ಬಿಜೆಪಿ 40 ಪರಿಷಂಟ್ ಸರ್ಕಾರಕ್ಕೆ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಪಾಠ ಕಲಿಸಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದು ಶತ ಸಿದ್ದ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. . ಶುಕ್ರದೆಸೆ ನ್ಯೂಸ್ :- ಮಾಜಿ ಶಾಸಕ ಹೆಚ್ ಪಿ ರಾಜೇಶ್ ನಮ್ಮ ಪಕ್ಷದಲ್ಲಿ ಗೆದ್ದು ಇದೀಗ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ದ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನನಗೆ ಬೆಂಬಲ ವ್ಯಕ್ತಪಡಿಸುವರು ಎಂದು ಹೇಳಿಕೊಳ್ಳುತ್ತಿರುವುದು ಶುದ್ದ ಸುಳ್ಳು ನಮ್ಮ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಯಾರೆ ಷಂಡ್ಯಂತ್ರ ಮಾಡಿದರೆ ಅಂತವರುನ್ನು ಪಕ್ಷದಿಂದ ಉಚ್ಛಟಿಸಲಾಗುವುದು ಇನ್ನು ಎರಡು ಮೂರು ದಿನಗಳಲ್ಲಿಯೆ ಪಕ್ಷದಿಂದ ರಾಜೇಶ್ ನನ್ನು ಉಚ್ಛಾಟನೆ ಮಾಡಲಿದ್ದೆವೆ. ಕ್ಷೇತ್ರದ ಮತಬಾಂದವರು ರಾಜೇಶ್ ನನ್ನು ತಿರಸ್ಕರಿಸಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರುನ್ನು ಪುರಸ್ಕರಿಸಿ ಅತ್ಯಂತ ಬಹುಮತಗಳಿಂದ ಗೆಲುವಿಗೆ ಮತ ನೀಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಷ್ಟನೆ .* ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಿಂದ ಗೆಲುವು ಖಚಿತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ. . ಜಗಳೂರು ಪಟ್ಟಣದ ಬಯಲು ರಂಗ ಮಂದಿರದಲ್ಲಿ ಇಂದು ಭಾನುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರದ ಸಭೆ ಆಯೋಜಿಸಲಾಗಿತ್ತು ಪಟ್ಟಣದ ಹೊರವಲಯದಲ್ಲಿರುವ ಸ್ಟೇಡಿಯಂನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಲಿಕ್ಯಾಪ್ಟ್ರು ಮೂಲಕ ನಗರಕ್ಕೆ ಆಗಮಿಸಿ ಪ್ರಚಾರದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚಾರದ ಸಭೆಯನ್ನು ಉದ್ಗಾಟಿಸಿ ನಂತರ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯರವರ ಕುರಿತು ಹಾಡಿದ ಗೀತೆಯೊಂದನ್ನು ಅವರ ಕೈಯಿಂದ ಬಟನ್ ಒತ್ತುವ ಮೂಲಕ ಬಿಡುಗಡೆಗೊಳಿಸಲಾಯಿತು.. