ಅನ್ಯರ ಟೀಕೆಗೆ ನಾನು ತಲೆಕೆಡಿಕೊಳ್ಳುವುದಿಲ್ಲ ಕ್ಷೇತ್ರದ ಮತದಾರರ ಅಭಿಮಾನ ಪ್ರಿತಿ ವಿಶ್ವಾಸವೆ ನನ್ನ ಗೆಲುವಿಗೆ ರಹದಾರಿಯಾಗಲಿದೆ. ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ . ಶುಕ್ರದೆಸೆ ನ್ಯೂಸ್:- ಜಗಳೂರು ಕ್ಷೇತ್ರದಲ್ಲಿ ಬಿಡುವಿಲ್ಲದೆ ರಣ ಬಿಸಿಲಿನಲ್ಲಿಯೆ ಕಾಲಿಗೆ ಗಂಟೆ ಕಟ್ಟಿದವರ ರೀತಿ ಹಗಲಿರುಳು ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಯಾಚನೆಯಲ್ಲಿ ತೋಡಗಿರುವ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಮತಬೇಟೆಯಾಡಲು ಹರಸಾಹಸ ಪಡುತ್ತಿರುವ ಹೊತ್ತಿನಲ್ಲಿ ತಮ್ಮ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ. ಜಗಳೂರು ಕ್ಷೇತ್ರದಲ್ಲಿ ನಾನು ಮಾಜಿ ಶಾಸಕನಾಗಿ ಜನರ ಪ್ರಿತಿ ಅಭಿಮಾನ ವಿಶ್ವಾಸ ಗಳಿಸಿದ್ದೆನೆ. ಅವರ ಪ್ರಿತಿ ಅಭಿಮಾನವನ್ನ ನಾನು ಎಂದು ಖರಿದಿಸಲಾರೆ ಅವರೊಂದಿಗೆ ನಾನು ಮಾಜಿ ಶಾಸಕನೆಂಬ ಆಹಂ ಇಲ್ಲದೆ ಜನರ ಕಷ್ಟ ಸುಖಗಳಲ್ಲಿ ನಾನು ಒಬ್ಬನಾಗಿರುವೆ. ಇದೀಗ ಕ್ಷೇತ್ರದಲ್ಲಿ ನನಗೆ ಪಕ್ಷದ ಟಿಕೆಟ್ ಕೈ ತಪ್ಪಿದ್ದರಿಂದ ತಾಲ್ಲೂಕಿನ ಆಪಾರವಾದ ಜನರ ಇಚ್ಚೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ಗುರುತು ತೆಂಗಿ ತೋಟದ ಗುರುತಿಗೆ ಬರುವ ಮೆ 10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ನನಗೆ ಮತ ಹಾಕುವ ಮೂಲಕ ಅತ್ಯಂತ ಬಹುಮತದಿಂದ ಜಯಶಾಲಿಯನ್ನಾಗಿ ಮಾಡುವರು ಎಂಬ ನಂಬಿಕೆ ವಿಶ್ವಾಸ ನನಗಿದೆ .ಪುನ ನಾನು ಎರಡನೇ ಬಾರಿಯಾಗಿ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿ ಮತದಾರರ ಮನೆ ಸೇವಕನಾಗಿ ಸೇವೆ ನೀಡಲು ಬದ್ದನಾಗಿರುವೆ .ಮತದಾರರೆ ನನಗೆ ಮಹಾಶಕ್ತಿ .ಕೆಲವರ ಟೀಕೆ ಟಿಪ್ಪಣಿಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ನಾನು ಸ್ವಾಭಿಮಾನಿ ಹೋರಾಟದಲ್ಲಿ ಗೆದ್ದು ಬರುವ ವಿಶ್ವಾಸ ನನಗಿದೆ.