Editor by .m rajappa vyasagondanahalli
Shukradeshe news online portal Kannada news jlr raste agalikrana horata smiti jlr date _2_5_2026
ಸಮಾಜದಲ್ಲಿರುವ ಅಜ್ಘಾನವನ್ನ ಹೋಗಲಾಡಿಸಿ ಶಾಂತಿ ಮಾರ್ಗ ತೋರಿಸಿದ ಮಹಾನ್ ಬುದ್ದನ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿವೆ. ಪ್ರಾಂಶುಪಾಲರಾದ ನಾಗಲಿಂಗಪ್ಪ ಕರೆ ನೀಡಿದರು
ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ರಸ್ತೆ ಅಗಲಿಕರಣ ಹೋರಾಟ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಬುದ್ದಪೂರ್ಣಿಮೆ ಮತ್ತು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಬುದ್ದ ಪೂರ್ಣಿಮೆ ಕುರಿತು ಮಾತನಾಡಿದರು.
ಬುದ್ದ ಅಷ್ಟಾಂಗ ಮಾರ್ಗಗಳ ಮೂಲಕ ವಿಶ್ವಪರ್ಯಾಟನೆ ಮಾಡಿ ಸಮಾಜದಲ್ಲಿರುವ ಅಸಮಾನತೆ ದ್ವೇಷ ಅಸೂಹೆ .ದುಖ ದುಮ್ಮಾನಗಳ ಅಸಹನೆಗೆ ಮದ್ದು ಕಂಡು ಹಿಡಿದು ಸರ್ವ ಜನರು ಸಹ ಸಹನೆ ಸಹಬಾಳ್ವೆಯಿಂದ ಜೀವಿಸಲು ಸನ್ಮಾರ್ಗ ತೋರುವ ಮೂಲಕ ಆಸೆಯೇ ದುಖಕ್ಕೆ ಮೂಲ ಎಂದು ಸಾರಿದ್ದಾರೆ. ಬುದ್ಧನ ಚಿಂತನೆಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಶಾಂತಿ ಮತ್ತು ಸೌಹಾರ್ದತೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದರು.ನಾಗಲಿಂಗಪ್ಪ
ರಸ್ತೆ ಅಗಲಿಕರಣ ಹೋರಾಟ ಸಮಿತಿ ಮುಖಂಡ ಆರ್ .ಒಬಳೇಶ್ ಪ್ರಾಸ್ತವಿಕವಾಗಿ ಮಾತನಾಡಿದರು ದೇಶದಲ್ಲಿ ರೈತರು ಮತ್ತು .ಕಾರ್ಮಿಕರು .ಶೋಷಿತರು ಶೋಷಣೆ ಒಳಗಾಗಿದ್ದಾರೆ. ದುಡಿಯುವ ವರ್ಗಕ್ಕೆ ಸೌಲಭ್ಯಗಳು ವಂಚಿತವಾಗಿವೆ. ಅಸಮಾನತೆ .ಅಂಧಕಾರ ಹೆಚ್ಚಾಗಿದೆ .ನಿರೋದ್ಯೋಗ ಸಮಸ್ಯೆ ಉಲ್ಬಣವಾಗುತ್ತಿದೆ. ಜಗಳೂರಿನ ಜ್ವಲಂತ ಸಮಸ್ಯೆ ರಸ್ತೆ ಅಗಲಿಕರಣ ನೆನೆಗುದಿಗೆ ಬಿದ್ದಿದೆ. ವಾಹನ ಸಂಚಾರ ಅಸ್ಥವ್ಯಸ್ಥವಾಗುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ.
ಮಲ್ಪೆ ಟು ಮೊಳಕಾಲ್ಮರು 69 ಅಡಿ ರಸ್ತೆ ಅಗಲಿಕರಣ ಅಪೂರ್ಣ ಕಾಮಗಾರಿ ಪೂರ್ಣಗೋಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಡ ತರಲು ಸಂಘಟಕರು ಒಕ್ಕೂಲಿರನ ದ್ವನಿಯಾಗುವಂತೆ ಕರೆ ನೀಡಿದರು.ಒಬಳೇಶ್
ಜಗಳೂರಿನ ಅಪ್ಪರ್ ಭದ್ರಾ ಯೋಜನೆ 57ಕೆರೆ ತುಂಬಿಸುವ ಯೋಜನೆ ಅನೇಕ ಯೋಜನೆಗಳು ಜನಪರವಾದ ಹೋರಾಟದಿಂದ ಜಾರಿಗೆ ಬಂದಿವೆ .ಆದ್ದರಿಂದ ಬುದ್ದ ಬಸವ.ಅಂಬೇಡ್ಕರ್ ಚಿಂತನೆಗಳ ಮೂಲಕ ಹೋರಾಟ ಅನಿವಾರ್ಯವಾಗಿದೆ ಎಂದರು.
