By shukradeshe news
editor m.rajappa vyasgondanahalli
Kannada | online news portal |Kannada news online august 13 _8_2026
ಜಗಳೂರು ಪೊಲೀಸರ ಕಾರ್ಯಚರಣೆ, ಇಬ್ಬರು ಅಂತರ್ ರಾಜ್ಯ ಸರಗಳ್ಳರ ಬಂಧನ, ಸ್ವತ್ತು ವಶ
ತಾಲ್ಲೂಕಿನ ತಾಲ್ಲೂಕು ಕಮಂಡಲಗೊಂದಿ ಗ್ರಾಮದ ವಾಸಿ ಶ್ರೀಮತಿ ಗೀತಮ್ಮ ಎಂಬುವ ಮಹಿಳೆ ಗ್ರಾಮದ ತಮ್ಮ ಅಂಗಡಿಯಲ್ಲಿರುವಾಗ ಯಾರೋ ಎರಡು ಜನ ಆಸಾಮಿಗಳನ್ನು ಮೋಟಾರ್ ಬೈಕಿನಲ್ಲಿ ಅಲ್ಲಿಗೆ ಬಂದು ಅಂಗಡಿಯಲ್ಲಿ ವಿಮಲ್ ತೆಗೆದುಕೊಂಡು ಹಣವನ್ನು ಕೊಡುವ ನೆಪದಲ್ಲಿ ಗೀತಮ್ಮರವರ ಕೊರಳಲ್ಲಿದ್ದ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಗೀತಮ ಸಾಮಾನ್ಯವಾಗಿ ಕಳ್ಳರು ನೀಡಿದ ಹಣ ಪಡೆದುಕೊಂಡು ಮನೆಯ ಒಳಗೆ ಹೋಗುತ್ತಿರುವಾಗ ಹಿಂಬದಿಯಿಂದ ಹೋಗಿ ಗೀತಮ್ಮ ರವರ ಕೊರಳಿನಲ್ಲಿದ್ದ ಸುಮಾರು 4 ಲಕ್ಷ ರೂಪಾಯಿ ಬೆಲೆ ಬಾಳುವ 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋಗಿದ್ದಾರೆ.
ಪಿರ್ಯಾದಿಯವರು ಗೀತಮ ನೀಡಿದ ದೂರಿನ ಮೇರೆಗೆ ದಿನಾಂಕ:01-11-2025 ರಂದು ಬೆಳಿಗ್ಗೆ ಸುಮಾರು 9-45 ಗಂಟೆಯಲ್ಲಿ ಜಗಳೂರು ಜಗಳೂರು ಪೊಲೀಸ್ ಠಾಣೆ ಗುನ್ನೆ ನಂ:235/2025 ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.
ಈ ಸಂಬಂಧವಾಗಿ ಮೇಲ್ಕಂಡ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರು ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿ ಎಸ್ ರವರ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸಿದ್ರಾಮಯ್ಯ ನೇತೃತ್ವದಲ್ಲಿ ಅಧಿಕಾರಿ-ಸಿಬ್ಬಂದಿಗಳ ತಂಡ ಮೇಲ್ಕಂಡ ಪ್ರಕರಣದಲ್ಲಿ ಸರಗಳ್ಳತನ ಮಾಡಿದ್ದ ಆರೋಪಿತರುಗಳಾದ ಕುಖ್ಯಾತ ಇರಾನಿ ಗ್ಯಾಂಗಿನ *01) ಸೈಯದ್ ಅಬ್ಬಾಸ್ ಆಲಿ @ ಕೋಡಿ @ ಅಬು ಆಲಿ, 45 ವರ್ಷ, 02) ಹುಸೇನ್ ಭಾಷಾ, 38 ವರ್ಷ, ಆರೋಪಿತರಿಬ್ಬರು ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ ದವರು* ಇವರುಗಳನ್ನು ಪತ್ತೆ ಮಾಡಿದ್ದು, *ಆರೋಪಿತರಿಂದ ಸದರಿ ಪ್ರಕರಣದಲ್ಲಿ ಕಳವು ಮಾಡಿದ ಅಂದಾಜು 04 ಲಕ್ಷ ರೂಪಾಯಿ ಬೆಲೆಬಾಳುವ 42 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ .*
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀ ಶೇಖರ್ ಹೆಚ್ ಟಿ ಐಪಿಎಸ್, ದಾವಣಗೆರೆ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.
