editor by m.rajappa vyasagondanahalli

Shukradeshe news| onlien portal news published January 19

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಲೋಕಾಯುಕ್ತರ ಇನ್ಸ್ಪಕ್ಟರ್ ಗುರುಬಸಪ್ಪ ಭೇಟಿ: ವಿದ್ಯಾರ್ಥಿಗಳಿಂದ ಸಾಲು–ಸಾಲು ದೂರು

ಶರಣಬಸವೇಶ್ವರ ಬಡಾವಣೆಯಲ್ಲಿರುವ ​ಮೆಟ್ರಿಕ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತ ಇನ್ಸ್ಪಕ್ಟರ್ ಗುರುಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರಿ ನೀಯಮದಂತೆ ನಮಗೆ ಮೆನು ಪ್ರಕಾರ ಊಟ ನೀಡುತ್ತಿಲ್ಲ ಹರಿದ ಹಾಸಿಗೆಗಳು ಕೊಳೆತು ನಾರುತ್ತಿವೆ. ತರಕಾರಿ ಬಾಳೆ ಹಣ್ಣು ಮೊಟ್ಟೆ ಸರಿಯಾದ ರೀತಿ ವಿತರಿಸುವುದಿಲ್ಲ .ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಲೋಕಾಯುಕ್ತರ ಇನ್ಸ್ಪಕ್ಟರ್ ಗುರುಬಸಪ್ಪ ಭೇಟಿ: ವಿದ್ಯಾರ್ಥಿಗಳಿಂದ ಸಾಲು–ಸಾಲು ದೂರು

ಮೆನು ಪ್ರಕಾರ ಊಟ ನೀಡುತ್ತಿಲ್ಲ ಕುಡಿಯುವ ನೀರಿನ ವಾಟರ್ ಟ್ಯಾಂಕ್ ದುರಸ್ತೆ ಶೌಚಾಲಯ ಗಬ್ಬೆದ್ದು ನಾರುತ್ತಿದೆ.

ಮೂಲಭೂತ‌ಸೌಕರ್ಯಗಳ ಕೊರತೆ ಹರಿದ ಹಾಸಿಗೆ ಕೊಳೆತು ನಾರುತ್ತಿವೆ ವಾರ್ಡನ್ ಉಮೇಶನ ಬೇಜವಾಬ್ದರಿ ಲೋಕಾಯುಕ್ತರು ಅಸಮಾದಾನ

ವಿದ್ಯಾರ್ಥಿಗಳು ಲೋಕಾಯುಕ್ತರಿಗೆ ಸಾಲು ಸಾಲು ಸಮಸ್ಯೆಗಳನ್ನ ತಿಳಿಸಿದರು.

ಜಗಳೂರು ಪಟ್ಟಣದ ಶರಣಬಸವೇಶ್ವರ್ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ.ಬಿ.ಆರ್‌.ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶನಿವಾರ ದಿಢೀರ್‌ ಭೇಟಿ ನೀಡಿದ ಲೋಕಾಯುಕ್ತ ಗುರುಬಸಪ್ಪ‌ರವರ ಎದುರು, ವಿದ್ಯಾರ್ಥಿಗಳು ಇಟ್ಟ ಸಾಲು–ಸಾಲು ದೂರುಗಳಿವು.

ಕಳೆದ ದಿನಗಳ ಹಿಂದೆ ಸಾರ್ವಜನಿಕರೊಬ್ಬರ ಲೊಕಾಯುಕ್ತ ಕಛೇರಿಗೆ ನೀಡಿದ ದೂರಿನ ಮೇರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹಾಸ್ಟೆಲ್ ಸ್ಟಾಕ್ ಅಂಡ ಇಂಡೇಂಟ್ ವ್ಯತ್ಯಾಸ ಸೇರಿದಂತೆ ಅನೇಕ ಲೋಪದೋಷಗಳ ಕಂಡುಬಂದಿರುವುದು ಬೆಳಕಿಗೆ ಬಂದಿತ್ತು ಅದೇ ಚಾಳಿ ಪುನರಾವರ್ತನೆಯಾಗುತ್ತಿವೆ ಹಾಸ್ಟೆಲ್ ಗಳ ಸ್ಥಿತಿ ಅದೋಗತಿ ತಲುಪಿವೆ.

ಸರಿಯಾದ ರೀತಿ ಕರ್ತವ್ಯ ನಿರ್ವಹಿಸುತ್ತಿಲ್ಲ ಸರ್ಕಾರು ನೀಯಮನುಸಾರ ಹಾಸ್ಟೆಲ್ ನಲ್ಲಿ ಸ್ಥಳೀಯವಾಗಿ ವಾಸವಿರಬೇಕೆಂಬ ನೀಯಮವಿದೆ ಅದರೆ ವಾರ್ಡನ್ ಮಾತ್ರ ಸ್ಥಳೀಯವಾಗಿರದೆ ಜಿಲ್ಲಾ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಒಟ್ಟಾರೆ
ಲೋಕಾಯುಕ್ತರು ಭೇಟಿ ನೀಡಿದಾಗ ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆಗಳ ಲೋಕವೇ ತೆರೆದಿಟ್ಟಂತಾಗಿದೆ.

ಇನ್ನು ಇಲ್ಲಿ ಕಾರ್ಯನಿರ್ವಹಿಸುವ ವಾರ್ಡನ್‌ ಉಮೇಶ್ ರವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವೀತಿಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುವವರೆ ಇಲ್ಲಿನ ವಾರ್ಡನ್ ಹುದ್ದೆಯಲ್ಲಿದ್ದಾರೆ ಆದರೆ‌ ಇದು ಸರ್ಕಾರಿ ನೀಯಮಗಳು ಉಲ್ಲಂಘನೆಯಾಗಿದ್ದರು ಯಾರು ಹೇಳುವವರು ಕೇಳುವವರಿಲ್ಲ ಇವರು ಆಡಿದ್ದೆ ಆಟ ಎಂಬಂತಾಗಿದೆ.ಸಾರ್ವಜನಿಕರ ಆರೋಪ

ಈ ಸಂದರ್ಭದಲ್ಲಿ ಲೊಕಾಯುಕ್ತ ಇಲಾಖೆ ಸಿಬ್ಬಂದಿಗಳಾದ ಮಂಜುನಾಥ ಕೋಟಿ ಸೆರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!