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನ ಸಾಮನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೇವಲ ಬಿಜೆಪಿ ಸರ್ಕಾರದಿಂದ ಆಚ್ ದಿನ ಎಂದು ಬಾಯಿಯಲ್ಲಿ ಹೇಳುತ್ತಿರುವ ಮೋದಿಯವರೆ ಎಲ್ಲಿದೆ ಆಚ್ ದಿನ ಎಂದು ಪ್ರಶ್ನೆಸಿದರು.ನಮ್ಮ ಸರ್ಕಾರದ ಅವಧಿಯಲ್ಲಿ ಮೊಟ್ಟ ಮೊದಲ ಬಾರಿಗೆ ಎಸ್ಸಿ ಎಸ್ಟಿ ವರ್ಗದ ಜನರಿಗೆ ಎಸ್ಟಿಪಿ. .ಟಿ ಎಸ್ಪಿ ಯೋಜನೆಡಿಯಲ್ಲಿ ಮೀಸಲು ಕಾಯ್ದೆ ಮತ್ತು ಗುತ್ತಿಗೆಯಲ್ಲಿ ಮಿಸಲಾತಿ ಕಲ್ಪಿಸಲಾಗಿತ್ತು. ನಮ್ಮ ಕಾಂಗ್ರೆಸ್ ನ ಹಲವು ಭಾಗ್ಯಗಳ ಯೋಜನೆಗಳಾದ ಅನ್ನ ಭಾಗ್ಯ .ಶಾಧಿ ಬಾಗ್ಯ.ಕ್ಷೀರಾ ಬಾಗ್ಯ.ಹಸು ಬಾಗ್ಯದಂತ ಜನಪರ ಯೋಜನೆಗಳಿಗೆ ಈ ಭ್ರಷ್ಟ ಬಿಜೆಪಿ ಸರ್ಕಾರ ಕೊಡಲಿ ಪೆಟ್ಟು ನೀಡಿದೆ.ನಮ್ಮ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜಗಳೂರು ಕ್ಷೇತ್ರಕ್ಕೆ 57 ಕೆರೆ ನೀರು ತುಂಬಿಸುವ ಯೋಜನೆ ಅನುಷ್ಠಾನ ಮಾಡಿ 3000 ಸಾವಿರ ಕೊಟಿ ರೂಗಳ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಇದೀಗ ಬಿಜೆಪಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಲೂಟಿ ಹೊಡೆದು 40 ಪರಿಷಂಟ್ ಕಮೀಷನ್ ಸರ್ಕಾರವೆಂದು ಹಿಡಿ ದೇಶಕ್ಕೆ ಹೆಸರಾಗಿದೆ. ಪುನ ನಮ್ಮ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದು ಶತ ಸಿದ್ದ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರಿಗೆ ಮತ ನೀಡೀದರೆ ನನಗೆ ಮತ ಹಾಕಿದಂತೆ ಆದ್ದರಿಂದ ಕಾಂಗ್ರೆಸ್ ಗೆಲುವಿಗೆ ನಿಮ್ಮ ಅಮೂಲ್ಯವಾದ ಮತವನ್ನ ಬರುವ ಮೆ 10 ರಂದು ನಡೆಯುವ ಚುನಾವಣೆಯಲ್ಲಿ ಜನರ ಹಿತಾ ಕಾಯುವಂತ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರಲ್ಲಿ ಮತಯಾಚಿಸಿದರು. ಕೆ ಪಿ ಪಾಲಯ್ಯ ಒಬ್ಬ ಪಕ್ಷ ನಿಷ್ಠಾವಂತ ಕಾರ್ಯಕರ್ತ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು ಆದರೆ ಸಮೀಕ್ಷೆಯಲ್ಲಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಕೆಪಿ ಪಾಲಯ್ಯ ಬಂಡಾಯ ಅಭ್ಯರ್ಥಿಯಾಗದೆ ಪಕ್ಷ ನಿಷ್ಠೆಗೆ ಬದ್ದನಾಗಿದ್ದಾನೆ ಎಂದು ಮಾಜಿ ಸಿ ಎಂ ಪ್ರಶಂಸೆಸಿದರು. ಕೆ.ಪಿ ಸಿ .