ಪೋಷಕರು ಮೌಡ್ಯತೆ ಅಂಧಕಾರಕ್ಕೆ ಒಳಗಾಗಬೇಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೋಡಿಸಿ ನಾನು ದೇವಸ್ಥಾನ ನಿರ್ಮಿಸಲು ಹಣ ಕೊಡುವುದಿಲ್ಲ ವಿದ್ಯಾರ್ಥಿಗಳಿಗೆ ನನ್ನ ಕೈಲಾದ ಸಹಾಯ ಮಾಡುವೆ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜೆ.ಪಿ ಓಬಣ್ಣ.

ಅಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ಸಹ ಸಂಗೀತಕ್ಕೆ ಪ್ರೋತ್ಸಹ ನೀಡಿದ್ದಾರೆ. ನನಗೂ ಸಹ ಸಂಗೀತ ಕಲಿಯುವ ಅಂಬಲವಿದೆ ಶಾಸಕರಾದ ಬಿ.ದೇವೇಂದ್ರಪ್ಪ

By shukradeshe news
editor m.rajappa vyasgondanahalli
Kannada | online news portal |Kannada news online date august 24 _9_2026

ಜಗಳೂರು‌ ಪಟ್ಟಣದ ಗುರುಭವನದಲ್ಲಿ‌ ಖ್ಯಾತ ಹಿನ್ನಲೆ ಗಾಯಕಿ ದಿ ಎಸ್. ಜಾನಕಿಮ್ಮ ಹಾಗೂ ಎಸ್ ಪಿ.ಬಿ .ರವರ ಸವಿನೆನಪಿಗಾಗಿ ಆಯೋಜಿಸಲಾಗಿದ್ದ ಗಾನಲಹರಿ ವೇದಿಕೆ ಮತ್ತು ವಾಯ್ಸ್ ಆಪ್ ಜಗಳೂರು ಸಹಯೋಗದಲ್ಲಿ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮವನ್ನ ಉದ್ಗಾಟಿಸಿ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪ ಮಾತನಾಡಿದರು.

ಸಂಗೀತಕ್ಕೆ ಜಾತಿ ಮತ ಬೇದವಿಲ್ಲ ಇಂತ ರಸಮಂಜರಿ ಕಾರ್ಯಕ್ರಮಗಳು ಒತ್ತಡದ ಬದುಕಿಗೆ ಸಂಗೀತ‌ ಅತ್ಯಾವಶ್ಯಕ .ವೇದಗಳ ಕಾಲದಿಂದ ರಾಜ ಮಹಾರಾಜುರುಗಳು‌ ಸಹ ಸಂಗೀತಕ್ಕೆ ಪ್ರೋತ್ಸಹಿಸುತಾ ಬಂದಿದ್ದು ಕಲೆ ಉಳಿಸಿ ಬೆಳೆಸಬೇಕಿದೆ.. ..ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣರವರು ನಮ್ಮ ಜಗಳೂರಿಗೆ ಆಗಮಿಸಿರುವುದು ಸಂತೋಷ ತಂದಿದೆ ಎಂದರು .ಕಳೆದ ವರ್ಷದ ಅವಧಿಯಲ್ಲಿ ಇದೆ ವೇದಿಕೆಯಲ್ಲಿ‌ ಕಾರ್ಯಕ್ರಮ ಉದ್ಗಾಟನೆ ಮಾಡಿದ ನೆನಪು ಸ್ಮರಿಸಿದರು .ಉತ್ತಮ ಅಭ್ಯಾಸದಿಂದ ಮಾತ್ರ ಉತ್ತಮ ಕಲಾವಿದರಾಗಿ ಹೊರಹೊಮ್ಮಲು ಸಾದ್ಯ . ‌ತೀರ್ಪುಗಾರರು ಉತ್ತಮ ತೀರ್ಪು ನೀಡುವಂತೆ ಸಲಹೇ ನೀಡಿದ ಶಾಸಕರು

ಮಾಜಿ ಶಾಸಕ ಎಸ್ ವಿ.ರಾಮಚಂದ್ರಪ್ಪ ಎಸ್ ಜಾನಕಿಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಸಂಗೀತ ಸಮಾರಂಭವನ್ನ ಕುರಿತು ಮಾತನಾಡಿದರು ಸಾಂಸ್ಕೃತಿ‌ಕ ಕಾರ್ಯಕ್ರಮಗಳು ಸಮಾಜವನ್ನ ಸ್ವಾಸ್ಥ್ಯಗೋಳಿಸುವಂತ ದಿವ್ಯ ಶಕ್ತಿ ಸಂಗೀತಕ್ಕಿದೆ . ಇಂತ ಕಾರ್ಯಕ್ರಮಗಳು ಸದಾ ನಿರಂತರವಾಗಿರಲಿ ಎಂದರು‌.

