ರಸ್ತೆಯಲ್ಲಿ ಅಪಘಾತಕ್ಕೀಡಾದವರ ಮಹಿಳೆ ನೆರವಿಗೆ ಧಾವಿಸಿ ಶಾಸಕ.ಬಿ ದೇವೇಂದ್ರಪ್ಪ , ಮಾನವೀಯತೆ ಮೆರೆದಿದ್ದಾರೆ.

ಜಗಳೂರು‌ ತಾಲ್ಲೂಕಿನ ಮೆದಕೆರೆನಹಳ್ಳಿ ಗ್ರಾಮದ ರಸ್ತೆ ಆಪಾಘಾತದಲ್ಲಿ ಬೈಕ್ ಬೈಕ್ ಡಿಕ್ಕಿಯಾದ ಹಿನ್ನಲೆಯಲ್ಲಿ ವಾಹನ ಸವಾರರು ಆಪಾಘಾತಕ್ಕಿಡಾಗಿದ್ದರು ದಾವಣಗೆರೆ ಮಾರ್ಗವಾಗಿ‌ ತೆರಳುವ ಸಂದರ್ಭದಲ್ಲಿ ಆಪಾಘಾತ ಕಂಡ ಜಗಳೂರು ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪರವರು ಗಾಯಳು ಗೋವಿಂದಮ್ಮ ವಾಹನ ಸವಾರನನ್ನ ತಕ್ಷಣ ಶಾಸಕರ ಕಾರಿನಲ್ಲಿ ಅವರ ಅಂಗರಕ್ಷಕರ ಸಹಾಯದಿಂದ ಅತ್ತಿರದ ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಗಾಯಳುಗಳು ಸ್ವಂತ ಊರಾದ ದಾವಣಗೆರೆ ಬಳಿ ಬಸವನಾಳು ಗೊಲ್ಲರಹಟ್ಟಿ ಗ್ರಾಮದಿಂದ ಕೂಡ್ಲಿಗಿ‌ ತಾಲ್ಲೂಕಿನ ಆಲೂರು ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗದ ದಿನಾಂಕ‌ ಏಪ್ರಿಲ್ .23 ರಂದು 12 ಗಂಟೆ ಸಮಯದಲ್ಲಿ ಜಗಳೂರು ತಾಲ್ಲೂಕಿನ ಮೆದಕೆರೆನಹಳ್ಳಿ ಬಳಿ ರಸ್ತೆಯಲ್ಲಿ ಅಪಘಾತಕ್ಕೀಡಾಗಿ‌ ನರಳುತ್ತಿದ್ದನ ಕಂಡ ಶಾಸಕರು ಪ್ರತ್ಯಕ್ಷವಾಗಿ ಕಂಡು ಅವರ ಒತ್ತಡದ ಕೆಲಸಗಳ ಮದ್ಯೆ ಆಪಾಘಾತಕ್ಕಿಡಾದ ಗಾಯಳುಗಳ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಗಂಭೀರ ಗಾಯಗೊಂಡ ಮಹಿಳೆ ಗೋವಿಂದಮ್ಮಳನ್ನು ಹಾಗೂ ವಾಹನ ಸವಾರನ್ನನ್ನ ತಮ್ಮ ಶಾಸಕರ ವಾಹನದಲ್ಲಿ ಕರೆ ತಂದ ಶಾಸಕರ ಆಪ್ತ ಸಹಾಯಕರು‌ ಆಸ್ಪತ್ರೆಗೆ ಸೇರಿಸಿ ಜೀವ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ .

ಪ್ರಸ್ತುದಲ್ಲಿ ಕಂಡರು ಕಾಣದಂತೆ ತೆರಳುವ ಅದೇಷ್ಟು ಕೆಲ ಜನಪ್ರತಿನಿಧಿಗಳ ನಡುವೆ ಸರಳ ಸೌಮ್ಯ ಸ್ವಭಾವದ ಶಾಸಕರು‌ ಆಪಾಘಾತ ಕಂಡ ತಕ್ಷಣ ತನ್ನ ಕಾರು ನಿಲ್ಲಿಸಿ ಸ್ಥಳದಲ್ಲಿಯೆ ನಿಂತು‌ ಅವರ ಅಪ್ತ ಸಹಾಯಕರೊಂದಿಗೆ ಹಾಗೂ ಅವರ ಅಂಗ ರಕ್ಷಕನ ನೆರವಿನೊಂದಿಗೆ ಗಾಯಳುಗಳನ್ನ ಸರ್ಕಾರಿ ಸಾರ್ವಜನಿಕ‌ ಅಸ್ಪತ್ರೆಗೆ ತುರ್ತು ಆಗಿ ಕರೆ ತಂದು ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಿದ್ದಾರೆ.

ತಾಲ್ಲೂಕಿನಲ್ಲಿ ಸರ್ಕಾರಿ ಅಂಬುಲೇನ್ಸೆ‌ ಇದ್ದರು ಉಪಯೋಗಕ್ಕೆ ಬಾರದಂತಾಗಿದೆ. ಸರ್ಕಾರಿ ಆಸ್ಪತ್ರೆಗೆ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿ ಜನರ ಸೇವೆಗಾಗಿ ಕ್ಷೇತ್ರಕ್ಕೆ ಮೂರು ನಾಲ್ಕು ಅಂಬುಲೇನ್ಸ್ ಬಿಟ್ಟರು ಸಹ ಸಮಯಕ್ಕೆ ಸರಿಯಾಗಿ ಬಾರದೆ ಅದೇಷ್ಟು ಪ್ರಾಣಗಳು ಆಹುತಿಯಾಗಿವೆ. ತಾಲ್ಲೂಕು ವೈದ್ಯಾಧಿಕಾರಿ ವಿಶ್ವನಾಥ ಮತ್ತು ಅವರ ಸಿಬ್ಬಂದಿಗಳ ಬೇಜವಬ್ದಾರಿತನದಿಂದ ಕ್ಷೇತ್ರದಲ್ಲಿ ಅಂಬುಲೇನ್ಸ್ ಗಳು ಸರಿಯಾಗಿ‌ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪವಾಗಿದೆ.

Leave a Reply

Your email address will not be published. Required fields are marked *

error: Content is protected !!