ಒಂದೇ ಕುಟುಂಬ ನಾಲ್ವರು ಮಕ್ಳು ದುರ್ಮರಣ!!
ಯಾದಗಿರಿ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಜಲಸಮಾಧಿ.!
ಮೃತ ಮಕ್ಕಳನ್ನು ನಗನೂರಿನ ರಾಜೀವ್ ಬಾಲಪ್ಪ ಅವರ ಮಕ್ಕಳಾದ ಶರತ್(6), ಹನುಮೇಶ್(7), ಮಲ್ಲಪ್ಪ ಬಾಲಪ್ಪ ಅವರ ಪುತ್ರ ಕಿರಣ್(6) ಹಾಗೂ ರಾಜೀವ್ ಅವರ ಸಹೋದರಿ ಗುಬ್ಬಮ್ಮ ಅವರ ಪುತ್ರಿ ಬಸಮ್ಮ(11) ಎಂದು ಗುರುತಿಸಲಾಗಿದೆ.
ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಜಲಸಮಾಧಿಯಾಗಿರುವ ದಾರುಣ ಘಟನೆ ಭಾನುವಾರ ನಡೆದಿದೆ.
ಮೃತ ಮಕ್ಕಳನ್ನು ನಗನೂರಿನ ರಾಜೀವ್ ಬಾಲಪ್ಪ ಅವರ ಮಕ್ಕಳಾದ ಶರತ್(6), ಹನುಮೇಶ್(7), ಮಲ್ಲಪ್ಪ ಬಾಲಪ್ಪ ಅವರ ಪುತ್ರ ಕಿರಣ್(6) ಹಾಗೂ ರಾಜೀವ್ ಅವರ ಸಹೋದರಿ ಗುಬ್ಬಮ್ಮ ಅವರ ಪುತ್ರಿ ಬಸಮ್ಮ(11) ಎಂದು ಗುರುತಿಸಲಾಗಿದೆ.
ರೈತರ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಕೃಷಿ ಹೊಂಡವು ರಕ್ಷಣಾ ಬೇಲಿ ಇಲ್ಲದೆ ಎಳೆಯ ಕಂದಮ್ಮಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಕೃಷಿ ಹೊಂಡದಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳು ಜಲಸಮಾಧಿಯಾಗಿರುವ ವಿಷಯ ತಿಳಿದು ಪೋಷಕರು ಮತ್ತು ಸಂಬಂಧಿಕರಿಗೆ ತೀವ್ರ ಆಘಾತವಾಗಿದೆ. ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ್ದ ಕಾರಣ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.