ಶುಕ್ರದೆಸೆ ನ್ಯೂಸ್:- ನನಗೆ ದಾರಿ ತೋರಿಸಿದವರು ವೀರಶೈವ ಸಮಾಜದ ವಿದ್ಯಾ ರತ್ನ ಡಾ.ಟಿ .ತಿಪ್ಪೇಸ್ವಾಮಿಯವರು ಅವರೆ ನಮ್ಮ ದೈವ ನನ್ನ ಗುರುಗಳು ಎಂದು ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಹೇಳಿದರು. ಪಟ್ಟಣದ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರ ನಿವಾಸದಲ್ಲಿ ವೀರಶೈವ ಸಮಾಜದ ಮುಖಂಡರೊಂದಿಗೆ ಸಭೆ ಏರ್ಪಡಿಸಿ ವಿಧಾನಸಭಾ ಚುನಾವಣೆ ಸಭೆಯನ್ನುದ್ದೆಶಿಸಿ ಮಾತನಾಡಿದರು.ನಾನು ಕುಗ್ರಾಮದಲ್ಲಿ ಜನಿಸಿ ನನ್ನ ತುತ್ತಿನ ಚಿಲ ತುಂಬಿಸಿಕೊಳ್ಳಲು ಹೋರಾಟ ಮಾಡಿ ನಾಲಂದ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ಕಸ ಗೂಡಿಸಿ ಗಂಟೆ ಹೊಡೆದು ಸೇವೆ ಸಲ್ಲಿಸಿರುವೆ ಅವರ ಮಾರ್ಗದರ್ಶನದಲ್ಲಿ ನಾನು ಅವರ ಅಸರೆಯಲ್ಲಿ ಸಕಲವನ್ನು ಪಡೆದುಕೊಂಡಿರಬಹುದು.ವೀರಶೈವ ಸಮಾಜದ ಅಂಗ ಸಮುದಾಯಗಳ ಬಾಂಧವ್ಯ ಸಹ ನನಗಿದೆ.ನಾನು ಶಾಸಕನಾಗಿ ಆಯ್ಕೆಯಾದರೆ ನೆಪಾ ಮಾತ್ರ ಶಾಸಕನಾಗಿರುವೆ ನಿಮ್ಮ ಜೊತೆ ಜೊತೆಗೆ ಸಾಮಾನ್ಯರಂತೆ ನಿಮ್ಮ ಸೇವಕನಾಗಿ ಸೇವೆ ಮಾಡುವೆ.ಹಾಲಿ ಮಾಜಿ ಶಾಸಕರುನ್ನು ಆಯ್ಕೆ ಮಾಡಿದ್ದಿರಿ ಈ ಬಾರಿ ನನನ್ನು ಬೆಂಬಲಿಸಿ ನನಗೂ ಒಂದು ಆವಕಾಶ ಕೋಡಿ ಎಂದು ಮನವಿ ಮಾಡಿದರು .ವೀರಶೈವ ಲಿಂಗಾಯತ ಸಮುದಾಯದ ಯಾರೊಬ್ಬರಿಗೂ ಕರೆ ಮಾಡಿಲ್ಲ ಸ್ವ ಪ್ರೇರಿತ ವಾಗಿ ಮನೆ ಬಾಗಿಲಿಗೆ ಆಗಮಿಸಿ ಬೆಂಬಲ ಸೂಚಿಸುತ್ತಿರುವುದು ಸಂತಸ ತಂದಿದೆ.ತಮಗೆ ಚಿರ ಋಣಿಯಾಗಿರುವೆ ಎಂದರು. .ಕಾಂಗ್ರೆಸ್ ಪಕ್ಷದಲ್ಲಿ ನಾನು ಸೇರ್ಪಡೆಯಾದಾಗ ನನಗೆ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರು ಕ್ಷೇತ್ರದಲ್ಲಿ ಹೆಚ್ಚು ಸದಸ್ಯತ್ವ ಮಾಡಿಸಲು ತಿಳಿಸಿದಂತೆ ಕ್ಷೇತ್ರದಲ್ಲಿ ಸುಮಾರು 23 ಸಾವಿರ ಸದಸ್ಯತ್ವ ಮಾಡಿಸಿ ಕೇಂದ್ರದ ರಾಹುಲ್ ಗಾಂಧಿಯವರಿಂದ ಪ್ರಶಂಸೆ ಪತ್ರ ಪಡೆದ ಹೆಗ್ಗಳಿಕೆಯಿದೆ.ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಅನಗತ್ಯ ಟೀಕೆಗಳನ್ನು ಮಾಡುವುದು ಸರಿಯಲ್ಲ ತಾವುಗಳು ಪಕ್ಷದಲ್ಲಿದ್ದಾಗ ಪಕ್ಷ ಬೆಳೆಸುವ ಬದಲು‌ ಅಭಿಮಾನ ಬಳಗವನ್ನ ಬೆಳೆಸಲಾಗಿತ್ತು ‌.ಕಳೆದ ವಿಧಾನಸಭಾ ಚುನಾವಣೆ ಅತ್ಯಂತ ಹೀನಾಯವಾಗಿ 37 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ ಕಾರಣ ತಮಗೆ ಕೈ ಟಿಕೆಟ್ ತಪ್ಪಿದೆ ಎಂದು ಕೇಂದ್ರದ. ರಣದೀಪ್ ಸುರ್ಜೇವಾಲಾರವರು‌ ಹೇಳಿದುಂಟು. ನನ್ನ ಪಕ್ಷ ನಿಷ್ಠೆಯನ್ನ ಕಂಡ ಕಾಂಗ್ರೆಸ್ ವರೀಷ್ಠರು ಟಿಕೆಟ್ ನೀಡಿ ಆವಕಾಶ ಮಾಡಿ ಕೊಟ್ಟಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ .ಪಕ್ಷ ನಿಷ್ಠೆಗೆ‌ ತಕ್ಕಂತೆ ನನಗೆ ಟಿಕೆಟ್ ಲಬಿಸಿದೆ .ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳು ಜನಪರವಾಗಿವೆ ಈ ಚುನಾವಣೆ ಎಂಬ ಯದ್ದದಲ್ಲಿ ನಾನು ಜಯಶಾಲಿಯಾಗಿ ಗೆದ್ದು ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ವಕ್ತಾರ ಡಿ ಬಸವರಾಜ್ ಮಾತನಾಡಿ ಬಿಜೆಪಿ ಪಕ್ಷದಲ್ಲಿ ತಾರತಮ್ಯ ಧೊರಣೆ ಅನುಸರಿಸಿ ತುಳಿಯುವ ಹುನ್ನಾರವಿದೆ ಇದನ್ನ ಸಹಿಸದೆ ಬಿಜೆಪಿಗೆ ಗುಡ್ ಬಾಯಿ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಂದಿರುವ ಉದಾಹರಣೆ ಕಣ್ಮುಂದೆಯಿದೆ.ಇಂತ ಪ್ರಭಾವಿ ರಾಜಕಾರಣಿಗಳಿಂದ ನಮಗೆ ಆನೆ‌ ಬಲ ಬಂದಂತಾಗಿದ್ದು ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಶತ ಸಿದ್ದ ಆದ್ದರಿಂದ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೇವೆಂದ್ರಪ್ಪರವರ ಕೈಬಲಪಡಿಸಿ ಎಂದು ಹೇಳಿದರು. ಕೆಪಿಸಿಸಿ ಕಾರ್ಯಧರ್ಶಿ ಅಸಗೋಡು ಜಯಸಿಂಹ ಮಾತನಾಡಿ ಕಾಂಗ್ರೆಸ್ ಸರ್ವಧರ್ಮಗಳ ಪಕ್ಷವಾಗಿದ್ದು ಲಿಂಗಾಯತ ಸಮಾಜದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ನಮ್ಮ ಪಕ್ಷಕ್ಕೆ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ.ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ ವೀರಶೈವ ಸಮುದಾಯ ಅನ್ನ ನೀಡುವಂತ ಸಮುದಾಯವಾಗಿದ್ದು ಇದೀಗ ಹಸಿದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪಗೆ ದಾಸೋಹಿಗಳಾಗಿ ಅಶಿರ್ವಾದಿಸಿ ಎಲ್ಲಾ ಸಮುದಾಯದವರು ಕ್ಷೇತ್ರದಲ್ಲಿ ಪ್ರಿತಿ ವಿಶ್ವಾಸ ಸಹೋದರಂತೆ ಜೀವನ ಸಾಗಿಸುತ್ತಿದ್ದೆವೆ.ಕೆಪಿಸಿಸಿ ತಾಲ್ಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ ಪ್ರಪಂಚಕ್ಕೆ ಮೊಟ್ಟಮೊದಲ ಬಾರಿ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ಬಸವಣ್ಣನವರ ಅನುಯಾಯಿಗಳು ಲಿಂಗಾಯತ ಸಮಾಜದವರು .ಲಿಂಗಾಯತ ಸಮುದಾಯಕ್ಕೆ ಸಚಿವ ಸ್ಥಾನಮಾನ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸೋಣ ಎಂದು‌ ಕರೆ ನೀಡಿದರು. ಇದೆ ಸಂದರ್ಭದಲ್ಲಿ 100 ಕ್ಕೂ ಅಧಿಕ ಲಿಂಗಾಯತ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.. ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಪಿ ಎಸ್ ಸುರೇಶ್ ಗೌಡ್ರು . ಅಮರ ಭಾರತಿ ವಿಧ್ಯಾ ಕೇಂದ್ರದ ಕಾರ್ಯಧರ್ಶಿ ಟಿ ಮಧು. ಮಾದಿಹಳ್ಳಿ ಕೆ ಚಂದ್ರಪ್ಪ..ಅರಸಿಕೆರೆ ಬಾಗದ ಸಿದ್ದನಗೌಡ್ರು.ಮೆದಗಿನಕೆರೆ ವೀರಣ್ಣಗೌಡ್ರು.ಗೋಡೆ ಪ್ರಕಾಶ್ .ರಮೇಶ್ ರೆಡ್ಡಿ.ಎಸ್ಸಿ ಘಟಕದ ವೆಂಕಟೇಶ್.ಸಿ ತಿಪ್ಪೇಸ್ವಾಮಿ. ಚನ್ನಪ್ಪ. ರಾಜಣ್ಣ.ಬುಧಾಳ್ ಸಿದ್ದೇಶ್. ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

You missed

error: Content is protected !!