ಜಗಳೂರು ವಿಧಾನಸಬಾ ಕ್ಷೇತ್ರದಲ್ಲಿ ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ ಕ್ಷೇತ್ರದ ಶಾಸಕರು ಅಧಿಕಾರಿಗಳ ಸಭೆ ಕರೆದು ಶೀಘ್ರವೆ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಒತ್ತಡ

ಜಗಳೂರು ಸುದ್ದಿ

Editor by m.rajappa vyasagondanahalli shukradeshe news Kannada online News
updated: july 10_ 2026
Shukradeshe news portal Kannada News
Davanagere D

ತಾಲ್ಲೂಕಿನ ರೈತರು ಬರದ ಛಾಯೆಯ ಸುಳಿಯಲ್ಲಿ ಸಿಲುಕಿದ್ದಾರೆ ಆದ್ದರಿಂದ ಈ ಬಾರಿ ನನ್ನ ಹುಟ್ಟು ಹಬ್ಬವನ್ನ ಸರಳವಾಗಿ ಆಚರಿಸಿಕೊಳ್ಳುಲಾಗುವುದು ನಮ್ಮ ಅಭಿಮಾನಿಗಳು ಬರುವ july 12 ರಂದು ನಮ್ಮ ಜನ್ಮದಿನದ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸುವರು ಎಂದು ಕರೆ ನೀಡಿದ್ದಾರೆ.

ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಗೋಷ್ಠಿಯನ್ನುದ್ದೆಶಿಸಿ ಅವರು ಮಾತನಾಡಿದರು ಈ ಬಾರಿ ಕ್ಷೇತ್ರದಲ್ಲಿ ಬರ ಅವರಿಸಿದೆ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರೆ ಬಿತ್ತನೆ ಕಾರ್ಯ ನಡೆದಿಲ್ಲ .ಬೆಳೆ ವಿಮೆ ಬಗ್ಗೆ ರೈತರಿಗೆ ಸರಿಯಾದ ರೀತಿ ಅಧಿಕಾರಿಗಳು ಜಾಗೃತಿ ಮೂಡಿಸದೆ ನಿರ್ಲಕ್ಷ್ಯೆ ವಹಿಸಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 33 ಸಾವಿರ ರೈತರಿದ್ದು ಕೇವಲ 2500 ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಬಹುಶ ರೈತರಿಗೆ ಮಾಹಿತಿ ಕೊರತೆಯಿದೆ .ರೈತರು ಕಛೇರಿಗಳಿಗೆ ಅಲೆಯುತ್ತಿದ್ದಾರೆ .

ತಾಲ್ಲೂಕಿನಲ್ಲಿ ಬೀಕರ ಬರ ಅವರಿಸಿದ್ದರು ಸಹ ಇದುವರೆಗೂ ಸಹ ಶಾಸಕರು ಒಂದೆ ಒಂದು ಸಭೆ ನಡೆಸಿಲ್ಲ
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಕೊಡುತ್ತಿಲ್ಲ ನಾನು ಶಾಸಕನಾಗಿ ಕೆಲಸ ಮಾಡಿದ್ದೆನೆ.ಅಧಿಕಾರಿಗಳು ನನಗೆ ಮಾಹಿತಿ ನೀಡುತ್ತಿಲ್ಲ ಎಂದರೆ ಜನಸಾಮಾನ್ಯರ ಗತಿ ಏನು ? ಎಂದು ಪ್ರಶ್ನೆಸಿದರು .

ತಾಲ್ಲೂಕು ಪಂಚಾಯಿತಿ ಅನಿರ್ಭಂದಿತ ಒಂದು ಕೋಟಿ ಅನುದಾನ ದುರ್ಬಳಕೆಯಾಗಿದೆ. ನಾನು ಸುಮ್ಮನೆ ಬಿಡುವುದಿಲ್ಲ ಆರ್.ಟಿ ಐ ಅರ್ಜಿ ಹಾಕುವ ಮೂಲಕ ಮಾಹಿತಿ ಪಡೆಯುವೆ ಹಾಲಿ ಶಾಸಕರಾದ ಬಿ.ದೇವೇಂದ್ರಪ್ಪರವರು ಶೀಘ್ರವೆ ಅಧಿಕಾರಿಗಳ ಸಭೆ ಕರೆದು ಬೆಳೆ ವಿಮೆ ಸೇರಿದಂತೆ ರೈತರ ಸಂಕಷ್ಠಗಳ ಸಮಸ್ಯೆಗಳ ಬಗ್ಗೆ ಕ್ಷೇತ್ರದ ವಸ್ತುಸ್ಥಿತಿಯ ಬಗ್ಗೆ ಸಭೆ ಕರೆದು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು .ದುಡಿಯುವ ಕೈಗಳಿಗೆ ವಿಜಿ ರಾಮಜಿ ಕೆಲಸ ನಿಡುವಂತೆ ಒತ್ತಾಯಿಸಿದ್ದಾರೆ.

