ಮಹಿಳೆಯು ಕುಟುಂಬದಲ್ಲಿ ಸಹನೆ,ತ್ಯಾಗ,ಸಹಾನುಭೂತಿಯ ಪ್ರತೀಕ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ

ಜಗಳೂರು ಸುದ್ದಿ,
ಜಗಳೂರು,ಮಾ.29:ಸಮಾಜದಲ್ಲಿ ಮಹಿಳೆಯು ಕುಟುಂಬದಲ್ಲಿ ತಾಯಿಯಾಗಿ,ಪತ್ನಿಯಾಗಿ ಸಹನೆ,ತ್ಯಾಗ,ಸಹಾನುಭೂತಿಯ ಪ್ರತೀಕ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.

ಭಾನುವಾರ ಪಟ್ಟಣದ ಗುರುಭವನದಲ್ಲಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಕೀಯರ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಮಹಿಳಾದಿನಾಚರಣೆ ಹಾಗೂ ನಿವೃತ್ತ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಒಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯು ಬೆನ್ನೆಲುಬಾಗಿರುತ್ತಾಳೆ.ದೇಶದಲ್ಲಿ ಎಲ್ಲಾ ವರ್ಗದ ಮಹಿಳೆಯರಿಗೆ ಸಮಾನತೆ,ಮೀಸಲಾತಿ,ಮತದಾನದ ಹಕ್ಕು ಕಲ್ಪಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು.ಮೀಸಲಾತಿಯಿಂದ ರಾಜಕೀಯವಾಗಿ ಅತ್ಯಧಿಕ ಸ್ಥಾನಮಾನಗಳು ಸಿಗುವ ಕಾಲ ಸನ್ನೀಹಿತವಾಗಿದೆ.ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಸಾಧನೆಯ ದಾಪುಗಾಲು ಇಡುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಆಡಳಿತ ಪಕ್ಷವಿದ್ದು ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಧ್ವನಿಯಾಗುವೆ.ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕಾರ್ಯಕರ್ತೆಯರಿಗೆ ಸೂರಿನ ವ್ಯವಸ್ಥೆ ಕಲ್ಪಿಸಲಾಗುವುದು
ಸಂಘಟನೆಯೊಂದಿಗೆ ಚರ್ಚಿಸಿ ಸಮಸ್ಯೆಗಳ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಐಟಿಯುಸಿ ಕಟ್ಟಡ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಆವರಗೆರೆ ಉಮೇಶ್ ಮಾತನಾಡಿ,ರಾಜ್ಯದಲ್ಲಿ ಸರಕಾರ ಕಾರ್ಮಿಕ ಶಾಲೆಗಳ ತೆರೆಯಲು ಮುಂದಾಗಿದ್ದು ಬದಲಾಗಿ ಸರ್ಕಾರಿ ಶಾಲೆಗಳ ಉಳಿವು ಮತ್ತು ಉನ್ನತೀಕರಣಗೊಳಿಸಬೇಕು.ಕಾರ್ಮಿಕರ ಮಕ್ಕಳಿಗೆ ಸೌಲಭ್ಯ ಒದಗಿಸಬೇಕು.ಅಂಗನವಾಡಿ ಕಾರ್ಯಕರ್ತೆಯರಿಗೆ ನೌಕರರೆಂದು ಪರಿಗಣಿಸಬೇಕು,ಶ್ರಮಿಸುವ ವರ್ಗವನ್ನು ಗೌರವಿಸಬೇಕು.ಸೂಕ್ತ ಆರ್ಥಿಕ,ಸಾಮಾಜಿಕ ಭದ್ರತೆ ಒದಗಿಸಬೇಕು.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಅವರು ಬೆಳಗಾವಿಯಲ್ಲಿ ಘೋಷಿಸಿದ ಮಾಸಿಕ 15000 ವೇತನ ಸೇರಿದಂತೆ,6 ನೇ ಗ್ಯಾರಂಟಿ ಯೋಜನೆಯ ಭರವಸೆ ಹುಸಿಯಾಗಿದೆ.ಬಿಎಲ್ ಓ ಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ವಕೀಲ ಹಿರಿಯ ಪತ್ರಕರ್ತ ಡಿ.ಶ್ರೀನಿವಾಸ್ ಮಾತನಾಡಿ,ದೇಶದಲ್ಲಿ ಎಐಟಿಯುಸಿ ಕಾರ್ಮಿಕ ಸಂಘಟನೆ ಜಾತ್ಯಾತೀತ,ವರ್ಗಾತೀತ,ಧರ್ಮಾತೀತವಾಗಿ ಮಹಿಳಾ ಕಾರ್ಮಿಕರ ಸಂಘಟಿತ ಹೋರಾಟ ನಡೆಸುವ ಮೂಲಕ ಮಹಿಳೆಯರ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿದೆ.ಸಂವಿಧಾನಪೂರ್ವದಲ್ಲಿ ಬಾಲ್ಯವಿವಾಹ,ಸತಿಸಹಗಮನ ಪದ್ದತಿಗಳಂತಹ ಸಾಮಾಜಿಕ ಅನಿಷ್ಠ ಪದ್ದತಿಗಳಿಂದ ಮಹಿಳೆಯರ ಶೋಷಣೆ ವ್ಯಾಪಕವಾಗಿತ್ತು.ಸಂವಿಧಾನಬದ್ದ ಕಾನೂನುಗಳಿಂದ ಮಹಿಳೆಯರಿಗೆ ಆಸ್ತಿಹಕ್ಕು,ಸಮಾನತೆ ಸೇರಿದಂತೆ ಸೂಕ್ತ ಸ್ಥಾನಮಾನಗಳು ಲಭಿಸುತ್ತಿವೆ ಎಂದು ಹೇಳಿದರು.