ಮಾಜಿ ಶಾಸಕರಾದ ಹೆಚ್ ಪಿ ರಾಜೇಶ್ ರವರು‌ ಹಿರಿಯ ಚೇತನ ಎಸ್ ಪಿ ಬಾಲಸುಬ್ರಮಣ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಗ್ರಾಮೀಣ ಬಾಗದಲ್ಲಿ ಮಹಿಳೆಯರು ಸೋಬಾನೆ ಪದ ಮತ್ತು ಜನಪದದ ಮೂಲಕ ತಮ್ಮ ಕಲೆಯನ್ನ ಹಬ್ಬ ಹರಿದಿನಗಳಲ್ಲಿ ವ್ಯಕ್ತಪಡಿಸುತ್ತಾರೆ.ಸಂಗೀತ ವಿವಿಧ ಕಲಾ ಪ್ರಕಾರಗಳಲ್ಲಿ ಬೆಳೆದಿದೆ . ಕಲೆ ಯಾರ ಸ್ವತ್ತಲ್ಲ ಕಲೆಗಾರರ ಸ್ವತ್ತು ಕಲಾವಿದರಿಗೆ ಪ್ರೋತ್ಸಹಿಸಬೇಕೆಂದರು.

ಮಾಜಿ.ಜಿಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿದರು ನಮ್ಮ ತಾಲ್ಲೂಕಿನಲ್ಲಿ ಅತಿ ಹೆಚ್ಚು ನಾಟಕ ಕಲಾವಿದರಿದ್ದಾರೆ .ಪ್ರತಿ ವರ್ಷ ಸುಮಾರು ಹಳ್ಳಿಗಳಲ್ಲಿ ನಾಟಕ ಪ್ರದರ್ಶನಗೊಳ್ಳಲ್ಲಿವೆ ಕಲೆಯಿಂದಲೆ ಅನೇಕರು ಬದುಕು ರೂಪಿಸಿಕೊಂಡಿದ್ದಾರೆ ಎಂದರು.

ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜೆ.ಪಿ ಓಬಣ್ಣ ಮಾತನಾಡಿ
ಪೋಷಕರು ಮೌಡ್ಯತೆ ಅಂಧಕಾರಕ್ಕೆ ಒಳಗಾಗಬೇಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೋಡಿಸಿ ನಾನು ದೇವಸ್ಥಾನ ನಿರ್ಮಿಸಲು ಹಣ ಕೊಡುವುದಿಲ್ಲ ವಿದ್ಯಾರ್ಥಿಗಳಿಗೆ ನನ್ನ ಕೈಲಾದ ಸಹಾಯ ಮಾಡುವೆ . ಸಂಗೀತವನ್ನ ಅವ್ಯಾಸವಾಗಿ ರೂಡಿಸಿಕೊಳ್ಳಿ ಆದರೆ ವೃತ್ತಿಯಾಗಿ ಅನುಸರಿಸಬೇಡಿ .ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೋಡಿಸಿ‌ ಶಿಕ್ಷಣದಿಂದ ನಿಮ್ಮ‌ ಜೀವನ ಬದಲಾಗುವುದೇ ವಿನ ಕಂದಚಾರ ಮೌಡ್ಯತೆಗಳಿಂದಲ್ಲ ಆತ್ಮಶುದ್ದಿಗಾಗಿ‌ ಭಕ್ತಿಯಿರಲಿ ಆದರೆ ಅಂಧಕಾರ ಬೇಡ .ಅಂಬೇಡ್ಕರ್ ರವರ ಶಿಕ್ಷಣಕ್ಕೆ ಮಹತ್ವ ನೀಡುವಂತೆ‌ ಕಿವಿ ಮಾತು ಹೇಳಿದರು ಕಾರ್ಯಕ್ರಮದಲ್ಲಿ ಕನ್ನಡ ಚಿತ್ರಗೀತೆ‌ ಹಾಡುವ ಮೂಲಕ ಗಾಯಕರನ್ನ ಹಾಗೂ ಪ್ರೇಕ್ಷಕರನ್ನ ರಂಜಿಸಿದರು.

