ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೋಟಿ ಕೋಟಿ ಲೂಟಿ ಹೊಡೆದ ಸುಳ್ಳಿನ ಸರದಾರ ಲಂಚಕೋರ ಉಮೇಶನ ಬಣ್ಣ ಬಯಲು

ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತಿಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶನ ಕರ್ಮಕಾಂಡವೆ ಒಂದು ಬ್ರಹ್ಮಾಂಡ ಭ್ರಷ್ಟಚಾರದ ಕರಾಳ ಮುಖವಾಡ ಇದೀಗ ಬಗೆದಷ್ಟು ಬಯಲಾಗಿದೆ.

ಜಗಳೂರು ಕ್ಷೇತ್ರ ಬರಪೀಡಿತ ಪ್ರದೇಶ ಇಲ್ಲಿ ಅನೇಕರು ಬಡವರು ಮದ್ಯಮ ವರ್ಗದ ಕಾರ್ಮಿಕರು ಕೂಲಿಕಾರರು‌ .ಎಸ್ಸಿ .ಎಸ್ಟಿ ಹಿಂದೂಳಿದವರೆ ಹೆಚ್ಚಾಗಿರುವ‌ ತಾಲ್ಲೂಕು ಇಂತ ಪ್ರದೇಶದಲ್ಲಿ‌ ಇಲಾಖೆಗೆ ಬರುವಂತ ಕೆಲ ಸೌಲಭ್ಯ ವಂಚಿತ ಸಮುದಾಯದ ಎಸ್ಸಿ ‌ ಪರಿಶಿಷ್ಟ ಜಾತಿ ಜನರ ಕಲ್ಯಾಣಕ್ಕಾಗಿ ಮೀಸಲಿರುವ ಅನುದಾನವನ್ನ ಅಯ ಸಮುದಾಯಗಳ‌ ಅರ್ಹರಿಗೆ ಒದಗಿಸಿ ಅವರ ಅಭಿವೃದ್ದಿಗಾಗಿ ಶ್ರಮಿಸಬೇಕಾದ ಅಧಿಕಾರಿಗೆ ಬೇಕಾಂತೆ ಲಂಚ ಈತನಿಗೆ ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡುವ ಅಸಾಮಿ . ಈತ ಲಂಚಕೋರ ಉಮೇಶ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ ಪೈಲು ವಿಲೇವಾರಿ ಮಾಡಲು ಲಂಚಕ್ಕೆ ಆಮೀಷ ಒಡ್ಡುತ್ತಾನೆ . ಇನ್ನು ಬಡ ದೇವದಾಸಿ ಮಹಿಳೆಯರ ಮಕ್ಕಳ ಮದುವೆ ಇತರೆ ಕಲ್ಯಾಣಕ್ಕಾಗಿ ಅವರ ಶ್ರಯೋಸ್ಸು ಅಭಿವೃದ್ದಿಗೆ ಬರುವಂತ ಪ್ರೋತ್ಸಹಧನ ಪಡೆಯಲು ಈತನಿಗೆ 5 ಸಾವಿರ 10 ಸಾವಿರ ಲಂಚ ಕೊಟ್ಟರೆ ಮಾತ್ರ ಇಲಾಖೆಯಲ್ಲಿ ಪೈಲು ಟೇಬಲ್ ಟು ಟೇಬಲ್ ವಿಲೆವಾರಿಯಾಗುತ್ತೆ ಎಂಬುದು ಸರ್ವೇಸಾಮಾನ್ಯವಾಗಿದೆ . ಒಟ್ಟಾರೆ ಜಗಳೂರು ತಾಲ್ಲೂಕು ಕೇಂದ್ರ ಭ್ರಷ್ಟರ ಪಾಲಿಗೆ ಸ್ವರ್ಗದಂತಾಗಿದೆ .ಕೋಟಿ ಕೋಟಿ ಕೊಳ್ಳೆ ಹೊಡೆಯುವವರಿಗೆ ತಾಲ್ಲೂಕು ಕೇಂದ್ರ ಸ್ವಗದ ನೆಲೆಯಾಗಿದೆ ಎಂದರೆ ತಪ್ಪಾಗಲಾರದು.

ಅದಲ್ಲದೆ
ಪ್ರಿ ಮೆಟ್ರಿಕ್ ಹಾಸ್ಟೆಲ್ ಗೆ ಈತನೆ ವಾರ್ಡನ್ ಇನ್ನು ಉಮೇಶ ಎಂಬ ಕಡು ಭ್ರಷ್ಟನು ಮಾಡುವಂತ ಐನಾತಿ ಕೆಲಸಕ್ಕೆ ಸಾಥ್ ನೀಡುವರಂತೆ. ಇನ್ನು ಈ ಇಲಾಖೆಗೆ‌ ಹೆಚ್ಚು ಎಸ್ಸಿ ಎಸ್ಟಿ ವರ್ಗದ ಜನರು ಸಂಪರ್ಕ ಇರಬೇಕಾದ ಇಲಾಖೆಗೆ ಎಸ್ಸಿ ಎಸ್ಟಿ ಹೊರೆತುಪಡಿಸಿ ಅನ್ಯಸಮುದಾಯದ ಕೆಲ ಪಟಲಾಮುಗಳ ದರ್ಬಾರ್ ಹೆಚ್ಚಾಗಿದ್ದು ಇವರಿಗೆ ಸೊಪ್ಪು ಹಾಕಿ ತನ್ನ ಬೇಳೆ ಬೆಯಿಸಿಕೊಳ್ಳುವ ಉಮೇಶನ ಬೆನ್ನ ಹಿಂದೆ ಕಾಣದ ಕೈಗಳು ಸಾಥ್ ನೀಡಿ ಬೆಂಬಲಕ್ಕೆ ನಿಂತು ಇಲಾಖೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ನವರಂಗಿ ಆಟ ಆಡುವ ಗಾಡ್ ಪಾದರ್ ನ ಬಣ್ಣ ಕೂಡ ಅತಿ ಶೀಘ್ರದಲ್ಲಿಯೇ ಬಯಲಾಗಲಿದೆ….