ಇದೇ ವೇಳೆ ನಿವೃತ್ತ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಹಿರಿಯ ಕಾರ್ಮಿಕ ನಾಯಕರಿಗೆ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ,ಪೋಲೀಸ್ ಇನ್ಸಪೆಕ್ಟರ್ ಸಿದ್ರಾಮಯ್ಯ,ಸಿಡಿಪಿಓ ಇಲಾಖೆ ಮೇಲ್ವಿಚಾರಕಿ ಶಾಂತಮ್ಮ,ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಅಕ್ಕಭಾರತಿ,ಎಐಟಿಯುಸಿ ತಾಲ್ಲೂಕು ಪ್ರಧಾನಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್,ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕೀಯರ ಫೆಡರೇಷನ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಂಜುಳಾ,ಉಪಾಧ್ಯಕ್ಷೆ ಕುಸುಮಾ,ತಾಲ್ಲೂಕು ಗೌರವಾಧ್ಯಕ್ಷೆ ವೈ.ಹಾಲಮ್ಮ,ಕಟ್ಟಡ ಕಾರ್ಮಿಕರ ಸಂಘಟನೆ ತಾಲ್ಲೂಕು ಕಾರ್ಯದರ್ಶಿ ಗೊಲ್ಲರಹಟ್ಟಿ ತಿಪ್ಪೇಸ್ವಾಮಿ,ಬಿಸಿಯೂಟ ಕಾರ್ಯಕರ್ತೆಯ ಸಂಘಟನೆ ಭಾರತಮ್ಮ,ಗೀತಮ್ಮ,ಎಐಟಿಯುಸಿ ಮುಖಂಡರಾದ ಪುಷ್ಪಾ,ವಿಮಲಾ, ಮಂಜಮ್ಮ,ಗೌರಮ್ಮ,ವನಜಾಕ್ಷಿ,ಗಿರಿಜಾ,ಲೀಲಾವತಿ,ಬೊಮ್ಮಕ್ಕ,ಸಮಾಜಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ನೂರಾರು ಕಾರ್ಯಕರ್ತೆಯರು ಇದ್ದರು.

:
ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುವ ಗೌರವಧನದಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟಕರವಾಗಿದೆ.ಸರಕಾರ ಜನಗಣತಿ ಕಾರ್ಯದಲ್ಲಿ ಕಾರ್ಯ ಕರ್ತೆಯರು ಸೇವೆಗೈಯುತ್ತಿರುವ ಕೇಂದ್ರದ ವ್ಯಾಪ್ತಿಯಲ್ಲಿಯೇ ಅವಕಾಶ ನೀಡಬೇಕು.ಪಟ್ಟಣದವರನ್ನು ಗ್ರಾಮೀಣ ಪ್ರದೇಶಗಳಿಗೆ ನಿಯೋಜನೆ ಮಾಡಿದರೆ ಅಪರಿಚಿತ ಸ್ಥಳದಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯವಾಗಲಿದೆ.ಬ್ಯಾಂಕ್ ಮುಖ ನೊಡದೆ ಇರುವ ಮಹಿಳೆಯರಿಗೆ ಸ್ವ ಸಹಾಯ ಸಂಘಗಗಳ ಸ್ಥಾಪನೆ ಮಾಡಿ,ಬ್ಯಾಂಕ್ ವ್ಯವಹಾರ ನಡೆಸುತ್ತಿದ್ದಾರೆ.ಇದರಿಂದ ದೇಶದ ಆರ್ಥಿಕ ಕೊಡುಗೆಯನ್ನು ನೀಡುತ್ತಿದ್ದಾರೆ.
—- ಮಲ್ಲಮ್ಮ,ಜಿಲ್ಲಾಧ್ಯಕ್ಷೆ,ಅಂಗನವಾಡಿ ಕಾರ್ಯಕರ್ತೆಯರ,ಸಹಾಯಕೀಯರ ಫೆಡರೇಷನ್.ದಾವಣಗೆರೆ

Leave a Reply

Your email address will not be published. Required fields are marked *

error: Content is protected !!