ತಾಲ್ಲೂಕಿನ ತೋರಣಗಟ್ಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 2. 40 ಲಕ್ಷ ರೂಗಳಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಭೂಮಿ ಪೂಜೆ ನೇರವೇರಿಸಿದರು.
ಜಗಳೂರು,ಫೆ.12:ತಾಲ್ಲೂಕಿನ ಲಿಂಗಣ್ಣನಹಳ್ಳಿ,ಕಟ್ಟಿಗೆಹಳ್ಳಿ,ತೋರಣಗಟ್ಟೆ ಗ್ರಾಮಗಳಲ್ಲಿ ಸುಮಾರು 2.40 ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು
ತಾಲ್ಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳು ಬರದಿಂದ ಸಾಗುತ್ತಿದ್ದು ಮೊನ್ನೆ ತೊರೆಸಾಲು ಬಾಗದಲ್ಲಿ 16 ಕೋ . ರೂ ತಮ್ಮಲೇಹಳ್ಳಿ .ಹನುಮಂತಾಪುರ ಗೊಲ್ಲರಹಟ್ಟಿ ರೂ ಕ್ಯಾಸೆನಹಳ್ಳಿ 15 ಕೋ ರೂ .ತೋರಣಗಟ್ಟೆ ಗ್ರಾಮದಲ್ಲಿ 1.45 ಲಕ್ಷ ರೂ ಸಿಸಿ ರಸ್ತೆ ದ್ವಾರಬಾಗಿಲು ನಿರ್ಮಾಣ ಸೇರಿದಂತೆ ಒಟ್ಟು ಸುಮಾರು 34 ಕೊ ರೂಗಳಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನ ಪೂರ್ಣಗೊಳಿಸಿ ಗುಣಮಟ್ಟದ ಕಾಮಗಾರಿಗಳನ್ನ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದರು.
ಜಗಳೂರು ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಸಕಾರಗೊಂಡು ಕೆರೆಗಳು ಭರ್ತಿಯಾಗಿದ್ದು,ರೈತರು ಅಡಿಕೆ ಗಿಡಗಳನ್ನು ಮೆಣಸಿನ ಸಸಿಯಂತೆ ನೆಡುತ್ತಿದ್ದು, ಬರದನಾಡು ಅಡಿಕೆನಾಡಾಗುವ ಕಾಲ ಸನ್ನೀಹಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
57 ಕೆರೆ ತುಂಬಿಸುವ ಯೋಜನೆಯಡಿ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಬಹುದಿನದ ಮಹತ್ವದ ಕನಸಿನ ಭದ್ರಾಮೇಲ್ದಂಡೆ ಯೋಜನೆಯಿಡಿ ಜಮ್ಮಾಪುರ.ಸಂಗೇನಹಳ್ಳಿ .ಜಗಳೂರು ಒಟ್ಟು 9 ಕೆರೆಗಳು ಸೇರ್ಪಡೆಯಾಗಿದ್ದು ಮತ್ತೊಷ್ಟು ಕೆರೆ ತುಂಬುವ ನೀರಿಕ್ಷೆಯಿದೆ .ಈಗಾಗಲೆ ಅಪ್ಪರ್ ಭದ್ರಾ ಯೋಜನೆ ಕಾಮಗಾರಿ ಗೋನೂರು ಬಳಿ ಭರದಿಂದ ಸಾಗಿದೆ.110 ಅಡಿ ಎತ್ತರದ ನೂರಕ್ಕೂ ಅಧಿಕ ಕಂಬಗಳು,ಸೇತುವೆ,ಮೇಲ್ಗಾಲುವೆ ಸೇರಿದಂತೆ ಬೃಹತ್ ಗಾತ್ರದಲ್ಲಿ ನಿರ್ಮಾಣಗೊಳ್ಳುತ್ತಿದೆ.ಭದ್ರಾಮೇಲ್ದಂಡೆ ಯೋಜನೆ ಸಕಾರಗೊಳ್ಳಲು ಸಹಕರಿಸಿದ ಪಕ್ಷಾತೀತ ಶಾಸಕ,ಸಂಸದರಿಗೆ,ಸಚಿವರುಗಳಿಗೆ ಅಭಿನಂದನೆಗಳು ಸಲ್ಲಿಸಿದರು .
ತಾಲ್ಲೂಕಿನ ಕಲ್ಲದೇವರಪುರ 66 ಕೆವಿ,ಗೌರಿಪುರದ ಬಳಿ 220ಕೆವಿ ವಿದ್ಯುತ್ ಪ್ರಸರಣಾ ಕೇಂದ್ರ ಸ್ಥಾಪನೆಗೆ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಲಾಗುವದು.ಇದರಿಂದ ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ.
