ಪಟ್ಟಣದಲ್ಲಿ ಅದ್ದೂರಿ ದೊಡ್ಡ ಮಾರಿಕಾಂಬ ರಥೋತ್ಸವ ಜರುಗಿತು ಶುಕ್ರದೆಸೆ ನ್ಯೂಸ್:- ಕಳೆದ ದಿ ಏಪ್ರಿಲ್ 24 ರಿಂದ ಜಾತ್ರಮಹೋತ್ಸವ ಆರಂಭವಾಗಿ ಇಂದು ದೊಡ್ಡಮಾರಿಕಾಂಬ ರಥೋತ್ಸವ ಅದ್ದೂರಿಯಾಗಿ ರಥೋತ್ಸವ ಪ್ರಮುಖ ಬೀದಿಯಲ್ಲಿ ಸಂಚರಿಸುವ ವೇಳೆ ಆಪಾರ ಭಕ್ತ ಸಮೂಹ ದೇವಿಗೆ ಬಾಳೆ ಹಣ್ಣು ಎಸೆದು ತಮ್ಮ ಇಷ್ಟಾರ್ಥಗಳುನ್ನು ಈಡೇರಿಸುವಂತೆ ಭಕ್ತರು ಬೇಡಿಕೊಂಡರು.ರಥೋತ್ಸವ ಜರುಗುವ ವೇಳೆ ಜನವೂ ಜನ ತಾಮುಂದು ನಾಮುಂದು ಎಂದು ದೇವಿಗೆ ಹಣ್ಣು ಎಸೆದು ದೇವರ ಕೃಪೆಗೆ ಪಾತ್ರರಾದರು.ದೇವಿಗೆ ಭಕ್ತರು ನೀಡಿದಂತ ಹಾರ ಇನ್ನಿತರೆ ವಸ್ತುಗಳುನ್ನು ಹಾರಾಜು ಮಾಡಲಾಯಿತು.ಈ ರಥೋತ್ಸವದಲ್ಲಿ ವಿವಿಧ ಗಣ್ಯಮಾನ್ಯರು ಆಪಾರ ಭಕ್ತಮಂಡಳಿ ನೆರೆದಿದ್ದರು.. ಭಕ್ತರು ಹಣ್ಣು ಕಾಯಿ ಉತ್ತತ್ತಿ ಸೇರಿದಂತೆ ಇನ್ನಿತರೆ ಎಡೆ ಕೊಟ್ಟು ದೇವರಿಗೆ ಮೋರೆಹೋದರು ಪ್ರತಿ 5 ವರ್ಷಕ್ಕೋಮ್ಮೆ ಜರುಗುವ ಜಾತ್ರೆ ಒಂದು ವಿಶಿಷ್ಠವಾಗಿದೆ.ಒಟ್ಟಾರೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಹೊಂದಿರುವ ಜಗಳೂರಿನ ದೊಡ್ಡ ಮಾರಿಕಾಂಬ ದೇವಿ ಜಾತ್ರಮಹೋತ್ಸವ 24 ರಿಂದ ವಿಜೃಂಭಣೆಯಿಂದ ಆರಂಭವಾಗಿ ಇದೀಗ 28 ರಂದು ಅದ್ದೂರಿ ರಥೋತ್ಸವ ಸಾಗಿತು.ಜಾತ್ರೆಯಲ್ಲಿ ವಿವಿಧ ಎಗ್ಜಬೂಷನ್ . ಮತ್ತು ವಿವಿಧ ಕಾಸಮಟಿಕ್ಸ್ ಸಾಮಾನುಗಳಿಂದ ಕೂಡಿದ ಗುಡಾರಗಳು ಭಕ್ತರುನ್ನು ಕೈ ಬೀಸಿ ಕರೆಯುವಂತ್ತಿದ್ದವು .ಮಹಿಳೆರ ಸಂಬಂಧಿಸಿದ ಬಳೆ ವಿವಿಧ ಆಲಾಂಕಾರದ ಸರ .ಹಾಗೂ ಮಕ್ಜಳ ಆಟಿಕೆ ಸಾಮಾನು ಸರಾಂಜುಗಳಿಂದ ನೋಡುಗರ ಗಮನ ಸೆಳೆಯುವಂತ್ತಿತ್ತು.ಒಟ್ಟಾರೆ ಜಗಳೂರು ಜಾತ್ರೆ ಒಂದು ದಾಖಲೆಯಂತೆ ರಸ್ತೆ ತುಂಬೆಲ್ಲಾ ಜನರು ಕಾಲ್ನಡಿಗೆಯಲ್ಲಿ ಜಾತ್ರೆಗೆ ತೆರಳಿ ಇಷ್ಟವಾದ ವಸ್ತುಗಳುನ್ನು ಖರಿದಿಸಿದರು.