By shukradeshe news
editor m.rajappa vyasgondanahalli
Kannada | online news portal |Kannada news online august 7_8_2026

ಐಟಿಐ ಕಾಲೇಜಿನಲ್ಲಿ ಗೊಂದಲ ನಿವಾರಣೆ ಪ್ರಾಂಶುಪಾಲ ವೀರೆಂದ್ರಮೂರ್ತಿಗೆ ಚಳಿ ಬಿಡಿಸಿದ ಶಾಸಕರು

ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಆತ್ಮಸಾಕ್ಷಿಯಾಗಿ ಸರ್ಕಾರಿ ಸೇವೆ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಖಡಕ್ಕಾಗಿ ಸೂಚನೆ‌ ನೀಡಿದ ಶಾಸಕರಾದ ಬಿ.ದೇವೇಂದ್ರಪ್ಪ ಪ್ರಾಂಶುಪಾಲರಿಗೆ ಕೆಲ ಸಿಬ್ಬಂಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕೆ ಪಲಶೃತಿ

ಜಗಳೂರು ಪಟ್ಟಣದ ಹೊರವಲಯದ ಅಶ್ವತ್ ರೆಡ್ಡಿ ನಗರದ ಬಳಿಯಿರುವ ಸರ್ಕಾರಿ ಐ.ಟಿ ಐ ಕಾಲೇಜಿನಲ್ಲಿ ಉಪಾನ್ಯಾಸಕರು ಮತ್ತು ಸಿಬ್ಬಂಧಿಗಳ ನಡುವೆ ಸಮನ್ವಯತೆ ಹೊಂದಾಣಿಕೆ ಕೊರತೆಯಿಂದ ಬಂದ ಅನುದಾನವನ್ನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ವಿಫಲವಾಗಿದ್ದಾರೆ.
ಐ.ಟಿ.ಐ ಕಾಲೇಜಿನಲ್ಲಿ ಸಿಸಿ ಕ್ಯಾಮರ ಆಳವಡಿಸುವ ಉದ್ದೇಶಕ್ಕೆ ಸಂಬಂಧಿಸಿದ ಕಡತದಲ್ಲಿ ಹಣ ಪಾವತಿಯಾಗಿದೆ ಆದರೆ ಕ್ಯಾಮರ ಆಳವಡಿಸಿರುವುದಿಲ್ಲ ಕಾಲೇಜಿನಲ್ಲಿ ಯಾವುದೇ ಕ್ಯಾಮರ ಕಾಣುತ್ತಿಲ್ಲ ಎಂದು ಮತ್ತು ಕಾಲೇಜಿನಲ್ಲಿ ಕೆಲ ಸಮಸ್ಯೆಗಳ ಬಗ್ಗೆ
ಶುಕ್ರದೆಸೆ ನ್ಯೂಸ್ ಅನ್ ಲೈನ್ ಮೀಡಿಯಾ ವಿಸೃತವಾಗಿ ವರದಿ ಮಾಡಲಾಗಿತ್ತು ಈ ವರದಿಯನ್ನ ಕ್ಷೇತ್ರದ ಶಾಸಕರು ಗಮನ ಸೆಳೆದು ಗೌರವನ್ವಿತ ಶಾಸಕರಾದ ಬಿ.ದೇವೇಂದ್ರಪ್ಪ ಖದ್ದು ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ ) ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಶಾಸಕ ಬಿ.ದೇವೇಂದ್ರಪ್ಪರವರ ಅದ್ಯಕ್ಷತೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು ಶೀಘ್ರವೆ ಸಿಸಿ ಕ್ಯಾಮರ ಆಳವಡಿಸದೆ ಹೋದರೆ ಸಸ್ಪೇಂಡ್ ಮಾಡಿಸುವೆ.
ಅಪರೂಪಕ್ಕೆ ಈ ಬರದ ನಾಡಿಗೆ ಒಂದು ಐಟಿಐ ಕಾಲೇಜು ಇದೆ ಉತ್ತಮ ಪಾಠ ಪ್ರವಚನಗಳ ಮೂಲಕ ವಿಧ್ಯಾರ್ಥಿಗಳಿಗೆ ಭೋದನೆ ಕರ್ತವ್ಯಕ್ಕೆ ಶರಣಾಗಬೇಕು .ನಿಮ್ಮಂತ ಪಾಠ ಹೇಳಿ ಕೊಡುವ ಗುರುಗಳೆ ಈಗಾದರೆ ಹೇಗೆ .ಮಾರ್ಚನಲ್ಲಿ ಹಣ ಡ್ರಾ ಆಗಿದೆ ಸಿಸಿ ಕ್ಯಾಮರ ಯಾಕೆ ಆಳವಡಿಸಿಲ್ಲ ಏನು ನಿಮ್ಮ ಸಮಸ್ಯೆ ಎಂದು ಪ್ರಾಂಶುಪಾಲರಿಗೆ ತರಾಟೆ ತೆಗೆದುಕೊಂಡರು .ಸರ್ಕಾರ ನಿಮಗೆ ಸಂಬಳ ಕೊಡುತ್ತಿದೆ ಸರಿಯಾದ ರೀತಿಯಾಗಿ ಕೆಲಸ ಮಾಡಿ ಎಂದು ಸಿಬ್ಬಂಧಿಗಳಿಗೆ ಚಳಿ ಬಿಡಿಸಿದರು.