ಕಳೆದ ದಿನಗಳ ಹಿಂದೆ ತಾಲ್ಲೂಕಿನ ಕ್ಯಾಸೆನಹಳ್ಳಿ ಗ್ರಾಮದ ಕೆರೆ ಅಭಿವೃದ್ದಿಗೆ 3 ಕೋಟಿ ರೂಗಳಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದಿಂದ ಶಾಸಕರೆ ಶಂಕುಸ್ಥಾಪನೆ ಮಾಡಿದ ಕಾಮಗಾರಿ ನಿರ್ಮಾಣ ಮಾಡದೆ ಅನುದಾನ ಬೇರೊಂದು ಇಲಾಖೆಗೆ ಬೇರ್ಪಡಿಸಲಾಗಿದೆ .ತಮಲೇಹಳ್ಳಿಯಿಂದ ಗೌಡಗೊಂಡನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ದಿ ಕಾಮಗಾರಿ ಅರ್ಧಕ್ಕೆ ನಿಂತು ಅಪೂರ್ಣವಾಗಿ ವಾಹನ ಸವಾರರು ಸಂಚಾರಿಸುವುದೇ ದುಸ್ತರವಾಗಿದೆ .ನಮ್ಮ ಅವಧಿಯಲ್ಲಿ ನಿರ್ಮಿಸಿದ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ ಜನರು ಪ್ಲೋರೈಡ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ.ಶುದ್ದ ನೀರಿನ ಘಟಕ ರಿಪೇರಿ ಮಾಡಿಸುವಂತೆ ಆಗ್ರಹಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಡಿಯಲ್ಲಿ ನಿರ್ಮಿಸಿರುವ ಕಾಮಗಾರಿ ಕಳಪೆಯಾಗಿವೆ ಸರಿಯಾದ ರೀತಿ ನೀರು ಬರುತ್ತಿಲ್ಲ ಎಂದು ಆರೋಪಿಸಿದರು

ಅಪ್ಪರ್ ಭದ್ರಾ ಯೋಜನೆಡಿಯಲ್ಲಿ ಮೂರು ಕೆರೆಗಳನ್ನ ತುಂಬಿಸುವುದನ್ನೆ ಕೈಬಿಡಲಾಗಿದೆ. ಬಿಟ್ಟು ಹೋಗಿರುವ ಕೆರೆಗಳಿಗೆ ನೀರು ತುಂಬಿಸಲು ಪ್ರತ್ಯಕವಾಗಿ ಡಿ‌.ಪಿ ಅರ್ ಮಾಡಿಸಿ ಮೂರು ಕೆರೆಗಳಿಗೆ ಆವಕಾಶ ಕಲ್ಪಿಸುವಂತೆ ಶಾಸಕರು ಜವಾಬ್ದರಿವಹಿಸಲಿ ಎಂದು ಮಾಜಿ ಶಾಸಕರು ಸಲಹೇ ನೀಡಿದ್ದಾರೆ. ನಾನು ತಮಗೆ ಟೀಕೆ ಮಾಡುತ್ತಿಲ್ಲ ಸಲಹೇ ನೀಡುವೆ ಎಂದರು..

