ಜಗಳೂರು:- ಬಯಲು ಸೀಮೆಯ ಜೀವವೈವಿಧ್ಯ,ಹಾಗೂ ವಿಶೇಷ ನಾಲ್ಕು ಕೊಂಬಿನ ಕೊಂಡು ಕುರಿಯನ್ನು ಹೊಂದಿರುವ ನಾಡು ಜಗಳೂರು ಆಗಿದ್ದು ಈ ನೆಲದಲ್ಲಿ ಸಮ್ರಾಟ ಅಶೋಕ ಹಾಗೂ ಜಗಜ್ಯೋತಿ ಬಸವೇಶ್ವರರು ನಡೆದಾಡಿದದ್ದು, ತನ್ನದೆ ವೈಭವದ ಐತಿಹಾಸಿಕ ಸೊಬಗನ್ನು ಹೊಂದಿದೆ ಎಂದು ಜಗಳೂರು ಗಣಪತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ರವಿಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರೆವರಿಸಿ ಮಾತನಾಡಿ ಜಗಳೂರಿನ ತಂಡದವರು ಗ್ರಾಮಕ್ಕೆ ಕಲ್ಲೇದೇವರಪುರ ಗ್ರಾಮದ ಕಲ್ಲೇಶನ ಸನ್ನಿಧಾನಕ್ಕೆ ಜಗಜ್ಯೋತಿ ಬಸವೇಶ್ವರ ಆಗಮಿಸಿ ನಡೆದಾಡಿದ್ದು, ತಾಲೂಕಿನ ಅಸಗೋಡು ಗ್ರಾಮಕ್ಕೆ ಸಾಮ್ರಾಟ್ ಅಶೋಕ ಬಂದುಹೋದ ಐತಿಹ್ಯ ಕುರುಹುಗಳಿವೆ ಇಂತಹ ಸುಂದರವಾದ ಪ್ರಾಕೃತಿಕ ವೈಭವದಿಂದ ಕೂಡಿದ ನಾಡು ಜಗಳೂರಾಗಿದೆ. ತಾಲೂಕಿನಲ್ಲಿ ಹತ್ತು ಹಲವು ವಿಶೇಷತೆಗಳಿದ್ದು, ಕಲ್ಲೆದೇವರಪುರ ಕಸವನಹಳ್ಳಿ ಅಸಗೋಡು, ಚದರಗೊಳ್ಳ ಸ್ಥಳಗಳು ಮೊದಲು ಶಿಕ್ಷಣ ನೀಡುವ ಅಗ್ರಹಾರ ಕೇಂದ್ರಗಳಾಗಿದ್ದವು ಎಂದರು,
ಕನ್ನಡ ಉಪನ್ಯಾಸಕ ಬಿ.ವಿ ಹರೀಶ್ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಬಗ್ಗೆ
ವಿಶೇಷ ಉಪನ್ಯಾಸ ನೀಡಿ ರಾಮಕೃಷ್ಣ ಪರಮಹಂಸರು ಸನಾತನ ಧರ್ಮದ ಬಗ್ಗೆ ಜಗತ್ತಿಗೆ ಸಾರಿದರು ಮಾನವನ ಜೀವನದಲ್ಲಿ ಆಧ್ಯಾತ್ಮಿಕದ ಮಹತ್ವ ಎಂತಹುದೆಂಬುದನ್ನು ತಿಳಿಸಿದ್ದಾರೆ ಶಾಸ್ತ್ರ ಪುರಾಣಗಳ ಮೂಲಕ ಕಾಳಿದೇವಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ .ಭಕ್ತಿಯ ಮಹತ್ವನ್ನು ಸಮಾಜಕ್ಕೆ ತಿಳಿಸಿದರು.ದೇವರು ಭಕ್ಕಿಯ ವಿಚಾರದಲ್ಲಿ ಅತ್ಯಂತ ಅಳವಾಗಿ ಹೋಗಿ ಸಮಾಜದಲ್ಲಿ ಹುಚ್ಚರೆಂದು ಬಿಂಬಿಸಲಪಡುತ್ತಾರೆ ಸ್ವಾಮಿ ವಿವೇಕಾನಂದರು ಅಧ್ಯಾತ್ಮಿಕ ಮಾರ್ಗದ ಮೂಲಕ ಜಗತಿಗೆ ಹಿಂದೂ ಧರ್ಮದ ಬಗ್ಗೆ ಪ್ರಚಾರ ಪಡಿಸಲು ವಿಶ್ವ ಪರ್ಯಟನೆ ಮಾಡಿದ್ದರು ಎಂದರು.
