ಜಗಳೂರು ಪಟ್ಟಣದಲ್ಲಿ ಎಸ್.ಜಾನಕಿ ಅಮ್ಮ ನವರ ಸವಿ ನೆನಪಿನಾರ್ಥವಾಗಿ ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧಾ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಹಾಸ್ಯ ಖ್ಯಾತ ಕಲಾವಿದ ಟೆನ್ನಿಸ್ ಕೃಷ್ಣ ಆಗಮಿಸಲಿದ್ದಾರೆ.
By shukradeshe news
editor m.rajappa vyasgondanahalli
Kannada | online news portal |Kannada news online date august 18 _8_2026
ಜಗಳೂರು ಪಟ್ಟಣದ ಗುರುಭವನದಲ್ಲಿ ದಿನಾಂಕ ಆಗಸ್ಟ್ 22 _23 ರಂದು ಶನಿವಾರ ಮತ್ತು ಭಾನುವಾರ ಜರುಗಲಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಬಾಗಗಳಿಂದ ಕಲಾವಿದರು ಆಗಮಿಸಲಿದ್ದಾರೆ . ಕಾರ್ಯಕ್ರಮವನ್ನ ಕ್ಷೇತ್ರದ ಜನಪ್ರಿಯ ಶಾಸಕರಾದ ಬಿ.ದೇವೇಂದ್ರಪ್ಪ ಉದ್ಗಾಟಿಸಲಿದ್ದು ವಿಶೇಷ ಆಹ್ವಾನಿತರಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜನ್ ಮುಜಾರಾಯಿ ಮತ್ತು ಮಿನುಗಾರಿಕೆ ಇಲಾಖೆ ಸಚಿವ ಕೆ.ಎಸ್ ಬಸವಂತಪ್ಪ ಮಾಜಿ ಶಾಸಕರುಗಳಾದ ಎಸ್ ವಿ.ರಾಮಚಂದ್ರಪ್ಪ ಹಾಗೂ ಮಾಜಿ ಶಾಸಕ ಹೆಚ್ ಪಿ ರಾಜೇಶ್ .ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ ಪಾಲಯ್ಯ .ರಾಜ್ಯ ಕಾಂಗ್ರೆಸ್ ಎಸ್ ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ಬಿಜೆಪಿ ಮುಖಂಡರಾದ ಬಿಸ್ತುವಳ್ಳಿ ಬಾಬು ಸೇರಿದಂತೆ ಕಾರ್ಯಕ್ರಮದ ಅದ್ಯಕ್ಷತೆಯನ್ನ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜೆ.ಪಿ ಓಬಣ್ಣ .ಕಲಾ ಪೋಷಕರಾದ ಬಸವನಕೋಟೆ ಎಂ.ಹೆಚ್ ಚೌಡಪ್ಪ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೋಳುವರು ಎಂದು ಗಾನಲಹರಿ ಕಲಾ ಸಾಂಸ್ಕೃತಿಕ ವೇದಿಕೆ ಅದ್ಯಕ್ಷರಾದ ಪೂಜರ್ ಸಿದ್ದಪ್ಪ ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಬರುವಂತ ಕಲಾವಿದರು ತಾವೇ ಕರೋಕೆ ಟ್ರ್ಯಾಕ್ ನ್ನ ತರಬೇಕು ಬಾಗವಹಿಸುವಂತ ಕಲಾವಿದರು ಒಂದು ಸಾವಿರ ರೂಗಳನ್ನ ಪಾವತಿಸಿ ಹೆಸರು ನೊಂದಾಯಿಸಿಕೊಳ್ಳಬೇಕು.
ಪರಿಣಿತಿ ಹೊಂದಿದ ತೀರ್ಪುಗಾರರಾದ ಶ್ರೀರಾಮ್ ಕಾಸರ್ .ಮತ್ತು ಅಣ್ಣಪ್ಪ ಅಜ್ಜೇರ್ ಹರಿಹರ ಇವರು ಲಯ ಬದ್ದವಾಗಿ ಹಾಡುವಂತ ಉತ್ತಮ ಗಾಯಕರನ್ನ ಗುರುತಿಸಿ ತೀರ್ಪು ನೀಡಲಿದ್ದಾರೆ.
ಈ ಸ್ವರ್ದೆಯಲ್ಲಿ ಭಾಗವಹಿಸಿ ವಿಜೇತರಾದ ಗಾಯಕರಿಗೆ
ಪ್ರಥಮ ಬಹುಮಾನ 20 ಸಾವಿರ .ದ್ವೀತಿಯ ಬಹುಮಾನ 15 ಸಾವಿರ ತೃತೀಯ ಬಹುಮಾನ 10 ಸಾವಿರ ರೂಗಳ ಜೊತೆಗೆ ವಿಶೇಷ ಸನ್ಮಾನ ಟ್ರೋಪಿ ಮೂಲಕ ಗೌರವಿಸಲಾಗುವುದು .ಕಲಾವಿದರು ಕಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೋಳಿಸುವಂತೆ ಗಾಯಕ ನಾಗೇಶಿ ಹುಚ್ಚಂಗಿಪುರ ತಿಳಿಸಿದ್ದಾರೆ.
ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮ ಜಗಳೂರು ನಗರದಲ್ಲಿ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ . ಸ್ವರ್ಧೆಯಲ್ಲಿ ಭಾಗವಹಿಸುವಂತ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ .ವಿಜೇತರಾದ ಕಲಾವಿದರಿಗೆ ಪ್ರಥಮ ಬಹುಮಾನ ಪಂಕಜ ಮಲ್ಲಿಕಾರ್ಜನ್ ಕೆಚ್ಚೆನಹಳ್ಳಿ ದ್ವೀತಿಯ ಬಹುಮಾನ ಎಮ್.ಹೆಚ್ ಚೌಡಪ್ಪ. ತೃತೀಯ ಬಹುಮಾನ ಸುಜಾತ ದಾರಿದೀಪ ಟ್ರಸ್ಟ್ ಇವರ ಕೊಡುಗೆ ಶ್ಲಾಘನೀಯವಾಗಿದೆ.ಎಂದು ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. .

ಸುದ್ದಿಗೋಷ್ಠಿಯಲ್ಲಿ ಗಾಯಕರಾದ ವೃಷಬೇಂದ್ರ. ಮರೆನಹಳ್ಳಿ ಕುಮಾರ್. ಚಂಪಾವತಿ. ಗಾಯಕ ಪ್ರಕಾಶ್ .ಸೇರಿದಂತೆ ಹಾಜುರಿದ್ದರು.

ವಿಶೇಷ ಸೂಚನೆ ಸ್ವರ್ಧೆಯಲ್ಲಿ ಭಾಗವಹಿಸುವಂತ ಕಲಾವಿದರು ಹೆಸರು ನೊಂದಾಯಿಸಿಕೊಳ್ಳಲು ಈ ಮೋಬೈಲ್ ನಂ ಸಂಪರ್ಕಿಸಿ 9901635116 .9606306716.9902997378 .9743206831.8105275859
