editor by m.rajappa vyasagondanahalli
shukradeshe news Kannada online portal Kannada news| published on january 16
ಜಗಳೂರು ಕ್ಷೇತ್ರಕ್ಕೆ ಮುಂಬರುವ ವಿಧಾನಸಭಾ ಚುನಾವಣೆ ಬಿ.ಜೆ.ಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರಪ್ಪ ಕಾರ್ಯಕರ್ತರಲ್ಲಿ ಗೊಂದಲ ಬೇಡ ಮತ ಹಾಕಿ ಗೆಲ್ಲಿಸಿ ಎಂದು ಮಾಜಿ ಸಚಿವ ರೇಣುಕಚಾರ್ಯ ಎಸ್ .ವಿ ರಾಮಚಂದ್ರಪ್ಪರ ಹುಟ್ಟು ಹಬ್ಬಕ್ಕೆ ಶುಭಾ ಕೋರಿ ಭವಿಷ್ಯ ನುಡಿದಿದ್ದಾರೆ.
ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪರವರ ಹುಟ್ಟುಹಬ್ಬದ ಆಚರಣೆಗೆ ವಿವಿಧ ರಾಜಕೀಯ ಪ್ರಮುಖರು ಭಾಗಿಯಾಗಿ ಶುಭಾಕೋರಿದರು ಈ ಹಿನ್ನಲೆಯಲ್ಲಿ ಹುಟ್ಟು ಹಬ್ಬಕ್ಕೆ ಆಗಮಿಸಿದ ಮಾಜಿ ಸಚಿವ ರೇಣುಕಚಾರ್ಯ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ನಗರದ ಮಾಜಿ ಶಾಸಕರ ನಿವಾಸದ ಬಳಿ ಅದ್ದೂರಿ ಹುಟ್ಟು ಅಚರಿಸಿಕೊಂಡರು .
ಮಾಜಿ ಸಚಿವ ರೇಣುಕಚಾರ್ಯ ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ .ಬಿಜೆಪಿ ಶಿವಯೋಗಿಸ್ವಾಮಿ.ಮಾಜಿ ಶಾಸಕ ಬಸವರಾಜನಾಯ್ಕ್. ಮಾಜಿ ಶಾಸಕ ಹೆಚ್ ಪಿ ರಾಜೇಶ್. ಬಿಜೆಪಿ .ಬಿಜೆ ಅಜಯ್ ಕುಮಾರ್ ಜೆ.ಎನ್ ಶ್ರೀನಿವಾಸ. ವಿವಿಧ ಗಣ್ಯರು.ಅನೇಕ ಎಸ್ ವಿ ಆರ್ ಅಭಿಮಾನಿಗಳು ಕಾರ್ಯಕರ್ತರು ಎಸ್.ವಿ ರಾಮಚಂದ್ರಪ್ಪರವರ ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸಿ ಶುಭಾ ಕೋರಿದರು
ಇನ್ನು ಎಸ್ ವಿ ಆರ್. ಹುಟ್ಟು ಹಬ್ಬದ ಅಂಗವಾಗಿ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಅವರ ಅಭಿಮಾನಿಗಳಾದ ಪೂಜಾರ್ ಸಿದ್ದಪ್ಪ ಹಾಗೂ ಬಿಸ್ತುವಳ್ಳಿ ಬಾಬು ಕನ್ನಡ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಿಸಿ ನಂತರ ಮಾತನಾಡಿದರು,ಸಿರಿಗೆರೆ ಶ್ರೀಗಳ ಸಂಕಲ್ಪದಂತೆ 57ಕೆರೆ ತುಂಬಿಸುವ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳು ತಾಲ್ಲೂಕಿನಲ್ಲಿ ಸಕಾರಗೊಳ್ಳಲು ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಕೊಡುಗೆ ಆಪಾರ ಎಂದ ಅವರು ಸಸಿ ನೆಟ್ಟು ಶ್ರೀಯುತ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪರವರ ಆರೋಗ್ಯ ಆಯಸ್ಸು ಮುಂದಿನ ರಾಜಕೀಯ ಭವಿಷ್ಯದಲ್ಲಿ ಅಧಿಕಾರ ಲಭಿಸಲಿ ಎಂದು ಶುಭಾ ಕೋರಿದ್ದಾರೆ.




