ಪ್ರಸ್ತುತ ದಿನಗಳಲ್ಲಿ ಕೆಲ ಸಂಘಟಕರು ಅಂಬೇಡ್ಕರ್ ಅಭಿಮಾನಿ ಎಂದು ಹೇಳುವಂತವರೆ ಮೌಡ್ಯ ಪೂಜೆಗಳನ್ನ ಮಾಡಿ ಬಹ್ಮಾಂಡವನ್ನ ಸೃಷ್ಟಿಸಿ ಮಹಾಪಂಡಿತನಂತೆ ಬಡವರ ಬಳಿ ಹಣ ಪೀಕುವ ವ್ಯಕ್ತಿ‌ಯ ಬಣ್ಣದ ಆಟಗಳಿಗೆ ಬೇಕಿದೆ “ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರಗಳು

ಪ್ರತಿಯೊಬ್ಬರ ಮನೆಗಳ ಗೋಡೆಗಳಿಗಷ್ಟೇ ಅಲ್ಲದೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮಹನೀಯರ ಭಾವಚಿತ್ರಗಳಿಗಿಂತ ವಿಚಾರಗಳು ಪಸರಹರಿಸಬೇಕು.ಕೇವಲ ಭಾವಚಿತ್ರ ಮನೆಗಳಲ್ಲಿ ಇಡುವುದಕ್ಕಿಂತ, ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಎಂದು ಪ್ರಾಂಶುಪಾಲ ನಾಗಲಿಂಗಪ್ಪ ತಿಳಿಸಿದ್ದಾರೆ.

ತಾಲ್ಲೂಕಿನ ಅಣಬೂರು ಗ್ರಾಮದಲ್ಲಿ ಮಾನವ ಬಂಧುತ್ವ ವೆದಿಕೆ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಸಂಚಾಲನಾ ಸಮಿತಿಯ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ ಮಾತನಾಡಿದ ಅವರು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದು ನಮ್ಮ ಮೊದಲ ಕೆಲಸವಾಗಬೇಕು ಮನುಷ್ಯನಿಗೆ ಬಸವಣ್ಣನವರ ವಚನಗಳ ಸಾರ ತಿಳಿಯಬೇಕಾಗಿದೆ ಮನೆಗಳಿಗೆ ಬಂದಿರುವ ಬಸವಣ್ಣ ಮನಸ್ಸಿಗೆ ಬರಬೇಕಾಗಿದೆ ಅಮವಾಸ್ಯೆಯ ನೆಪದಲ್ಲಿ ಇಡಿ ಬಾರತದಲ್ಲಿ ವಾಹಗಳನ್ನು ತೊಳೆಯಲು ಮೌಢ್ಯತೆಯ ಹಿನ್ನೆಲೆಯಲ್ಲಿ ಜಲವನ್ನು ಪೋಲು ಮಾಡಲಾಗುತ್ತಿದೆ,ಆರೋಗ್ಯಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು.ಮೂಢನಂಬಿಕೆಯನ್ನು ಬಿಂಬಿಸುವ ವಸ್ತುಗಳನ್ನು ಬಳಸಲಾಗುತ್ತಿದೆ,ಬ್ರಾಹ್ಮಣ್ಯ ವ್ಯವಸ್ಥೆ ಇಂದು ದೇಶದಲ್ಲಿ ಮುನ್ನೆಲೆಗೆ ಬರುತ್ತಿದ್ದು, ನಾವೆಲ್ಲರೂ ಎಚ್ಚೇತ್ತುಕೊಳ್ಳಬೇಕು ಎಂದರು

ದೇವರನ್ನು ಸೃಷ್ಟಿಸುವುದನ್ನು ಕಲಿತಿರುವ ಮನುಷ್ಯ,ಮನುಷ್ಯನ್ನು ಪ್ರೀತಿಸುವುದನ್ನು ಕಲಿತಿಲ್ಲ ,ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಯವರಿಗೆ ರಾಮಮಂದಿರ ಉದ್ಘಾಟನೆಗೆ ಅವಕಾಶ ನೀಡಲಿಲ್ಲ,ಮಹಿಳೆಗೆ ಸ್ವತಂತ್ರ ನೀಡಬಾರದು ಎನ್ನುವ ಮನುವಾದಿ ಮನಸ್ಥಿತಿಗಳು ಮತ್ತೆ ಮತ್ತೆ ಸಂಪ್ರದಾಯಿಕ ಸಿದ್ಧಾಂತಗಳನ್ನು ಹಂತ ಹಂತವಾಗಿ ಸಮಾಜದಲ್ಲಿ ತರಲು ಪ್ರಯತ್ನಿಸುತ್ತಿವೆ,ದೇವರ ಹೆಸರಲ್ಲಿ ಮೌಢ್ಯತೆ ತುಂಬಿ ಲೂಟಿ ಹೊಡೆಯುವ ಕೆಲಸಗಳು ನಡೆಯುತ್ತಿವೆ, ಬುದ್ಧನ ಶಾಂತಿ ಮಾರ್ಗ ಬಸವಣ್ಣನ ಕಲ್ಯಾಣ ಕಾರ್ಯ ಅಂಬೇಡ್ಕರ್ ರವರ ಸಮಾಜಿಕ ನ್ಯಾಯ.ಸಂವಿಧಾನದ ಅಶಯಗಳನ್ನು ಹೊತ್ತ ಮಾನವ ಬಂಧುತ್ವ ಇಂದು ಸಮಾಜದಲ್ಲಿ ವೈಜ್ಞಾನಿಕ ವೈಚಾರಿಕ ಪ್ರಜ್ಞೆ ಮೂಡಿಸುತ್ತಿದ್ದು ಮೌಢ್ಯಮುಕ್ತ ಸಮಾಜ ನಿರ್ಮಾಣ ಮಾಡಲು ಚಳುವಳಿ ಆರಂಭವಾಗಿದೆ, ನಾವೆಲ್ಲರೂ ಮಾನವೀಯತೆ ಬೆಳೆಸಲು ಮಾನವ ಬಂಧುತ್ವ ವೇದಿಕೆಯೊಂದಿಗೆ ಸಾಗಬೇಕಿದೆ ಎಂದರು