ಲೇಖಕ ಡಾ.ಪ್ರಸನ್ನ ನಾಡಿಗರ್ ಕನ್ನಡ ನಾಡು ನುಡಿ ನೆಲ ಜಲ ವಿಷಯವಾಗಿ ಮಾತನಾಡಿ ವಿಶಿಷ್ಟ ಪ್ರಕೃತಿಯ ಸೊಬಗನ್ನು ಹೊಂದಿರುವ ಕೊಂಡುಕುರಿ ನಾಡು ಜಗಳೂರು, ಕನ್ನಡ ಭಾಷೆಯು ಸುಲಲಿತವಾದ ಸರ್ವರಿಗೂ ಪ್ರಿಯವಾದ ಭಾಷೆ,ಕ್ರಿ.ಶ.2500 ವರ್ಷಗಳ ಹಿಂದೆ ಕನ್ನಡ ಭಾಷೆ ಹುಟ್ಟಿದೆ, ಅತ್ಯಂತ ಹಳೆಯದಾದ ಭಾಷೆ ಯಾವುದಾದರು ಇದ್ದರೆ ಅದು ನಮ್ಮ ಮಾತೃಭಾಷೆ ಕನ್ನಡವಾಗಿದೆ, ದೈವಿಕ ಶಕ್ತಿ ಇರುವ ನಾಡು ಕರ್ನಾಟಕ ವೇದ ಉಪನಿಷತ್ತು ಗಳ ಕಾಲದಲ್ಲಿ ಕನ್ನಡವನ್ನು ಕಾಣಬಹುದು ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲಿ ಕನ್ನಡ ಭಾಷೆಯ ಉಲ್ಲೇಖ ಇರುವುದನ್ನು ಗಮನಿಸಿದ್ದೆವೆ,ವೈಭವ ಹಾಗೂ ಸಿರಿ ಸಂಪತ್ತಿನಿಂದ ಕೂಡಿರುವ ನಾಡು ನಮ್ಮ ನಾಡಗಿದೆ ,ಪಂಪ ರನ್ನ, ಪೊನ್ನ.ಜನ್ನ.ಕುವೆಂಪು ಶಿವರುದ್ರಪ್ಪ ,ಕುಂಬಾರರು ತಮ್ಮ ಸಾಹಿತ್ಯದ ಮೂಲಕ ಹಾಗೂ ಹನ್ನೆರಡನೆಯ ಶರಣರು ಬಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಶ್ರಿಮಂತಗೊಳಿಸಿದ್ದಾರೆ, ಅಂಗ್ಲಭಾಷೇಯ ಮಮ್ಮಿಗೂ ಕನ್ನಡದ ಅಮ್ಮನಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಡಿಸಿ ಮಲ್ಲಿಕಾರ್ಜುನ್ ಹಿಂಸೆ ಮಾನವನಿಗೆ ಸರಿಯಲ್ಲ,ಕೆಟ್ಟು ಹೋಗಿರುವ ಶಿಕ್ಷಣ ವ್ಯವಸ್ಥೆ ಮತ್ತು ಮನಸ್ಸಿನಿಂದ ಎನೆಲ್ಲ ಬದಲಾವಣೆಗಳು ಸಮಾಜದಲ್ಲಿ ನಡೆಯುತ್ತಿವೆ ..ಬುದ್ಧ ಜನಿಸಿದ ನಾಡಲ್ಲಿ ಇಷ್ಟೋಂದು ಕ್ರೌರ್ಯವೆ ,ಸಮಾಜದಲ್ಲಿ ಹಿಂಸೆ ಯಾಕೇ, ಶಿಕ್ಷಣ ಮತ್ತು ಶಿಕ್ಷಕರಿಂದ ಸಮಾಜವನ್ನು ಸುಂದರವಾಗಿ ನಿರ್ಮಿಸಬಹುದು .ಶಿಕ್ಷಣ ಪಡೆಯುವ ಪ್ರತಿಯೊಬ್ಬರು ಉನ್ನತ ಕನಸನ್ನು ಕಟ್ಟಿಕೊಳ್ಳಬೇಕು.ಮಕ್ಕಳಿಗೆ ನಾಲ್ಕು ಗೊಡೆಯ ಮದ್ಯೆ ನೀಡುವ ಶಿಕ್ಷಣಕ್ಕಿಂತ ಸಮಾಜದ ನಡುವೆ ಹೊರಗಡೆ ಪಡೆಯುವ ಶಿಕ್ಷಣ ಬಹುಮುಖ್ಯ ಎಂದರು
ಈ ಸಂದರ್ಭದಲ್ಲಿ ಕ.ಸಾ.ಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ ರಾಜು, ಹಿರಿಯ ಸಾಹಿತಿಗಳಾದ ಎನ್.ಎಂ ರವಿಕುಮಾರ್, ಉಪನ್ಯಾಸಕ ಎಸ್.ಹೊನ್ನೂರ್ ಸಾಬ್,ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ,ದ.ಸಂ.ಸ ಸಂಚಾಲಕ ಮಲೆಮಾಚಿಕೆರೆ ಸತೀಶ್, ಧನ್ಯ ಕುಮಾರ್ ,ಉಪನ್ಯಾಸಕಿ ಪ್ರೇಮ, ಮತ್ತಿತರರು ಇದ್ದರು