ನಮ್ಮ ಆಡಳಿತಾವಧಿಯಲ್ಲಿ _2018 ರ ಸಾಲಿನಲ್ಲಿ ಜಗಳೂರಿನಲ್ಲಿ ಸಿರಿಗೆರೆ ಶ್ರೀಗಳ ತರಳಭಾಳು ಹುಣ್ಣಿಮೆ ಕಾರ್ಯಕ್ರಮ ಆಯೋಜನೆ ಆಗದಿದ್ದರೆ ಇದೀಗ ಜಗಳೂರಿಗೆ ನೀರು ಬರುತ್ತಿರಲಿಲ್ಲ ನಮ್ಮ ಆಡಳಿತಾವಧಿಯಲ್ಲಿ ಜಗಳೂರು‌ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆಗೆ 250 ಕೋ ರೂಗಳಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರ ಪ್ರತಿಫಲವಾಗಿ 57‌ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ ಎನ್ನುವುದನ್ನ ಮರೆಯಬಾರದು. ಅನುದಾನ ಸಾಕಾಗುತ್ತಿಲ್ಲ ಎಂದು ಪುನ ಸಿರಿಗೆರೆ ಶ್ರೀಗಳ ಮೂಲಕ ಸರ್ಕಾರಕ್ಕೆ ಒತ್ತಡ ತರುವ ಮೂಲಕ ತದ ನಂತರ ಮಾಜಿ ಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಯಡಿಯೊರಪ್ಪರವರು 650 ಕೋ ರೂಗಳಲ್ಲಿ ತುಂಗಾಭದ್ರ ಏತ ನೀರಾವರಿ ಯೋಜನೆ ಅಸ್ಥಿತ್ವಕ್ಕೆ ಬಂದಿರುವ ಪ್ರತಿಫಲವಾಗಿ 2023 ರಲ್ಲಿ 57 ಕೆರೆಗಳಿಗೆ ಶಾಸಕರಾದ ದೇವೇಂದ್ರಪ್ಪರವರ ಅವಧಿಯಲ್ಲಿ ಕೆರೆ ತುಂಬಿಸಲಾಗಿದೆ ‌ಆದರೆ ಈ ಬಾರಿ ಬರ ಅವರಿಸಿದೆ ಕೇವಲ 3‌ಕೆರೆ ಗಳಿಗೆ ಮಾತ್ರ ನೀರು ಬಿಡಲಾಗಿದೆ. ಅಧಿಕಾರಿಗಳ ವಿಶ್ವಾಸ ಪಡೆದು ಕೆಲಸ ಮಾಡಿ ‌
ನನ್ನ ಅಧಿಕಾರ ಅವಧಿಯಲ್ಲಿ 3 ಸಾವಿರ ಎಕರೆ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಭೂ ಒಡೆಯರನ್ನಾಗಿ ಮಾಡಿದ್ದೆವೆ ತಾವುಗಳು ಇದುವರೆಗೂ ಒಂದು ಬಗರ್ ಹುಕ್ಕುಂ ಸಮಿತಿ ಸಭೆ ಕರೆದಿಲ್ಲ . ಪ್ರಭಾರೆ ತಹಶೀಲ್ದಾರ್ ರಿಂದ ಆಡಳಿತಾ ವಿಫಲ ಶಾಶ್ವತ ತಹಶೀಲ್ದಾರ್ ರವರನ್ನ ನೇಮಿಸಿ ಜನರು ಕಛೇರಿಗಳಿಗೆ ಅಲೆಯುವುದನ್ನ ತಪ್ಪಿಸುವಂತೆ ಮಾಜಿ ಶಾಸಕ ಹೆಚ್ ಪಿ ಆರ್ ಸುದ್ದಿಗೋಷ್ಠಿ ನಡೆಸುವ ಮೂಲಕ ಹಾಲಿ ಶಾಸಕರಿಗೆ ಕರೆ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವುಕುಮಾರಸ್ವಾಮಿ.ಮಾಜಿ ಜಿಪಂ ಸದಸ್ಯ ಸೊಕ್ಕೆ ನಾಗರಾಜ್.ಮಾಜಿ ಜಿಪಂ ಸದಸ್ಯರ ಪತಿ ವೆಂಕಟೇಶ್. ಪಪಂ ಅದ್ಯಕ್ಷ ಜೆ.ವಿ ನಾಗರಾಜ್. ಬಿಜೆಪಿ ಮುಖಂಡ ಬಿದರಕೆರೆ ಬಾಬಣ್ಣ.ಸಿದ್ದಣ್ಣ. ಮಾಜಿ ತಾಪಂ ಸದಸ್ಯರಾದ ಕಾನನಕಟ್ಟೆ ಕುಬೇಂದ್ರಣ್ಣ. ಇ.ಎನ್ ಪ್ರಕಾಶ .ಪೂಜಾರಿ ಸಿದ್ದಪ್ಪ. ಸೇರಿದಂತೆ ಮುಂತಾದವರು ಹಾಜುರಿದ್ದರು..

Leave a Reply

Your email address will not be published. Required fields are marked *

You missed

error: Content is protected !!