ಸಿ ಕಾರ್ಯಧರ್ಶಿ ಅಸಗೋಡು ಜಯಸಿಂಹ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯನವರ ಆಡಳಿತದಿಂದ ಮಾತ್ರ ಬಡವರ ದೀನದಲಿತರ ಎಲ್ಲಾ ವರ್ಗದ ಜನರ ಆಶಾಕಿರಣರವಾಗುವುದು. ಬಸವಣ್ಣ ಕಂಡಂತ ನಾಡಿನಲ್ಲಿ ನುಡಿದಂತೆ ನಡೆದ ಸರ್ಕಾರ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾತ್ರ ಈ ಬಾರಿ ರಾಜ್ಯದಲ್ಲಿ ಮತ್ತು ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಒಂದು ಅಭೂತಪೂರ್ವವಾಗಲಿದೆ ಎಂದು ಹೇಳಿದರು. * ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾತನಾಡಿದರು. ನಾನು ಶಿಕ್ಷಣ ಸಂಸ್ಥೆಯೊಂದರಲ್ಲಿ ಸಾಮಾನ್ಯ ನೌಕರನಾಗಿ ಕಸ ಮತ್ತು ಗಂಟೆ ಹೊಡೆದು ಸಾಮಾನ್ಯ ನೌಕರನಾಗಿ. ಇದೀಗ ಕಾಂಗ್ರೆಸ್ ವರೀಷ್ಠರು ನನಗೆ ಟಿಕೆಟ್ ನೀಡಿ ಅಶಿರ್ವಾದ ಮಾಡಿದರ ಫಲವಾಗಿ ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದ ಗಂಟೆ ಹೊಡೆಲು ಸಿದ್ದನಿದ್ದೆನೆ. ಮತದಾರರು ನನಗೆ ಒಂದು ಬಾರಿ ಆವಕಾಶ ಕಲ್ಪಿಸಿದರೆ ನಿಮ್ಮಗಳ ಅಗತ್ಯ ಸೇವೆ ಮಾಡಲು ಕಾತುರನಾಗಿರುವೆ. ಪಕ್ಷಕ್ಕೆ ನಿಷ್ಠಾವಂತ ವ್ಯಕ್ತಿತ್ವದ ನಾಯಕ ಕೆ.ಪಿ ಪಾಲಯ್ಯ ಮತ್ತು ನಾನು ಕ್ಷೇತ್ರದಲ್ಲಿ ಎರಡು ಜೋಡಿತ್ತಿನಂತೆ ಪ್ರಚಾರಕ್ಕಿಳಿದಿದ್ದು ನಮ್ಮಗೆ ಕ್ಷೇತ್ರದ ಮತದಾರರು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳುವರು ಜನರ ಪ್ರಿತಿ ಅಭಿಮಾನ ಅವರ ವಿಶ್ವಾಸವೆ ನಮ್ಮ ಗೆಲುವಿಗೆ ರಹಾದಾರಿಯಾಗಲಿದೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪಪಂ ಸದಸ್ಯ ರಮೇಶ್ ರೆಡ್ಡಿ ಪುತ್ರ ಚಿಕ್ಕ ಬಾಲಕ ಮಾನ್ಯ ಸಿದ್ದರಾಮಯ್ಯನವರು ವರ್ಣಾ ಕ್ಷೇತ್ರದಲ್ಲಿ ಗೆದ್ದು ಬರಲಿ ಎಂದು 10 ಸಾವಿರ ದೇಣಿಗೆ ನೀಡಿದ ಪ್ರಸಂಗ ಕಂಡು ಬಂದಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ್ ರಾಥೋಡ್. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ.ಮಂಜಪ್ಪ.ಯುವ ಕಾಂಗ್ರೆಸ್ ನಿಖಿಲ್.ಮಾಜಿ ಕಾಂಗೈ ಅಧ್ಯಕ್ಷ ಪಿ ಎಸ್ ಸುರೇಶ್ ಗೌಡ್ರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಆಹಮದ್.ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಕಾಂಗ್ರೆಸ್ ಪಪಂ ಸದಸ್ಯರಾದ ರಮೇಶ್ ರೆಡ್ಡಿ .ರವಿಕುಮಾರ್ ಶಕೀಲ್ ಆಹಮದ್.ಮಂಜಣ್ಣ.ಅರಸಿಕೆರೆ ಬಾಗದ ಉಮಾದೇವಿ. ಅಲ್ಪಸಂಖ್ಯಾತ ಘಟಕದ ಮಹಮದ್ ಆಲಿ ಸೇರಿದಂತೆ ಮುಂತಾದವರು ಹಾಜರಿದ್ದರು.