editor by m.rajappa vyasagondanahalli

Shukradeshe news online portal Kannada news published January 19 _2026

ಜಗಳೂರು: ಹಾಜರಾತಿ ಪುಸ್ತಕದಲ್ಲಿ ಮಾತ್ರ ಮಕ್ಕಳ ಸಂಖ್ಯೆ ಇದೆ ಆದರೆ 20 ಮಕ್ಕಳ ಸಹ ವಿದ್ಯಾರ್ಥಿನಿಲಯದಲ್ಲಿ ಇಲ್ಲ ನೀವು ಪ್ರತಿ ಮಾಯೆ 80 ವಿದ್ಯಾರ್ಥಿಗಳಿಗೆ ಬಿಲ್ಲನ್ನು ಮಾಡಿಕೊಳ್ಳುತ್ತಿದ್ದೀರಿ ನೀವು ಮಾಡುತ್ತಿರುವುದು ತಪ್ಪು ನಿಮ್ಮ ಇಂಕ್ರಿಮೆಂಟನ್ನು ತಡೆ ಹಿಡಿಯಲಾಗುವುದು.

ಎಂದು ಜಿಲ್ಲಾ ಪಂಚಾಯತಿ ಸಿಇಓ ಗಿತ್ತೆ ಮಾಧವ ವಿಠಲ ರಾವ್ ಗುತ್ತಿ ದುರ್ಗ ಗ್ರಾಮದ ಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕನಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತಿಗಳ ನಡೆ ಮುಂಜಾನೆ ಗ್ರಾಮಗಳ ಕಡೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಸೋಮವಾರ ತಾಲೂಕಿನ ಗೊತ್ತಿದುರ್ಗ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಬಿಸಿಎಂ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದ ಅವರು ಹಾಜರಾತಿ ಪುಸ್ತಕಗಳಲ್ಲಿ ಮಾತ್ರ ಮಕ್ಕಳ ದಾಖಲಾತಿಯನ್ನು ತೋರಿಸುತ್ತೀರಿ, ಆದರೆ ಹಾಸ್ಟೆಲ್ ನಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ.
80 ವಿದ್ಯಾರ್ಥಿಗಳು ದಾಖಲಾತಿಯಲ್ಲಿ ಇದ್ದಾರೆ ಆದರೆ ೨೦ ಮಕ್ಕಳು ಸಹ ಇಲ್ಲ ಎಂದು ಬೇಸ ವ್ಯಕ್ತಪಡಿಸಿದ ಅವರು

ಒಂಬತ್ತು ವಿದ್ಯಾರ್ಥಿಗಳ ಆಹಾರ ಸಾಮಗ್ರಿಗಳ ಮಿಲ್ಲನ್ನು ಮಾತ್ರ ಪ್ರತಿಮಾ ತಿಂಗಳು ಮಾಡಿಕೊಳ್ಳುತ್ತಿದ್ದೀರಿ ಇದು ಸರಿನಾ ಒಂದು ಪ್ರಶ್ನೆಸಿದವರು ನಿಮ್ಮ ಇಂಕ್ರಿಮೆಂಟನ್ನು ಕಟ್ ಮಾಡಲಾಗುವುದು ಎಂದು ಸೂಚನೆ ನೀಡಿದರು.
ನಂತರ ತಾಲೂಕಿನ ಬಿದ್ಗಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಿದ ನಂತರ ಉಚ್ಚಂಗಿಪುರ ಗ್ರಾಮದ ಚಳ್ಳೆ ಕಟ್ಟೆ ಗುಡ್ಡದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಯಲ್ಲಿ ಸ್ವತಹ ತಾವೇ ಆರೆಹಾಕಿ ಮಣ್ಣನಾಗಿದ್ದು ನಂತರ ಪುಟ್ಟಿಯಲ್ಲಿ ತುಂಬಿ ಮಣ್ಣನ್ನು ಬೇರೆಡೆಗೆ ಹಾಕುವುದರ ಮೂಲಕ ಶ್ರಮದಾನ ಮಾಡಿದರು.

ಈ ವೇಳೆ ಮಾತನಾಡಿದ ಅವರು ಸರ್ಕಾರ ನಿಮಗೆ ಕೂಲಿ ಕೆಲಸ ನೀಡುತ್ತಿದೆ ಆದರೆ ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಸಮಾಜದಲ್ಲಿ ಒಂದು ಸ್ಥಾನಮಾನ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ.ಓ. ಕೆಂಚಪ್ಪ, ಪಿಡಿಒ ರಾಘವೇಂದ್ರ ಸಿಬ್ಬಂದಿಗಳಾದ ಸಿದ್ದಿಕ್ ನಾಗಪ್ಪ ಸೇರಿದಂತೆ ಮತ್ತು ಹಾಜರಿದ್ದರು

Leave a Reply

Your email address will not be published. Required fields are marked *

You missed

error: Content is protected !!