ನಾಗರಕಟ್ಟೆಯ ಹನುಮಂತ ನಾಯ್ಕ ಸಿ ಅವರಿಗೆ ಒಲಿದ “ಕರುನಾಡ ಬಂಜಾರ ಕೋಗಿಲೆ” ಪ್ರಶಸ್ತಿ…..
ದಾವಣಗೆರೆ ಮೇ 20
ನಗರದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮಧುನಾಯ್ಕ್ ಲಮಾಣಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಖ್ಯಾತ ಸಾಹಿತಿಗಳು ಅವರ ನೇತೃತ್ವದಲ್ಲಿ “ಕೋವಲ್ ಬಂಜಾರ – ಬಂಜಾರ ಗಾಯನ ಸ್ಪರ್ಧೆ ಸಂಚಿಕೆ 01” ಕಾರ್ಯಕ್ರಮ ದಲ್ಲಿ ಅತ್ತ್ಯುತ್ತಮ ಜಿಲ್ಲಾ ಪ್ರಶಸ್ತಿ ಪಡೆದ ನಾಗರಕಟ್ಟಿ ಹನುಮಂತ ನಾಯ್ಕ್ ರವರಿಗೆ ಉತ್ತಮ ಗಾಯನಕ್ಕೆ ಕರು ನಾಡ ಬಂಜಾರ ಕೋಗಿಲೆ ಪ್ರಶಸ್ತಿ ದೊರಕಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸಿದ ಸುಮಾರು 30 ಜನ ಆಯ್ದ ಗಾಯಕರು ಲಂಬಾಣಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ತಮ್ಮ ಸುಮಧುರ ಗಾಯನದ ಮೂಲಕ ಎಲ್ಲರ ಮನಸೆಳೆದರು. ಬಂಜಾರ ಸಂಸ್ಕೃತಿ, ಸಂಪ್ರದಾಯ, ಆಚರಣೆ, ಇತಿಹಾಸ ಹಾಗೂ ಧಾರ್ಮಿಕ ಗೀತೆಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದ ನಿರೂಪಣೆಯನ್ನು ಗಾನ ಕೋಗಿಲೆ ಹನುಮಂತ ನಾಯ್ಕ್ ಅವರು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಆರಂಭ ದಲ್ಲಿ ಪ್ರಾರ್ಥನೆಯನ್ನು ಕಲಾಶ್ರೀ ವಸಂತ್ ಚೌಹಾಣ್ ನೆರವೇರಿಸಿದರು. ಖ್ಯಾತ ಗಾಯಕರು ಹಾಗೂ ಸಾಹಿತಿಗಳಾದ ಶ್ರೀ ಕುಬೇರ್ ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಬಂಜಾರ ಸೇವಾ ಸಂಘದ ಅಧ್ಯಕ್ಷರು, ಖ್ಯಾತ ಕಲಾವಿದರು, ಸಮಾಜ ಸೇವಕರಾದ ನಂಜಾ ನಾಯ್ಕ ಅವರು ವಹಿಸಿದ್ದರು.
ಕೃತಿ ಲೋಕಾರ್ಪಣೆಯನ್ನು ಖ್ಯಾತ ಹಿರಿಯ ಸಾಹಿತಿಗಳಾದ ಶ್ರೀಮತಿ ಇಂದೂಮತಿ ಲಮಾಣಿ ನೆರವೇರಿಸಿದರು. ಕಾರ್ಯದರ್ಶಿಗಳಾದ ಕವಿತ ಚಂದ್ರನಾಯ್ಕ್, ಸುಜಾತಾ ಚಂದ್ರದರ ನಾಯ್ಕ್, ಶ್ರೀಮತಿ ಭಾಗ್ಯ ನಾಗರಾಜ ಹಾಗೂ ಮಂಜಾ ನಾಯ್ಕ್ ನಾಗರಕಟ್ಟೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಖ್ಯಾತ ಬಂಜಾರ ಗಾಯಕರು ಹಾಗೂ ಸಾಹಿತಿಗಳಾದ ಕುಬೇರ್ ನಾಯ್ಕ್ ಮತ್ತು ಕಲಾಶ್ರೀ ವಸಂತ್ ಚೌಹಾಣ್ ತೀರ್ಪುಗಾರರಾಗಿ ಭಾಗವಹಿಸಿ ಸ್ಪರ್ಧಾಳುಗಳ ಗಾಯನವನ್ನು ಮೌಲ್ಯಮಾಪನ ಮಾಡಿದರು. ಸ್ಪರ್ಧೆಯನ್ನು ಎರಡು ಸುತ್ತುಗಳಲ್ಲಿ ನಡೆಸಲಾಗಿದ್ದು, ಮೊದಲ ಸುತ್ತಿನಲ್ಲಿ 11 ಜನ ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಂತಿಮ ಸುತ್ತಿನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಘೋಷಿಸಲಾಯಿತು.
ಈ ಸ್ಪರ್ಧೆಯಲ್ಲಿ ಈಗಾಗಲೇ “ಕರುನಾಡ ಗಾನ ಕೋಗಿಲೆ” ಪ್ರಶಸ್ತಿ ಪಡೆದಿರುವ ನಾಗರಕಟ್ಟೆಯ ಹನುಮಂತ ನಾಯ್ಕ ಸಿ ಅವರು ಅದ್ಭುತ ಗಾಯನ ಪ್ರದರ್ಶನ ನೀಡಿ “ಕರುನಾಡ ಬಂಜಾರ ಕೋವಲ್” ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ₹5000 ನಗದು ಬಹುಮಾನ ಹಾಗೂ ಟ್ರೋಫಿ ಸನ್ಮಾನವನ್ನು ಸ್ವೀಕರಿಸಿದರು.
ವಿಶೇಷವೆಂದರೆ, ತಮಗೆ ದೊರೆತ ₹5000 ಬಹುಮಾನ ಮೊತ್ತವನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ ಎಂದು ಘೋಷಿಸಿ ಹನುಮಂತ ನಾಯ್ಕ ಸಿ ಅವರು ತಮ್ಮ ಸಮಾಜಮುಖಿ ಮನೋಭಾವ ಮತ್ತು ಮಾನವೀಯತೆಯನ್ನು ಮೆರೆದರು.
ಅವರ ಈ ಸಾಧನೆ ಬಂಜಾರ ಸಮುದಾಯಕ್ಕೂ, ಕನ್ನಡ ನಾಡಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ದಾವಣಗೆರೆ ಬಂಜಾರ ಸಂಘದ ಪದಾಧಿಕಾರಿಗಳು,ನಾಗರಕಟ್ಟೆ ಗ್ರಾಮಸ್ಥರು, ಹಿರಿಯರು ಹಾಗೂ ಬಂಧು ಮಿತ್ರರು ಶುಭ ಕೋರಿದ್ದಾರೆ.