ಸಂಬಂಧಿಸಿದ ಜಂಟಿ ನಿರ್ದೇಶಕರಿಗೆ ಪೊನ್ ಕರೆ ಮೂಲಕ ಮಾತನಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ನನಗೆ ವರದಿ ನೀಡಿ
ಉತ್ತಮ ಆಡಳಿತ ನಡೆಸಿಕೊಂಡು ಹೋಗಲು ತಾಕಿತು ಮಾಡಿ ಕಾಲೇಜಿನ ಪ್ರಾಂಶುಪಾಲರು ಸಮರ್ಥ ಆಡಳಿತ ನಡೆಸಿಕೊಂಡು ಹೋಗುವಂತೆ ಎಲ್ಲಾ ಸಿಬ್ಬಂಧಿಗಳೊಂದಿಗೆ ಸಾಮರಸ್ಯದಿಂದ ಕಾಲೇಜಿಗೆ ಬಂದಂತ ಅನುದಾನಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಮಾದರಿ ಕಾಲೇಜುನ್ನಾಗಿ ಮಾಡುವಂತೆ ಖಡಕ್ ಆಗಿ ಸೂಚನೆ ನೀಡಿದರು.

ಜಗಳೂರು ಸರ್ಕಾರಿ ಐ.ಟಿ ಐ ಕಾಲೇಜಿನಲ್ಲಿ ಮನೆಯೊಂದು ಮೂರು ಬಾಗಿಲು”

ಅಲ್ಲಿನ ಕೆಲ ಸಿಬ್ಬಂಧಿ ವರ್ಗ ಹಾಗೂ ಸ್ಟೋರ್ ಕಿಪರ್ ವಾಮದೇವಪ್ಪ. ಕೆಲ ಉಪಾನ್ಯಾಸಕರ ಸ್ವಾರ್ಥ ಪ್ರತಿಷ್ಠೆಗಳಿಂದ ಕಾಲೇಜಿನಲ್ಲಿ ಪ್ರಾಂಶುಪಾಲರ ಸುಗಮ‌ ಆಡಳಿತ ವ್ಯವಸ್ಥೆ ಅವ್ಯವಸ್ಥೆಯಾಗಿ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ಕುಂಠಿತವಾದಂತಾಗಿದೆ .

ಶುಕ್ರದೆಸೆ ಕನ್ನಡ ನ್ಯೂಸ್ ವೆಬ್ ಮೀಡಿಯಾದಲ್ಲಿ ಜಗಳೂರು ಐಟಿಐ ಕಾಲೇಜಿನಲ್ಲಿ ಸಿಸಿ ಕ್ಯಾಮರ ಆಳವಡಿಸುವ ಹೆಸರಿನಲ್ಲಿ ಹಣ ಸಂಬಂಧಿಸಿದ ದಾವಣಗೆರೆ ಶ್ರೀ ಕೃಷ್ಣ ಟೆಕ್ನಾಲಾಜಿ ಅಂಗಡಿಗೆ ಹಣ ಪಾವತಿಸಲಾಗಿದೆ ಆದರೆ ಖರಿದಿಸಿದ ಸಿಸಿ ಕ್ಯಾಮರದ ಮೇಟರಿಯಲ್ ನ್ನ ಯಾವುದೆ ರೀತಿ ಕಾಲೇಜಿನಲ್ಲಿ ಆಳವಡಿಕೆಯಾಗದೆ ಲೋಪವಾಗಿದೆ ದುರ್ಬಳಕೆಯಾಗಿದೆ ಎಂದು ವರದಿ ಮಾಡಿರುವ ಪ್ರತಿಫಲವಾಗಿ ಕ್ಷೇತ್ರದ ಶಾಸಕರು ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಸಿಬ್ಬಂಧಿಗಳಿ ಕ್ಲಾಸ್ ತೆಗೆದುಕೊಂಡು ಗರಂ ಆದರು .
ಒಬ್ಬರೆ ಒಬ್ಬರೆ ಕಥೆ ಹೇಳಬೇಡಿ ಕೆಲಸ‌ಮಾಡಿ ಇಲ್ಲ ಜಾಗ ಖಾಲಿ ಮಾಡಿ ಬೇರೆಡೆಗೆ ವರ್ಗಾವಣೆತಾಗಿ ಹೋಗುವಂತೆ ಸೂಚನೆ ನೀಡಿ

