Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on 10_7_2026
ದಲಿತರು ಆರ್ಥಿಕ ಸ್ವಾಲಂಬನೆಯಾಗದೇ ಸ್ವಾಭಿಮಾನದ ಬದುಕು ಅಸಾಧ್ಯ ಮಾಜಿ ಶಾಸಕ ಹೆಚ್. ಪಿ .ರಾಜೇಶ್ ಕಿವಿ ಮಾತು
ಸುದ್ದಿ ಜಗಳೂರು.
ಡಾ.ಬಿ ಆರ್ ಅಂಬೇಡ್ಕರ್ ರವರು ಹೇಳಿದಂತೆ ಗುಡಿ ಗುಂಡಾರಗಳಲ್ಲಿ ನನ್ನನ್ನ ನೋಡಬೇಡಿ ಪುಸ್ತಕದಲ್ಲಿ ನನ್ನನ್ನ ಓದಿ ನಾನು ಸಿಗುತ್ತೆನೆ ಎಂದು ಹೇಳಿದಂತೆ ಮಹಾನಾಯಕರನ್ನ ಅನುಸರಿಸಬೇಕಾಗಿದೆ.ಕಾಂಗ್ರೆಸ್ ಎಸ್ಟಿ ಘಟಕದ ಮಾಜಿ ಅದ್ಯಕ್ಷ ಹಾಗೂ ಮಾಜಿ ಜಿಪಂ ಸದಸ್ಯ ಕೆಪಿ ಪಾಲಯ್ಯ ಉದ್ಗಾಟನೆ ಕಾರ್ಯಕ್ರಮದಲ್ಲಿ ಕುರಿತು ಮಾತನಾಡಿದರು
ತಾಲ್ಲೂಕಿನ ದೋಣಿಹಳ್ಳಿ ಹೊಸರು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಮಾದಿಗ ಯುವಕ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಕುರಿತು ಅವರು ಮಾತನಾಡಿದರು
ಡಾ. ಬಿ.ಆರ್.ಅಂಬೇಡ್ಕರ್ ಅವರು ವಿಶ್ವಮಾನವರು ಅವರು ಒಂದು ಜಾತಿಗೆ ಸೀಮಿತವಲ್ಲ ಸರ್ವಜನಾಂಗ ಅರಾದ್ಯ ದೈವ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ವರ್ಧಿಸಿ ಆಯ್ಕೆಯಾಗುತ್ತೆವೆ ಎಂದರೆ ಅದು ಭಾರತ ರತ್ನ ಅಂಬೇಡ್ಕರ್ ರವರ ಸಂವಿಧಾನದ ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕೊಡುಗೆಯಾಗಿದೆ .ದೇಶದಲ್ಲಿ
ವಿವಿಧ ಬಹುಸಂಸ್ಕೃತಿ ಭಾರತಕ್ಕೆ ಸಮರ್ಥವಾದ ಸಂವಿಧಾನವನ್ನು ಕೊಟ್ಟ ಮಹಾನ್ ನಾಯಕರ
ತತ್ವ, ಆದರ್ಶಗಳು ನಾವು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕಿದೆ .
ದಲಿತ ಸಮುದಾಯದವರಾದ ನಾವುಗಳು ಆರ್ಥಿಕವಾಗಿ ಸದೃಡರಾಗದೆ ಸ್ವಾಭಿಮಾನದ ಬದುಕು ಅಸಾಧ್ಯ .ಆದ್ದರಿಂದ ಸೋಮಾರಿಗಳಾಗದೆ ದುಡಿಮೆಯನ್ನ ಅನುಸರಿಸಿ ತಾವುಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು .ಕ್ಷೇತ್ರದಲ್ಲಿ ನಾಯಕ ಸಮುದಾಯ ಮತ್ತು ಮಾದಿಗ ಸಮುದಾಯದವರು ಸಹೋದರತೆಯಿಂದ ಜೀವನ ಸಾಗಿಸುತ್ತಿದ್ದು ಸರ್ವರನ್ನ ಸಹೋದರತೆ ಭಾವನೆಯಿಂದ ಸಾಮರಸ್ಯ ಜೀವನ ಮಾಡುವ ಜೊತೆಗೆ ತಪ್ಪದೆ ತಮ್ಮ ಮಕ್ಕಳಿಗೆ ಶಿಕ್ಷಣ ಕೋಡಿಸಿ ಎಂದು ಸಲಹೇ ನೀಡಿದರು.
