ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಸುತ್ತಲು ಆಳವಡಿಸಿರುವ ಪೈಪಿಗೆ ಸ್ಟಿಲ್ ನ್ನು ಕಿತ್ತು ಹಾನಿ ಮಾಡಲಾಗಿದೆ.
ಸಂಬಂಧಿಸಿದ ಲೋಕಪಯೋಗಿ ಇಲಾಖೆ ಅಭಿವೃದ್ದಿಪಡಿಸುವ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಜೆಸಿಬಿ ಮೂಲಕ ಅಂಬೇಡ್ಕರ್ ಪ್ರತಿಮೆ ಸುತ್ತಲು ಹಾಕಿರುವ ಸ್ಟಿಲ್ ಕಿತ್ತು ಹಾಕಲಾಗಿದೆ.
ಆದ್ದರಿಂದ ಪಿಡಬ್ಲ್ಯೂಡಿ ಅಧಿಕಾರಿಗಳು ಶೀಘ್ರವೇ ಸರಿಪಡಿಸಬೇಕೆಂದು ದಸಂಸ ಸಂಚಾಲಕ ಕುಬೇರಪ್ಪ ಒತ್ತಾಯಿಸಿದ್ದಾರೆ.
ಅಧಿಕಾರಿಗಳುನ್ನ ವಿಚಾರಿಸಿದರೆ ಇನ್ನು ಸ್ವಲ್ಪ ಕೆಲಸವಿದೆ ಎಂದು ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ ಎಂದು ಆರೋಪಿಸಿದರು.
