲಿ 1 ಲಕ್ಷ ಸಾಲ . ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ 1 ಲಕ್ಷ ಸಾಲ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂಗಳ ಸಾಲ ತೀರಿಸಲಾಗದೆ ರೈತ ಜಿಗಪ್ಸೆಗೊಂಡು ಮನನೊಂದು ರಸ್ತೆಮಾಕುಂಟೆ ಗ್ರಾಮದ ರೈತ ನಿಂಗಪ್ಪ (52) ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ..

ದಿನಾಂಕ_ಜನವರಿ 16 ರಂದು ರೈತ ಜಮೀನಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋಗಿರುವ ವ್ಯಕ್ತಿ ಜಮೀನಿನಲ್ಲಿಟ್ಟಿದ್ದ ಕ್ರಿಮಿನಾಶಕ ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯ ಮಾಡಿಕೊಂಡಿರುತ್ತಾನೆ .ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ರೈತರು ಸಂಬಂಧಿಕರು ಅತ್ತಿರದ ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ .ಈ ಸಂಬಂಧವಾಗಿ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Leave a Reply

Your email address will not be published. Required fields are marked *

You missed

error: Content is protected !!