ಎಸ್ಸಿ ದೇವಾದಾಸಿ ಮಹಿಳೆಯರಿಗೆ ಇಲಾಖೆಯಿಂದ ಬರುವಂತ ಸೌಲಭ್ಯ ಪಡೆಯಲು ಲಂಚ ನೀಡಿದರೆ ಮಾತ್ರ ಉಮೇಶನು ಪೈಲು ವಿಲೇವಾರಿ ಮಾಡಿ ಸೌಲಭ್ಯ ಕೋಡಿಸುತ್ತಾನೆ ಇಂತ ಭ್ರಷ್ಟ ಅಧಿಕಾರಿಯನ್ನ ಬೇರೆಡೆಗೆ ಎತ್ತಂಗಡಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈತ ನಡೆಸುವ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜುರಾತಿಯನ್ನ ಸಹ ವಿದ್ಯಾರ್ಥಿ ನಿಲಯದ ಅಡುಗೆ ತಯಾರಕರೆ ಬಯೊಮೆಟ್ರಿಕ್ ಹಾಜುರಾತಿಯನ್ನ ಹಾಕುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದ್ದು ಅಧಿಕಾರಿಗಳು ಸರಿಯಾದ ರೀತಿ ಪರಿಶೀಲನೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದಕ್ಕೆ ಸಾಕ್ಷಿಯಾಗಿ ಇತ್ತಿಚಿಗೆ
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಲೋಕಾಯುಕ್ತರ ಇನ್ಸ್ ಪಕ್ಟರ್ ಗುರುಬಸಪ್ಪ ಭೇಟಿ: ವಿದ್ಯಾರ್ಥಿಗಳಿಂದ ಸಾಲು–ಸಾಲು ದೂರು ನೀಡಿದ ಪ್ರಸಂಗ ಜರುಗಿದೆ.

ಶರಣಬಸವೇಶ್ವರ ಬಡಾವಣೆಯಲ್ಲಿರುವ ​ಮೆಟ್ರಿಕ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತ ಇನ್ಸ್ಪಕ್ಟರ್ ಗುರುಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರಿ ನೀಯಮದಂತೆ ನಮಗೆ ಮೆನು ಪ್ರಕಾರ ಊಟ ನೀಡುತ್ತಿಲ್ಲ ಹರಿದ ಹಾಸಿಗೆಗಳು ಕೊಳೆತು ನಾರುತ್ತಿವೆ. ತರಕಾರಿ ಬಾಳೆ ಹಣ್ಣು ಮೊಟ್ಟೆ ಸರಿಯಾದ ರೀತಿ ವಿತರಿಸುವುದಿಲ್ಲ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಲೋಕಾಯುಕ್ತರ ಇನ್ಸ್ಪಕ್ಟರ್ ಗುರುಬಸಪ್ಪ ಭೇಟಿ: ವಿದ್ಯಾರ್ಥಿಗಳಿಂದ ಸಾಲು–ಸಾಲು ದೂರು ಕಲೆ ಹಾಕಿದ್ದಾರೆ.

ಮೆನು ಪ್ರಕಾರ ಊಟ ನೀಡುತ್ತಿಲ್ಲ ಕುಡಿಯುವ ನೀರಿನ ವಾಟರ್ ಟ್ಯಾಂಕ್ ದುರಸ್ತೆ ಶೌಚಾಲಯ ಗಬ್ಬೆದ್ದು ನಾರುತ್ತಿದೆ.

ಮೂಲಭೂತ‌ಸೌಕರ್ಯಗಳ ಕೊರತೆ ಹರಿದ ಹಾಸಿಗೆ ಕೊಳೆತು ನಾರುತ್ತಿವೆ ವಾರ್ಡನ್ ಉಮೇಶನ ಬೇಜವಾಬ್ದರಿ ಲೋಕಾಯುಕ್ತರು ಸಹ ಅಸಮಾದಾನಗೊಂಡು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳು ಲೋಕಾಯುಕ್ತರಿಗೆ ಸಾಲು ಸಾಲು ಸಮಸ್ಯೆಗಳನ್ನ ತಿಳಿಸಿದರು.

Leave a Reply

Your email address will not be published. Required fields are marked *

You missed

error: Content is protected !!