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಮಲೆಮಾಚಿಕೆರೆ ಸತೀಶ್. ಮಾತನಾಡಿ ಶತ ಶತಮಾನಗಳಿಂದ ಕೆಲವೊಂದು ವರ್ಗಗಳು ಹೇರಿರುವ ಮೂಢನಂಬಿಕೆ ಗಳಿಂದ ಇಂದು ಸಹ ದೇಶದಲ್ಲಿ ಧರ್ಮ ವರ್ಗ ಜಾತಿ ಆಧಾರಿತವಾಗಿ ಕಂದಕಗಳನ್ನು ಹುಟ್ಟಿ ಹಾಕುತ್ತಿದ್ದಾರೆ .ಮಾನವ ಮಾನವನ್ನು ವ್ಯಕ್ತಿಗತವಾಗಿ ದ್ವೇಷಭಾವನೆಗಳನ್ನು ಮೂಡಿಸುವ ಮಾನವೀಯತೆ ವಿರೋಧಿ ಮನುವಾದಿ ಶಕ್ತಿಗಳು ಪ್ರಬಲಗೊಳ್ಳುತ್ತಿವೆ,ಹಾಗಾಗಿ ಸಂವಿಧಾನದ ಆಶಯಗಳನ್ನು ಉಳಿಸುವ ಸಮಾಸಮಾಜ ನಿರ್ಮಾಣ ಮಾಡುವ ಹಾಗೂ ಶೋಷಿತ ಬಡವರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿಯವರು ಮಾನವ ಬಂಧುತ್ವ ಸಂಸ್ಥಾಪನೆ ಮಾಡಿದ್ದಾರೆ .ಈ ಚಳುವಳಿಗೆ ನಾವೆಲ್ಲರೂ ಕೈಜೋಡಿಸಿ ಸ್ವಾಸ್ಥ್ಯ ಸಮಾಜ ಕಟ್ಟಬೇಕಿದೆ ಎಂದರು

ಮಾನವ ಬಂಧುತ್ವ ವೇದಿಕೆಯು ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಸ್ಥಾಪಿತವಾಗಿದೆ .ಸಂವಿಧಾನ ಬರುವುದಕ್ಕಿಂತ ಮುಂಚೆ ವರ್ಣವ್ಯವಸ್ಥೆಲ್ಲಿ ತಳಸಮುದಾಯದವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದರು ಹಾಗೂ ಹಲವು ಅಸಮಾನತೆಗಳು ಸಮಾಜದಲ್ಲಿ ತಾಂಡವಾಡುತ್ತಿದ್ದವು, ಸಂವಿಧಾನ ಜಾರಿಯಾದ ಮೇಲೆ ಹಲವು ಸುಧಾರಣೆಗಳು ಆಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ದಾರ್ಮಿಕ ದೈವಿಕ ವಿಷಯಗಳನ್ನು ಮುಂದಿಟ್ಟು ಸಮಾಜ ಒಡೆಯುವ ಷ್ಯಡ್ಯಂತ್ರಗಳು ಮನುವಾದಿ ಮನಸ್ಥಿತಿಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ ಅದ್ದರಿಂದ ನಾವೆಲ್ಲರೂ ಜಾಗೃತಾಗಿ ಸತೀಶ್ ಜಾರಕಿಹೊಳಿಯವರ ಸಮಾಜಮುಖಿ ಚಿಂತನೆಗಳನ್ನು ಅರಿತು ಮಾನವ ಸಮಾಜ ನಿರ್ಮಿಸಲು ಚಳುವಳಿ ಜೋತೆ ಸಾಗಬೇಕಿದೆ ಎಂದರು

ಈ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ಪಪದಾಧಿಕಾರಿಗಳಾದ ವಕೀಲ ಚಿಕ್ಕಮಲ್ಲನಹೊಳೆ ತಿಪ್ಪೇಸ್ವಾಮಿ.ಗೂಗುದ್ದು ತಿಪ್ಪೇಸ್ವಾಮಿ. ಗ್ರಾಮ ಸಂಚಾಲಕ ಅಣಬೂರು ರೆಣುಕೇಶ್, ಹನುಮಂತಪ್ಪ,ಪತ್ರಕರ್ತ ರಫೀಕ್ ಅಹಮದ್, ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!