By shukradeshe news
editor m.rajappa vyasgondanahalli
Kannada | online news portal |Kannada news online august 8_8_2026
ದೇಶದಲ್ಲಿ ಕೋಮು ಗಲಬೆ ಷಡ್ಯಂತ್ರ ಮಾಡುವ ನಕಲಿ ಅಂಬೇಡ್ಕರ್ ವಾದಿಗಳಿಂದ ದೇಶಕ್ಕೆ ಆಪತ್ತು .
ಜಗಳೂರು :
ಭಾರತ ದೇಶದಲ್ಲಿ ಸರ್ವರು ಸಮನರಾಗಿ ಸಹಭಾಳ್ವೆಯಿಂದ ಶಾಂತಿಯುತವಾಗಿ ಬದುಕಲು ಶ್ರಮಿಸಿದಂತ ಮಹಾನ್ ನಾಯಕರನ್ನ ಇತ್ತಿಚಿಗೆ ಧರ್ಮ ಜಾತಿ ಹೆಸರಿನಲ್ಲಿ ದೇಶದ್ರೋಹ ಪಟ್ಟ ಕಟ್ಟುವಂತ ಕೋಮುವಾದಿ ಶಕ್ತಿಗಳು ಸಮಾಜದಲ್ಲಿ ವಿಷ ಬೀಜ ಬಿತ್ತಿ ಅಂಧಕಾರ ಮೌಡ್ಯ ಶೋಷಣೆಗಳಿಂದ ಮುಕ್ತವಾಗಿ ಈ ನಾಡು ಕಂಡ ಕವಿ ಕುವೇಂಪುರವರ ವಾಣಿಯಂತೆ ಸರ್ವಜನಾಂಗದ ತೋಟ ಎಂಬಂತೆ ಶಾಂತಿಯುತ ಸರ್ವರು ಸಮನಾಗಿ ಬದುಕಲು ಜನ ಜಾಗೃತಿ ಮೂಡಿಸುವ ಉದ್ದೇಶವೆ ಮಾನವ ಬಂಧುತ್ವ ಮುಖ್ಯ ದೇಯ್ಯವಾಗಿದೆ ಎಂದು ಮಾನವ ಬಂದುತ್ವ ವೇದಿಕೆ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಹೇಳಿದರು
ತಾಲ್ಲೂಕಿನ ಗೋಗುದ್ದು ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಗ್ರಾಮ ಘಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರಪೂರ್ವದಲ್ಲಿ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಅವರು ತಳಸಮುದಾಯಗಳಿಗೆ ನೀಡಿದ ಮಹತ್ವದ ಶಿಕ್ಷಣದ ಜೀವನ ಸಾಧನೆ ಬದಲಾಗಿ ಕೇವಲ ಶ್ರೇಷ್ಠ ಜಾತಿ ಎಂಬ ಕಾರಣಕ್ಕೆ ಬೇರೆಯವರನ್ನ ಓಲೈಕೆ ಮಾಡಿ ಜಯಿಂತಿ ಆಚರಣೆ ಸರಿಯಲ್ಲ ಕೃಷ್ಣ ರಾಜ ಸಾಗರ ಡ್ಯಾಂಮ್ ಕಟ್ಟಲು ತಮ್ಮ ಹೆಂಡತಿ ಮಕ್ಕಳ ಒಡವೆಗಳನ್ನ ಅಡವಿಟ್ಟು ತ್ಯಾಗ ಮಾಡಿದವರ ಬಗ್ಗೆ ಇತಿಹಾಸ ತಿರುಚಲಾಗಿದೆ ಇನ್ನೊಬ್ವರ ದೇವರಿಗೆ ಕೈ ಮುಗಿಯುವ ಬದಲಾಗಿ ನೀವೆ ದೇವರಾಗಿ ಎಂದ ನಾರಾಯಣ ಗುರು ಎಂದವರ ಬಗ್ಗೆ ನಾವು ಯೋಚಿಸುತ್ತಿಲ್ಲ ಅದು ಅಲ್ಲದೆ ಸ್ವಾಭಿಮಾನ ಸ್ವಾತಂತ್ರಕ್ಕಾಗಿ ತನ್ನ ಮಕ್ಕಳನ್ನೇ ಅಡವಿಟ್ಟ ಟಿಪ್ಪು ಸುಲ್ತಾನ್ ಅವರನ್ನ ಒಂದು ಧರ್ಮಕ್ಕೆ ಸೀಮಿತ ಮಾಡಿ ಇತಿಹಾಸವನ್ನ ತಿರಿಚಿದ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು
ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಮರೇನಹಳ್ಳಿ ಬಸವರಾಜ್ ಮಾತನಾಡಿ ಬುದ್ದ ಬಸವ ಅಂಬೇಡ್ಕರ್ ವಿಚಾರಧಾರೆಯಲ್ಲಿ ಮೌಡ್ಯ ಹಾಗು ಕಂದಾಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಇದಾಗಿದ್ದು ಜೊತೆಗೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ತಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಂತ ಯಾರೇ ಇದ್ದರು ನಮ್ಮ ಗಮನಕ್ಕೆ ತಂದರೆ ನಾವೆಲ್ಲರೂ ಸೇರಿ ಅವಕಾಶ ಕಲ್ಪಿಸುತ್ತೇವೆ ತಾವು ಅಣಿಯಾಗಿರಿ ಎಂದರು
