ಶುಕ್ರದೆಸೆ ನ್ಯೂಸ್:- ತಾಲ್ಲೂಕಿನ ಐತಿಹಾಸಿಕ ಭರಮಸಮುದ್ರ ಕೆರೆ 57 ಕೆರೆ ತುಂಬಿಸುವ ಯೋಜನೆಯಿಂದ ಔಟ್ ಶಾಸಕ ಎಸ್ ವಿ ರಾಮಚಂದ್ರರವರೆ ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಅಸಮಾಧಾನ ಹೊರಹಾಕಿರುವುದು ಬೆಳಕಿಗೆ ಬಂದಿದೆ. ಕೆರೆ ತುಂಬಿಸುವ ಯೋಜನೆಯಿಂದ ಭರಮಸಮುದ್ರ ಕೆರೆ ಕೈಬಿಟ್ಟ ಶಾಸಕ ಎಸ್.ವಿ.ರಾಮಚಂದ್ರ ವಿರುದ್ಧ ಆಕ್ರೋಶ!
ಈ ವೇಳೆ ಮುಖಂಡ ತಿಮ್ಮಲಾಪುರದ ಸೂರಲಿಂಗಪ್ಪ ಮಾತನಾಡಿ ಜಗಳೂರು ತಾಲ್ಲೂಕಿನ ಮಹತ್ವದ ಯೋಜನೆ ತಾಲೂಕಿನ 57 ಕೆರೆ ತುಂಬಿಸುವ ಯೋಜನೆಡಿಯಲ್ಲಿ ಕ್ಷೇತ್ರದ ಭರಮಸಮುದ್ರ ಕೆರೆಗೆ ನೀರು ತುಂಬಿಸಲು ಮಿನಾಮೇಷ ಎಣಿಸಿ ಪಟ್ಟಿಯಿಂದ ಕೈ ಬಿಡಲಾಗಿದೆ.57 ಕೆರೆ ಪಟ್ಟಿ ಯೋಜನೆಡಿಯಲ್ಲಿ ಭರಸಮುದ್ರ ಕೆರೆ ಪ್ರಾರಂಭದಲ್ಲಿ ಸೇರ್ಪಡೆಯಾಗಿದ್ದರು ಕೂಡ ಮಧ್ಯದಲ್ಲಿ ತೆಗೆದು ಹಾಕಲಾಗಿದೆ ಇದರ ಬದಲಾಗಿ ಶಾಸಕ ಎಸ್.ವಿ.ರಾಮಚಂದ್ರ ಅಧಿಕಾರಿಗಳ ಮೂಲಕ ಅರಸಿಕೆರೆ ಬಾಗದ ಕೆರೆಯೊಂದನ್ನು ಸೇರ್ಪಡೆ ಮಾಡಿ ಐತಿಹಾಸಿಕ ಕೆರೆಯನ್ನು ಕೈಬಿಟ್ಟು ಈ ಬಾಗದ 8 ಹಳ್ಳಿಗಳ ವ್ಯಾಪ್ತಿಗೆ ಅಂತರ್ಜಲದ ಅಕ್ಷಯ ಪಾತ್ರೆಯಂತಿರುವ ಈ ಕೆರೆಯ ಅಕ್ಕ ಪಕ್ಕದಲ್ಲಿರುವ ಗ್ರಾಮಸ್ಥರ ಪಾಲಿಗೆ ಮತ್ತು ಈ ಬಾಗದ ಜನ ಜಾನುವಾರುಗಳಿಗೆ ಮಹಾ ದ್ರೋಹ ವ್ಯಸಗಿದ್ದಾರೆ. ಎಂದು ಆರೋಪಿಸಿ ಗ್ರಾಮಸ್ಥರು ಇತ್ತೀಚೆಗೆ ಗ್ರಾಮದ ಬಳಿ ಕೆರೆ ತುಂಬಿಸುವ ಕಾಮಗಾರಿ ಬೇರೆ ಗ್ರಾಮಗಳಿಗೆ ಹಾದುವ ಕಾಮಗಾರಿ ಬಳಿ ಪ್ರತಿಭಟನೆ ನಡೆಸಿ ಶಾಸಕರ ವಿರುದ್ದ ಗ್ರಾಮಸ್ಥರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮಲ್ಲೇಶ್ . ಗ್ರಾಮಸ್ಥರಾದ , ರೈತ ಹೋರಾಟಗಾರ ಗುರುಸಿದ್ದಪ್ಪ, ತಿಮ್ಮಲಾಪುರ, ಶಿವಲಿಂಗಪ್ಪ, ಈರಣ್ಣ ಗ್ರಾಮಸ್ಥರಾದ ಶ್ರೀನಿವಾಸ್ ರೆಡ್ಡಿ, ವಿಕ್ರಮ್ . ಪೆದ್ದಣ್ಣ, ಕಾಮಗೇತನಹಳ್ಳಿ, ಎ.ಕೆ.ಚಂದ್ರಪ್ಪ, ಮಂಜುನಾಥ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು