ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಪಕ್ಷದ ಚಿಹ್ನೆಯಲ್ಲಿ ಗೆದ್ದು ಒಂದು ಬಾರಿ ಅಧಿಕಾರ ಅನುಭವಿಸಿ ಇದೀಗ ಪಕ್ಷದ ವಿರುದ್ದ ಬಂಡಾಯ ಅಭ್ಯರ್ಥಿಯಾಗಿದ್ದಾರೆ ಅದರೆ ಯಶಸ್ವಿಯಾಗಲಾರರು ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಗುಡುಗಿದ್ದಾರೆ. ಶುಕ್ರದೆಸೆ ನ್ಯೂಸ್: – ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರು ಸುದ್ದಿಗೋಷ್ಠಿ ಏರ್ಪಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ದಿನಾಂಕ ಏಪ್ರಿಲ್ 30 ರಂದು ಸೋಮವಾರ 11 ಗಂಟೆಗೆ ಜಗಳೂರು ಪಟ್ಟಣಕ್ಕೆ ನಮ್ಮ ಕಾಂಗ್ರೆಸ್ ವರೀಷ್ಠರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ .ಪಟ್ಟಣದ ಬಯಲು ರಂಗಮಂದಿರದಲ್ಲಿ ಪಕ್ಷದ ವತಿಯಿಂದ ನಡೆಸಲಾದ ಬಹಿರಂಗ ಚುನಾವಣೆ ಪ್ರಚಾರದ ಸಭೆಯಲ್ಲಿ ಭಾಗವಹಿಸುವರು ನಂತರ ನಮ್ಮ ಪರವಾಗಿ ಮತಯಾಚಸಿ ಮಾತನಾಡುವರು .ಇವರೊಂದಿಗೆ ಕಾಂಗ್ರೆಸ್ ಪಕ್ಷದ ಜಮ್ಮಿರ್ ಆಹಮದ್. ಮಾಜಿ ಸಚಿವರು ಹೆಚ್ ಆಂಜನೇಯ ಹಾಗೂ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜನ್ . ಮಾಜಿ ಸಂಸದ ಚಂದ್ರಪ್ಪ. ಸೇರಿದಂತೆ ಆಗಮಿಸುವರು. ಈ ಚುನಾವಣೆ ಪ್ರಚಾರದ ಸಭೆಗೆ ಕ್ಷೇತ್ರದ ಮತದಾರರು ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.ನಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಹೊರೆತು ಪಕ್ಷೇತರ ಅಭ್ಯರ್ಥಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿ ಪಕ್ಷದ ಆಡಳಿತ ಕಂಡ ದೇಶದ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೆಸೆತ್ತು ಹೋಗಿದ್ದಾರೆ ಕಾರ್ಪೋರೆಟ್ ಕಂಪನಿಗಳ ಅದಾನಿ ಅಂಬಾನಿಯಂತ ಬಹುರಾಷ್ಟ್ರೀಯ ಮಾಲಿಕರ ಪರವಾದ ಆಡಳಿದಿಂದ ಜನ ರೋಸಿ ಹೋಗಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ವಿನ ಬಹುತ ನೀಡಿ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ . ಮೆ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಆದಪಥನವಾಗವುದರಲ್ಲಿ ಯಾವುದೇ ಸಂದೇಹವಿಲ್ಲ.ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಕಡೆಗೆ ಹೆಚ್ಚು ಒಲವುವಿದ್ದು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸೋಲಿಸಿ ನಮ್ಮ ಪಕ್ಷ ಜಯಗಳಿಸುವುದು ಶತ ಸಿದ್ದ ಎಂದು ಭರವಸೆ ವ್ಯಕ್ತಪಡಿಸಿದರು.. ಕಾಂಗ್ರೆಸ್ .ಉಚಿತ ಕಚಿತ. ಶಾಶ್ವತ ಎಂಬ ಅಮೂಲ್ಯವಾದ ನಮ್ಮ ಪಕ್ಷದ ಪ್ರಣಾಳಿಕೆ ಯುವಕರ ನಿರುದ್ಯೋಗ ಹೋಗಲಾಡಿಸಿ ಉದ್ಯೋಗ ಸೃಷ್ಠಿಗೆ ಆದ್ಯತೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಆದ್ಯತೆ. ಗೃಹ ಲಕ್ಷ್ಮಿ ಯೋಜನೆ ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ ನೀಡಲಾಗುವುದು.200 ಯುನಿಟ್ ಉಚಿತ ವಿದ್ಯುತ್ .ಸೇರಿದಂತೆ ಅನ್ನ ಬಾಗ್ಯ ಉಚಿತ ಅಕ್ಕಿ ಸೇರಿದಂತೆ ಉತ್ತಮ ಜನಪರ ಆಡಳಿತ ಪ್ರಾಣಾಳಿಕೆ ಸಾಕ್ಷಿಯಾಗಲಿವೆ. .ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ ಮಾಜಿ ಶಾಸಕರು ಪಕ್ಷದ ಬಾವುಟ ಹಿಡಿದು ಸಂಘಟನೆ ಮಾಡಲಿಲ್ಲ ಆಕಸ್ಮಿಕವಾಗಿ ಬಂದು ಶಾಸಕರಾಗಿ ಎಲ್ಲಾ ಅಧಿಕಾರ ಅನುಭವಿಸಿ ಇದೀಗ ನಮ್ಮ ಪಕ್ಷದ ಅಭ್ಯರ್ಥಿಯನ್ನು ದೂರುವುದು ಸರಿಯಲ್ಲ ನಾನು ಕೂಡ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಪಕ್ಷದಲ್ಲಿ ಸಕ್ರಿಯವಾಗಿ ಸೇವೆ ಮಾಡಿ ನಾನು ಕೂಡ ಆಕಾಂಕ್ಷಿಯಾಗಿದ್ದೆ ಆದರೆ ನಮಗೆ ಟಿಕೆಟ್ ಸಿಗಲಿಲ್ಲ ಪಕ್ಷ ಸಿದ್ದಾಂತಕ್ಕೆ ಕೆಲಸ ಮಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ನಮಗೆ ಪಕ್ಷದ ಟಿಕೆಟ್ ಸಿಗುವ ಆಶಭಾವನೆಯಿದೆ. ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಾಜಿ ಸಚಿವ ಜಿ ಎಚ್ ಅಶ್ವತರೆಡ್ಡಿರವರ ಪುತ್ರ ಶಾಮಣ್ಣ. ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ .ಎಸ್ಸಿ ಘಟಕದ ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್.ಮುಖಂಡ ರಮೇಶ್ ರೆಡ್ಡಿ ಅನುಪಮ್ ರೆಡ್ಡಿ .ತಮ್ಮಲೆಹಳ್ಳಿ ತಿಮ್ಮಣ್ಣ ಸೇರಿದಂತೆ ಮುಂತಾದವರು ಹಾಜರಿದ್ದರು.