ದಲಿತ ಸಂಘರ್ಷ ಸಮಿತಿ ಸಂಚಾಲಕ ಮಲೆ ಮಾಚಿಕೆರೆ ಸತೀಶ್ ಮಾತನಾಡಿ ಇಂದಿನ ತಿರಿಚಿದ ಇತಿಹಾಸದಿಂದ ನಮ್ಮ ಸಮಾಜವನ್ನ ಬೇರೆ ಕಡೆ ಕೊಂಡೊಯ್ಯುವ ಹುನ್ನಾರು ನೆಡೆಯುತ್ತಿದೆ ಭಾರತ ದೇಶದಲ್ಲಿ ವೀರ ಪರಾಕ್ರಮವಾಗಿ ಹೋರಾಟ ಮಾಡಿದ ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮೀತ ಮಾಡಿ ಕೋಮುವಾದ ಸೃಷ್ಟಿಸುವಂತ ಹುನ್ನಾರ ನೆಡೆಯುತ್ತಿದೆ ಅದರಿಂದ ನೀವು ದೂರ ಇದ್ದು ನೈಜ್ತ ಇತಿಹಾಸ ತಿಳಿಯಲು ಮಾನವ ಬಂಧುತ್ವ ವೇದಿಕೆ ಸೇರಿಕೊಳ್ಳಿ ಯಾವುದೇ ದರ್ಮ ಜಾತಿ ಬೇದ ಬಾವ ಮಾಡದೆ ಇದರು ನಮ್ಮಂತಹ ದಲಿತ ಪರ ಹಾಗು ಪ್ರಗತಿಪರ ಸಂಘಟನೆಗೊಂದಿಗೆ ಕೈಜೋಡಿಸಿ ಎಂದರು
ವಕೀಲ ಗೋಗುದ್ದು ತಿಪ್ಪೇಸ್ವಾಮಿ ಮಾತನಾಡಿ
ಅಂಬೇಡ್ಕರ್ ನಕಲಿವಾದಿಗಳಿಂದ ಸಮಾಜದಲ್ಲಿ ಮೌಢ್ಯ ಕಂದಾಚಾರಗಳು ಹೆಚ್ಚಾಗಿ ವಾಮಚಾರ ಮಾಡುವ ಮೂಲಕ ಸಮಾಜದಲ್ಲಿ ಭಯ ಹುಟ್ಟಿಸುವ ಡೋಂಗಿ ಬಾಬಗಳ ವಿರುದ್ದ ಪ್ರಕರಣ ದಾಖಲಿಸಬೇಕು. ಡೋಂಗಿ ಪೂಜಾರಿಗಳು ಶೋಷಿತ ಸಮುದಾಯದ ಜನರನ್ನ ಟಾರ್ಗೇಟ್ ಮಾಡಿ ಅವರ ಅಸಹಾಯಕತೆಯನ್ನ ದುರುಪಯೋಗಂಡಿಸಿಕೊಂಡು ಹಣ ಪೀಕುವ ದಂಧೆಗಿಳಿದಿದ್ದಾರೆ .ನಮ್ಮ ಶೋಷಿತ ಸಮುದಾಯದವರು ದೇವರ ಹೆಸರಿನಲ್ಲಿ ಮೌಡ್ಯ ಕಂದಚಾರದ ಪೂಜೆ ಪುನಾಸ್ಕರಕ್ಕೆ ಬಲಿಯಾಗುವ ಬದಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೋಡಿಸಿ ನಮ್ಮಂತ ಒಬ್ಬ ಸಾಮಾನ್ಯ ವ್ಯಕ್ತಿ ಬೆಳೆಯಲು ಸಂವಿಧಾನವೇ ಕಾರಣ ಆ ದೃಷ್ಟಿಯಲ್ಲಿ ನಮ್ಮ ಗ್ರಾಮದ ನಾಗರೀಕರಿಗೆ ವೈಜ್ಞಾನಿಕ ವೈಚಾರಿಕೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ನೀವೆಲ್ಲರೂ ಮಾನವ ಬಂದುತ್ವ ವೇದಿಕೆಗೆ ಕೈಜೋಡಿಸುವ ಮೂಲಕ ಗ್ರಾಮಘಟಕ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಾನವ ಬಂಧುತ್ತ ವೇದಿಕೆ ಜಿಲ್ಲಾ ಮುಖಂಡ ಧನ್ಯಕುಮಾರ್ , ಮಾಜಿ ಅಧ್ಯಕ್ಷ ರೇಣುಕೇಶ್, ವಕೀಲರಾದ ನಾಗೇಶ್ , ತಿಪ್ಪೇಸ್ವಾಮಿ ,ಓಬಳೇಶ್ , ಗ್ರಾ.ಪಂ.ಮಾಜಿ ಸದಸ್ಯ ದಾದಹುಲಿ , ಮುಖಂಡರಾದ ಟೀಪುಸಾಬ್ , ಸಯ್ಯದ್ ನೂರ್ , ಖಲಂದರ್ , ರಹಮತ್ , ಪರಶುರಾಮ್ , ಸಣ್ಣ ಯಲ್ಲಪ್ಪ , ರಾಜಪ್ಪ , ಸನೀಲ್ ಕುಮಾರ್ , ಸಾಧಿಕ್ , ಜಿಲಾವುಲಾ , ಅನ್ವರ್ , ನೂರ್ ವುಲ್ಲಾ , ಫಯಾಜ್ , ಮುಖ್ಯ ಶಿಕ್ಷಕ ಕುಬೇರಪ್ಪ , ಸಹಶಿಕ್ಷಾರಾದ ಪ್ರಹ್ಲಾದ್ ಸೇರಿದಂತೆ ಶಾಲಾ ಸಿಬ್ಬಂದ್ದಿಗಳು ಗ್ರಾಮಸ್ಥರು ಇದ್ದರು