ಮಾಜಿ ಜಿಪಂ ಸದಸ್ಯರಾದ ಕೆ.ಪಿ ಪಾಲಯ್ಯ ಮಾತನಾಡಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ತಿಳಿದುಕೊಳ್ಳದೆ ಅಭಿವೃದ್ದಿ ಅಸಾಧ್ಯ ಅವರನ್ನ ಸಂಪೂರ್ಣವಾಗಿ ಅರ್ಥೈಸಿಕೊಂಡು ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು.
ಮಹಾನಾಯಕ ಅಂಬೇಡ್ಕರ್ ರವರ ಬಗ್ಗೆ ಅಳ ಅಗಲ ತಿಳಿದವರು ಈ ದೇಶವನ್ನ ಆಳುತ್ತಿದ್ದಾರೆ ನಾವುಗಳು ನಮ್ಮಲ್ಲಿಯೇ ದ್ವೇಷ ಅಸೂಹೆ ಭಾವನೆಯಿಂದ ನಮಗೆ ನಾವೇ ಸಹಿಸಿಕೊಳ್ಳಲಾರದಷ್ಟು ಅಸಹಿಷ್ಣರಾಗಿದ್ದೆವೆ ದೇಶಕ್ಕೆ ಮಾದರಿಯಾದ ಸಂವಿಧಾನವೆ ನಮಗೆ ಶ್ರೀರಕ್ಷೆಯಾಗಿದೆ ಎಂದು ಕರೆ ನೀಡಿದರು.
ದಲಿತ ಮುಖಂಡ ಜಿ ಹೆಚ್ ಶಂಭುಲಿಂಗಪ್ಪ ಮಾತನಾಡಿ ಲೀಡರ ಶಿಪ್ ವಹಿಸಿಕೊಳ್ಳುವ ಕಾತುರದಲ್ಲಿ ನಮ್ಮ ಯುವಕರು ಅನ್ಯಮಾರ್ಗ ತುಳಿದರೆ ಮುಂದೆ ಬದುಕು ಬರ್ಬದ್ ಆಗುತ್ತದೆ. ಅವರ ಅವಿರತ ಹೋರಾಟ ಪ್ರತಿಫಲದಿಂದ ಈ ದೇಶಕ್ಕೆ ವಿಶಿಷ್ಟ ಸಂವಿಧಾನದ ಕೊಡುಗೆ ಆಪಾರ ಎಂದರು .
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಮಹಿಳೆಯರು ಕುಂಭಮೇಳದ ನೂಲಕ ಮೆರವಣಿಗೆ ನಡೆಸಿದರು .ಯುವಕರು ಮಹಿಳೆಯರು ಉತ್ಸಾಹಿಗಳಾಗಿ ಅಂಬೇಡ್ಕರ್ ಜಯಿಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವಕುಮಾರ್ ಸ್ವಾಮಿ. ಮಾದಿಗ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ .ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ. ಗ್ರಾಮದ ಮುಖಂಡರಾದ ಮಂಜುನಾಥ. ಪೂಜಾರಿ ಸಿದ್ದಪ್ಪ ಮಾದಿಗ ದಂಡೋರ ಸಮಿತಿ ಸಂಚಾಲಕ ಗೌರಿಪುರ ಕುಬೇರಪ್ಪ. ಮುಖಂಡ ಚಂದ್ರಪ್ಪ. ಗೋಡೆ ದುರುಗಣ್ಣ.ಕರ್ನಾಟಕ ರಾಜ್ಯ ರೈತ ಸಂಘ ವಾಸುದೇವ ಮೇಟಿ ಬಣದ ಭರಮಸಮುದ್ರ ಕುಮಾರ್. ಪತ್ರಕರ್ತರಾದ ಧನ್ಯಕುಮಾರ್.ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ . ಗ್ರಾಮ ಘಟಕದ ಅದ್ಯಕ್ಷರಾದ ಮಹಾಂತೇಶ್. ಎಂ.ಆರ್. ತಿಪ್ಪೇಸ್ವಾಮಿ.ಪ್ರಸನ್ನಕುಮಾರ್. ಸೇರಿದಂತೆ ಹಾಜುರಿದ್ದರು.