ಕಳೆದ ದಿನಗಳ ಹಿಂದೆ ಕಾಲೇಜಿಗೆ ಕಣ್ಣಾಗಾವಲು ಸಿ‌ಸಿ ಕ್ಯಾಮರ್ ಆಳವಡಿಸಲು ಸುಮಾರು 99 ಸಾವಿರ ಹಣ ಬಂದರೂ ಸಹ ಸಿಸಿ‌ ಕ್ಯಾಮರ ಆಳವಡಿಕೆಯಾಗಿರುವುದಿಲ್ಲ
ದಿನಾಂಕ _25_3 _2026 ಸಾಲಿನಲ್ಲಿ ಶ್ರೀ‌ಕೃಷ್ಣ ಟೆಕ್ನಾಲಜಿ ದಾವಣಗೆರೆ ಇವರಿಗೆ ಸಿ ಸಿ ಕ್ಯಾಮರ ಖರಿದಿಸಲು ಹಣ ಸಂದಾಯ ಮಾಡಲಾಗಿದೆ .ಯಾಕೆ ತಡವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ವೀರೆಂದ್ರಮೂರ್ತಿ ಸಮರ್ಥವಾಗಿ ಆಡಳಿತ ನಡೆಸುವಂತೆ ಸೂಚನೆ‌ ನೀಡಿದರು

ಒಟ್ಟಾರೆ ಬಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಕೆಲಸ ಮಾಡಿ ಲೋಪದೋಷಗಳನ್ನ ಸರಿಪಡಿಸಿ ಉತ್ತಮ ಆಡಳಿತ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ಪಾಠ ಪ್ರವಚನ ಚಟುವಟಿಕೆಗಳನ್ನ ನಡೆಸಿಕೊಂಡು ಹೋಗಲು ಕ್ರಮಕೈಗೊಳ್ಳಬೇಕು.ತಪ್ಪಿಸ್ಥರ ವಿರುದ್ದ ನೋಟಿಸ್ ಜಾರಿ ಮಾಡಿ ಕಟ್ಟು ನಿಟ್ಟಿನ ಕ್ರಮಕೈಗೋಳ್ಳುವಂತೆ ಪ್ರಾಂಶುಪಾಲರಿಗೆ ಕಿವಿ ಮಾತು ಹೇಳಿದರು.

ಸಿಸಿ ಕ್ಯಾಮರ್ ಹಣ ಯಾವುದೇ ರೀತಿ ದುರ್ಬಳಕೆಯಾಗಿರುವುದಿಲ್ಲ‌ ನಾವು ಖರಿದಿಸಿದ ಸಿಸಿ‌ ಕ್ಯಾಮರ್ ಮೇಟರಿಯಲ್ ಈಗಾಗಲೇ‌ ಕಾಲೇಜಿಗೆ ಬಂದಿದ್ದು ನಮ್ಮ ಸಿಬ್ಬಂಧಿಗಳಾದ ಸ್ಟೋರ್ ಕಿಪರ್ ಇನ್ ವರ್ಡ್ ಮಾಡಿಕೊಳ್ಳದೆ ಲೋಪವಾಗಿದೆ ಸರಿಪಡಿಸಿಕೊಂಡು ಶೀಘ್ರವೆ ಸಿಸಿ ಕ್ಯಾಮರ್ ಆಳವಡಿಸಲಾಗುವುದು ಎಂದು ಶಾಸಕರ ಅದ್ಯಕ್ಷತೆಯಲ್ಲಿ‌ ನಡೆದ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಂಶುಪಾಲ ವೀರೆಂದ್ರಮೂರ್ತಿ

ಈ ಸಂದರ್ಭದಲ್ಲಿ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ .ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ. ಶಾಸಕರ ಆಪ್ತಸಹಾಯಕ‌‌ ರಾಜು .ಮುಖಂಡರಾದ ಹನುಮಂತಪ್ಪ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಹಾಜುರಿದ್ದರು.

You missed

error: Content is protected !!