ಪ್ರಗತಿಪರ ಹೋರಾಟಗಾರ ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿದರು ಬುದ್ದನ ಸನ್ಮಾರ್ಗವನ್ನ ಅನುಸರಿಸಿದ ಮೌರ್ಯ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ ಚಕ್ರವರ್ತಿ ಅಶೋಕ ಚರ್ಕವರ್ತಿ ಧರ್ಮ ಯುದ್ದದ ಮೂಲಕ ಶಾಂತಿ ಸಹನೆ ಸಾರಿದ್ದಾರೆ, ಇವರು ಬಿಂದುಸಾರನ ಮಗ ಮತ್ತು ಚಂದ್ರಗುಪ್ತ ಮೌರ್ಯನ ಮೊಮ್ಮಗ. ಕಳಿಂಗ ಯುದ್ಧದ ಭೀಕರತೆ ಕಂಡು ಹಿಂಸೆಯನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಅಳವಡಿಸಿಕೊಂಡರು. ನಂತರ ‘ಧರ್ಮವಿಜಯ’ ನೀತಿಯ ಮೂಲಕ ಶಾಂತಿ, ಅಹಿಂಸೆ ಮೂಲಕ ಧರ್ಮ ಯುದ್ದಕ್ಕೆ ಸಾಕ್ಷಿಯಾಗಿದ್ದಾರೆ.
.ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಕೂಡ ಈ ದೇಶದ ಅನಿಷ್ಟ ಜಾತಿವ್ಯವಸ್ಥೆಯಲ್ಲಿ ಅನೇಕ ಅವಮಾನಗಳನ್ನು ಅನಭವಿಸಿ ಜಾತಿ ಜಾಡ್ಯಕ್ಕೆ ತಿಲಾಂಜಲಿ ಹಾಡಲು ಬೌದ್ದ ದರ್ಮಕ್ಕೆ ಸೇರಿದರು ಇಂತ ಬುದ್ದಪೂರ್ಣೆಮೆ .ಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿದೆ. ರಸ್ತೆ ಅಗಲಿಕರಣ ಹೋರಾಟದ ಸಭೆ ಹೊರಾಟದ ಅಸ್ಥಿತ್ವದ ನಡೆಯಾಗಿದ್ದು ಜಿಲ್ಲಾಧಿಕಾರಿಗಳ ಗಮನ ಸೆಳೆಯುವಂತೆ ಹೋರಾಟ ಅನಿವಾರ್ಯ ಮತ್ತು ಅಗತ್ಯವಾಗಿದೆ ಎಂದರು .
ಪತ್ರಕರ್ತ ಧನ್ಯಕುಮಾರ ಮಾತನಾಡಿದರು ಹಿಡಿ ಜಗತ್ತಿನಲ್ಲಿಯೇ ಬುದ್ದನ ಚಿಂತನೆಗಳು ಸರ್ವಕಾಲಕ್ಕೂ ಸತ್ಯವಾಗಿವೆ. ಸಮನತೆಯ ಸಾಮರಸ್ಯ ಜೀವನಕ್ಕೆ ಬುದ್ದನ ಮಾರ್ಗಗಳು ಅನನ್ಯವಾಗಿವೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವಾಸು ದೇವ ಮೇಟಿ ಬಣದ ತಾಲ್ಲೂಕು ಅದ್ಯಕ್ಷ ಭರಮಸಮುದ್ರ ಕುಮಾರ. ರೈತ ಸಂಘದ ಮುಖಂಡ ಲೋಕೇಶ್. ತಿಪ್ಪೆಸ್ವಾಮಿ .. ಎಸ್.ಸಿ.ಎಸ್.ಟಿ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷರಾದ ಹೆಚ್ ಆರ್ ಬಸವರಾಜ್.ಮಾನವ ಹಕ್ಕುಗಳ ಹೋರಾಟ ಸಮಿತಿ ತಿಪ್ಪೇಸ್ವಾಮಿ. ಮಹಿಳಾ ಹೋರಾಟಗಾರ್ತಿ ಇಂದ್ರಮ್ಮ. ಶಿಕ್ಷಕರಾದ ಲೋಕೇಶ್ . ವಕೀಲರಾದ ಕಿರಣಕುಮಾರ್ .ತೋರಣಗಟ್ಟೆ ಕುಮಾರ್.ರೈತ ಸಂಘದ ದೊಡ್ಡಬೊಮ್ಮನಹಳ್ಳಿ ಬಸವರಾಜ್.ಎ.ಐ.ಟಿ.ಯು.ಸಿ ಕಾರ್ಯಧರ್ಶಿ ತಿಪ್ಪೇಸ್ವಾಮಿ. ಸೇರಿದಂತೆ ಅನೇಕ ರೈತ ಹೋರಾಟಗಾರರು ಹಾಜುರಿದ್ದರು.
ಹೋರಾಟಗಾರ ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ರವರ ತಾಯಿ ದೈವಧಿನರಾದ ಹಿನ್ನಲೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು….
