By shukradeshe news
editor m.rajappa vyasgondanahalli
Kannada | online news portal |Kannada news online august 15 _8_2026

ಜಗಳೂರು ಪಟ್ಟಣದಲ್ಲಿ ಸಂಗೀತ‌ ರಸ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮ ಆಯೋಜನೆ ಹಾಸ್ಯ ಖ್ಯಾತ ಕಲಾವಿದ ಟೆನ್ನಿಸ್ ಕೃಷ್ಣ ಆಗಮನ ಆಯೋಜಕ ಪೂಜಾರ್ ಸಿದ್ದಪ್ಪ

ಜಗಳೂರು ಪಟ್ಟಣದ ಗುರುಭವನದಲ್ಲಿ ಇದೆ ಆಗಸ್ಟ್ 22 _23 ರಂದು ಶನಿವಾರ ಮತ್ತು ಭಾನುವಾರ ಜರುಗಲಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮ ಜರುಗಲಿದೆ. ಈ ಒಂದು ಕಾರ್ಯಕ್ರಮವನ್ನ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಉದ್ಗಾಟನೆ ಮಾಡಲಿದ್ದು ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರುಗಳಾದ ಎಸ್ ವಿ.ರಾಮಚಂದ್ರಪ್ಪ ಹಾಗೂ ಮಾಜಿ ಶಾಸಕ ಹೆಚ್ ಪಿ‌ ರಾಜೇಶ್ .ಕ್ಷೇತ್ರದ ಜಿಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ ‌.ರಾಜ್ಯ ಕಾಂಗ್ರೆಸ್ ಎಸ್ ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ‌

ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ಸಮಿತಿ ಅಧ್ಯಕ್ಷರಾದ ಪೂಜಾರ್ ಸಿದ್ದಪ್ಪ ಮಾತನಾಡಿ
ಜಗಳೂರು ಪಟ್ಟಣದ ಗುರುಭವನದಲ್ಲಿ ದಿನಾಂಕ ಆಗಸ್ಟ್ 22,_23 ರಂದು ಗಾನ ಲಹರಿ ಸಾಂಸ್ಕೃತಿಕ ಕಲಾವೇದಿಕೆ ಮತ್ತು ವಾಯ್ಸ್ ಆಫ್ ಜಗಳೂರು ಸಂಯುಕ್ತಾಶ್ರಯದಲ್ಲಿ “ಎಸ್.ಜಾನಕಿ ಅಮ್ಮ ನವರ ಸವಿ ನೆನಪಿನಾರ್ಥವಾಗಿ ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

ದಿನಾಂಕ:22.08.2026ರ ಶನಿವಾರ ಬೆಳಿಗ್ಗೆ 10:00 ಗಂಟೆಯಿಂದ ಗಾಯನ ಸ್ಪರ್ಧೆ ಏರ್ಪಡಿಸಲಾಗಿದ್ದು, ಗಾಯಕರ ಧ್ವನಿ ಪರೀಕ್ಷೆ, ತಾಳ, ಲಯ ಕುರಿತು ಇಬ್ಬರು ಹಿರಿಯ ವೀಕ್ಷಕರು ಅತ್ಯುತ್ತಮ ಗಾಯಕರನ್ನು ಬಹುಮಾನಕ್ಕೆ ಆಯ್ಕೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕನ್ನಡ ಚಲನಚಿತ್ರ ಖ್ಯಾತ ಹಾಸ್ಯನಟರಾದ ಶ್ರೀ ಟೆನ್ನಿಸ್ ಕೃಷ್ಣರವರು ದಿನಾಂಕ:23.08.2026ರಂದು ಬೆಳಿಗ್ಗೆ ಜಗಳೂರು ಪಟ್ಟಣಕ್ಕೆ ಆಗಮಿಸಲಿದ್ದಾರೆ.

ಈ ರಾಜ್ಯ ಮಟ್ಟದ ಕನ್ನಡ ಕರೋಕೆ ಗಾಯನ ಸ್ಪರ್ಧಯಲ್ಲಿ ಪ್ರಥಮ ಬಹುಮಾನ ರೂ.20,000/-ಸಾವಿರ ಜೊತೆಗೆ ಟ್ರೋಫಿ, ದ್ವಿತೀಯ ಬಹುಮಾನ ರೂ.15,000/-ಸಾವಿರ ಜೊತೆಗೆ ಟ್ರೋಫಿ, ತೃತೀಯ ಬಹುಮಾನ ರೂ.10,000/-ಸಾವಿರ ಜೊತೆಗೆ ಟ್ರೋಫಿ ಕಾಯ್ದಿರಿಸಲಾಗಿದೆ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9901635116, 9606306716. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಗಣ್ಯರು, ಸೇರಿದಂತೆ ಜಿಲ್ಲಾ ಮಟ್ಟದ ಮತ್ತು ಸ್ಥಳೀಯ ರಾಜಕೀಯ ಗಣ್ಯರು, ವಿವಿಧ ಸಮಾಜದ ಪದಾಧಿಕಾರಿಗಳು. ಜಗಳೂರು ತಾಲ್ಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ

*

Leave a Reply

Your email address will not be published. Required fields are marked *

You missed

error: Content is protected !!