ತೋರಣಗಟ್ಟೆ ಗ್ರಾಮಕ್ಕೂ ನಮಗೂ ಅವಿನಭಾವ ಸಂಬಂಧವಿದೆ ಮೆಲ್ಲಜ್ಜ ದೇವರ ಪೂಜಾ ಕಾರ್ಯಕ್ರಮಗಳಲ್ಲಿ ನನಗೆ ತೋರಿದ ಪ್ರೀತಿ,ಗೌರವಕ್ಕೆ ಸಾಕ್ಷಿಯಾಗಿದೆ
ನನಗೆ ಎರಡ ಅಕ್ಷರ ಕಲಿಸಿದ ಗುರುಗಳಾದ ಭೀಮಪ್ಪ ಶಿಕ್ಷಕರು ನನಗೆ ಅಂದು ನನಗೆ ಅಕ್ಷರ ಧಾರೆ ಎರೆದು ನಾನು ಇದೀಗ ಪ್ರಸ್ತುತದಲ್ಲಿ ನಾನು ಒಬ್ಬ ಶಾಸಕನಾಗಿ ಆಯ್ಕೆಯಾಗಿರುವೆ ಪ್ರತಿಯಾಗಿ ತೋರಣಗಟ್ಟೆ ಗ್ರಾಮಕ್ಕೂ 1.45 ಲಕ್ಷ ರೂ ಅನುದಾನ ಒದಗಿಸಿ ಋಣತೀರಿ
ಕಟ್ಟಿಗೆಹಳ್ಳಿಯಲ್ಲಿ ಭಜನಾಮಂದಿರ,ಗ್ರಂಥಾಲಯಕ್ಕೆ ಮಹಿಳೆಯರು ಬೇಡಿಕೆ:ಗ್ರಾಮದಲ್ಲಿ ಭಜನಾಮಂದಿರಕ್ಕೆ ಭವನ,ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲು ಮನವಿಮಾಡಿದರು.
ಶಾಸಕರು ಪ್ರತಿಕ್ರಿಯಿಸಿ ಮಹಿಳೆಯರು ಟಿವಿ,ದಾರಾವಾಹಿಗಳಲ್ಲಿ ಕಾಲಾಹರಣಮಾಡುವ ಕಾಲಘಟ್ಟದಲ್ಲಿ ಭಜನಾಮಂದಿರ,ಗ್ರಂಥಾಲಯ ಕೇಳಿದ್ದು ಸ್ವಾಗತರ್ಹ,ರಾಮನವಮಿ ಒಳಗಾಗಿ ಭಜನಾ ಪರಿಕರಗಳನ್ನ ಒದಗಿಸುವೆ,ನಂತರ ಶೀಘ್ರದಲ್ಲಿ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಇದೇ ವೇಳೆ:ರೂ.25 ಲಕ್ಷ ವೆಚ್ಚದಲ್ಲಿ ಮೆಲ್ಲಜ್ಜ ದೇವಸ್ಥಾನ ದ್ವಾರಬಾಗಿಲು ನಿರ್ಮಾಣ,ರೂ.1 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆವರೆಗೆ ಸಿಸಿ ರಸ್ತೆ ನಿರ್ಮಾಣ, ತೋರಣಗಟ್ಟೆ ಮ್ಯಾಸರಹಟ್ಟಿ,ಲಿಂಗಣ್ಣನಹಳ್ಳಿ,ಕಟ್ಟಿಗೆಹಳ್ಳಿ,ಗ್ರಾಮಗಳಲ್ಲಿ ತಲಾ ರೂ.20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ,ಚರಂಡಿ ನಿರ್ಮಾಣ ಕಾಮಗಾರಿಗಳ ಭೂಮಿಪೂಜೆಯನ್ನು ಶಾಸಕ ಬಿ.ದೇವೇಂದ್ರಪ್ಪ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಷಂಷೀರ್ ಅಹಮ್ಮದ್ ,ಗ್ರಾ.ಪಂ ಸದಸ್ಯ ಟಿ.ಜಿ.ಬಾಲಪ್ಪ,ಗ್ರಾ.ಪಂ ಮಾಜಿ ಅಧ್ಯಕ್ಷೆ ಸಿದ್ದಲಿಂಗಮ್ಮ ಬಾಲಕೃಷ್ಣ,ಭೂಸೇನಾ ನಿಗಮದ ಎಇಇ ಭಾರತಿ,ಪಿಐಆರ್ ಡಿ ಎಇಇ ಶಿವಮೂರ್ತಿ,ನಿರ್ಮಿತಿ ಕೇಂದ್ರ ಎಇಇ ಮಹಾಂತೇಶ್,ಗುತ್ತಿಗೆದಾರ ದೀಪಕ್ ಪಟೇಲ್,
ಪಿಡಿಓ ಮರುಳಸಿದ್ದಪ್ಪ,ಸರ್ಕಾರಿ ಪ್ರೌಢಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ,ಮುಖಂಡರಾದ ಸಣ್ಣಸೂರಜ್ಜ, ದತ್ತಾತ್ರೇಯ,ಜೀವಣ್ಣ,ಬಡಪ್ಪ,ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಶಿಕ್ಷಕ ಹನುಮಂತಪ್ಪ,ಆಪ್ತ ಸಹಾಯಕರಾದ ಮಧುಶಂಕರ್,ಸೇರಿದಂತೆ ಇದ್ದರು.
