ಸರ್ಕಾರದಿಂದ ಸಿಗುವ ನೀರಾವರಿ ಸೌಲಭ್ಯ ಸದ್ಬಳಕೆಮಾಡಿಕೊಳ್ಳಿ:ಶಾಸಕ ಬಿ.ದೇವೇಂದ್ರಪ್ಪ

ಜಗಳೂರು‌,
ಜಗಳೂರು,ಫೆ.11:ರೈತರು ಸರ್ಕಾರದ ಸೌಲಭ್ಯದೊಂದಿಗೆ ನೀರಾವರಿ ಸೌಲಭ್ಯ ಸದ್ಬಳಕೆಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.

ಬುಧವಾರ ಪಟ್ಟಣದ ಶಾಸಕರ ಜನಸಂಪರ್ಕ ಆವರಣದಲ್ಲಿ ಸಣ್ಣನೀರಾವರಿ ಇಲಾಖೆಯಿಂದ 25 ಫಲಾನುಭವಿಗಳಿಗೆ ಪಂಪ್,ಮೋಟಾರ್ ವಿತರಿಸಿ ಅವರು ಮಾತನಾಡಿದರು.

ರೈತರು ಆರ್ಥಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಲು,ಸರ್ಕಾರ ವಿವಿಧ ಇಲಾಖೆಗಳಡಿ,ಉಚಿತ ಬೋರ್ ವೆಲ್,ಪಂಪ್ ಮೋಟಾರ್,ವಿದ್ಯುತ್ ಸಂಪರ್ಕ ಸೌಲಭ್ಯ ಒದಗಿಸುತ್ತಿದ್ದು.ಅರ್ಹ ಫಲಾನುಭವಿಗಳು ಸದುಪಯೋಗಪಡೆದುಕೊಳ್ಳಬೇಕು.ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರಮಾಡುತ್ತಿರುವ ಬಿಜೆಪಿ ಅವರು ಕ್ಷೇತ್ರದಲ್ಲಿನ ಅಭಿವೃದ್ದಿ ಕಾಮಗಾರಿಗಳನ್ನು,ರೈತಕಾರ್ಮಿಕರಿಗೆ ಒದಗಿಸಿರುವ ಸೌಲಭ್ಯಗಳನ್ನು ಮನಗಾಣಬೇಕಿದೆ ಎಂದು ತಿರುಗೇಟು ನೀಡಿದರು.

ತಾಲ್ಲೂಕಿನ ಬಿಳಿಚೋಡು ಬಳಿ ರೂ.10‌ಕೋಟಿ ವೆಚ್ಚದ ಸೇತುವೆ ನಿರ್ಮಾಣ,ರೂ.2 ಕೋಟಿ ವೆಚ್ಚದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ದಿಗಾಗಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆಯಲ್ಲಿದೆ.ಬಿದರಕೆರೆ ಸೇರಿದಂತೆ ರೂ.2 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ತಾಲ್ಲೂಕಿನಲ್ಲಿ 57 ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳು ಭರ್ತಿಯಾಗಿವೆ.ಅಂತರ್ಜಲ‌ ಹೆಚ್ಚಳವಾಗಿ ಬೋರ್ ವೆಲ್ ನಲ್ಲಿ ನೀರು ಸಮೃದ್ದಿಯಾಗಲಿವೆ.ಸರ್ಕಾರದ ಸಹಾಯಧನದಲ್ಲಿ ಎಸ್ ಸಿ ಎಸ್ ಟಿ ಸಮುದಾಯದ ರೈತರು ಬೋರ್ ವೆಲ್ ಕೊರೆಸಿ,ವಿದ್ಯುತ್,ಪಂಪ್ ಮೋಟಾರ್ ಅಳವಡಿಕೆ ಮಾಡಿಕೊಳ್ಳಬೇಕು.ಬರದನಾಡಿನ ಹಣೆಪಟ್ಟಿ ಕಳಚಲಿದೆ ಎಂದರು.

ಈ ಸಂದರ್ಭದಲ್ಲಿ ಗುತ್ತಿಗೆದಾರ ಶೇಷಾದ್ರಿ,ಸಣ್ಣ ನೀರಾವರಿ ಇಲಾಖೆಯ ಎಇಇ ರಜತ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಬಿ.ಮಹೇಶ್ವರಪ್ಪ,ಶಾಸಕರ ಆಪ್ತರಾದ ಗೌಸ್ ಅಹಮ್ಮದ್,ಮಧುಶಂಕರ್,ರಾಜು ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!