ಪ್ರಾಸ್ತವಿಕವಾಗಿ‌ ಆಯೋಜಕರು ಮತ್ತು ಕಲಾ ಪೋಷಕರಾದ ಎಂ.ಹೆಚ್ ಚೌಡಪ್ಪ ಮಾತನಾಡಿದರು
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪ್ರತಿಮ ದಾಖಲೆ ಬರೆದ ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌. ಜಾನಕಿ ಅಮ್ಮನವರ ಅದ್ಬುತ ಸಂಗೀತ ಪಯಣವೆ ಇತರೆ ಗಾಯಕರಿಗೆ ಸ್ಪೂರ್ತಿಯಾಗಿದ್ದರು. ಅವರ ವೃತ್ತಿಜೀವನದಲ್ಲಿ ಬರೋಬ್ಬರಿ ಸಾವಿರಾರು ಕನ್ನಡ ಭಾಷೆಯಲ್ಲಿ‌ ಹಾಡುಗಳನ್ನ ಹಾಡಿ ಅಪ್ರತಿಮ ದಾಖಲೆ ನಿರ್ಮಿಸಿದ ಜಾನಕಿ ಅಮ್ಮ ಹಾಗೂ ಹಿರಿಯ ಹಿನ್ನಲೆ ಗಾಯಕರಾದ ದಿವಂಗತ ಎಸ್ ಪಿ.ಬಿ. ಅವರ ಸವಿನೆನಪಿಗಾಗಿ‌ ಕಾರ್ಯಕ್ರಮ ಅರ್ಥಪೂರ್ಣ.ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪರವರ ಸಹಕಾರ ಮಾಜಿ ಶಾಸಕರುಗಳಾದ ಎಸ್ ವಿ.ರಾಮಚಂದ್ರಪ್ಪ.ಹೆಚ್ ರಾಜೇಶ್ ಇನ್ನಿತರೆ ಗಣ್ಯರ ಪ್ರೋತ್ಸಹದಿಂದ ಇಂತ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಕರೋಕೆ ಸ್ವರ್ದೆಯಲ್ಲಿ ಭಾಗವಹಿಸಿದ ಗಾಯಕರನ್ನ ಕುರಿತು ತೀರ್ಪುಗಾರರಾದ ಜಿ ಕನ್ನಡ ವಿನ್ನರ್ ಶ್ರೀರಾಮ ಕಾಸರ್ .ಅಣ್ಣಪ್ಪ ಅಜೇರ್ .ವಿಶಾಲಾಕ್ಷಿ ಉತ್ತಮ ತೀರ್ಪು ನೀಡುವ ಮೂಲಕ ಪ್ರಥಮ ವಿಜೇತರಾದ ಬೆಂಗಳೂರಿನ ಮೂಲದ ರವಿತೇಜ ಎಂಬ ಯುವಕನಿಗೆ 20 ಸಾವಿರ ಬಹುಮಾನ ಟ್ರೋಪಿ. ದ್ವೀತಿಯ ಬಹುಮಾನ 15 ಸಾವಿರ ಟ್ರೋಪಿ ಜಗಳೂರಿನ ನಿಖಿತ .ತೃತೀಯ ಬಹುಮಾನ 10.000 ಟ್ರೋಪಿಯನ್ನ ಕೂಡ್ಲಿಗಿ ತಾಲ್ಲೂಕಿನ ಮಂಜುರವರಿಗೆ ವಿತರಣೆ ಮಾಡುವ ಮೂಲಕ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣರವರು ವಿಜೇತ ಕಲಾವಿದರಿಗೆ ಪ್ರೋತ್ಸಹಿಸಿದರು.

20 ಸಾವಿರ ರೂ ಪ್ರಥಮ ಬಹುಮಾನ ಜಗಳೂರಿನ ನಿವೃತ ಶಿಕ್ಷಕಿ ಪಂಕಜ ಹಾಗೂ 15 ಸಾವಿರ ದ್ವೀತಿಯ ಬಹುಮಾನ ಟ್ರೋಪಿ ಜಗಳೂರು ತಾಲ್ಲೂಕಿನ ಬಸವನಕೋಟೆ ಎಂ.ಹೆಚ್ ಚೌಡಪ್ಪ. ತೃತೀಯ ಬಹುಮಾನ 15000 ತಾಲ್ಲೂಕಿನ ದಾರಿದೀಪಾ ಟ್ರಸ್ಟ್ ನ ಸುಜಾತರವರು‌ ಕೊಡುಗೆಯಾಗಿ‌ ನೀಡಿರುವುದು ಶ್ಲಾಘನೀಯವಾಗಿದೆ ಎಂದು ಕಲಾಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆಯೋಜಕರಿಗೆ ಕ್ಷೇತ್ರದ ಶಾಸಕರು ಒಂದು ಲಕ್ಷ ಕಾಣಿಕೆ ನೀಡಿದರು .ಮಾಜಿ ಶಾಸಕ ಹೆಚ್ ಪಿ ರಾಜೇಶ್ 25 ಸಾವಿರ .ಹಾಗೂ ಮಾಜಿ ಜಿಪಂ ಸದಸ್ಯರಾದ ಕೆ.ಪಿ ಪಾಲಯ್ಯ 5000. ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜೆ.ಪಿ ಓಬಣ್ಣರವರು 25000 ಸಾವಿರ .ಸೇರಿದಂತೆ ಅವರ ಧರ್ಮಪತ್ನಿ ಕೈಗಾರಿಕೋದ್ಯಮಿಗಳು ನಾಗವೇಣಕ್ಕರವರು ದ್ವೀತಿಯ ರೌಂಡಗೆ ವಿಜೇತರಾದ ಸುಮಾರು 35 ಕಲಾವಿದರಿಗೆ ಕಿರು ಕಾಣಿಕೆ ನೀಡಿ ಪ್ರೋತ್ಸಾಹಿಸಿದರು.

ಅಭಿಮಾನಿಗಳು ಕನ್ನಡ ಚಲನ ಚಿತ್ರಗಳನ್ನ ವೀಕ್ಷಣೆ ಮಾಡುವ ಮೂಲಕ ಕನ್ನಡ ನಾಡು ನುಡಿ ಮತ್ತು ನಮಗೆ ಗೌರವಿಸಬೇಕೆ ವಿನ ಕೇವಲ ಭಾವಚಿತ್ರಕ್ಕೆ ಮುಗಿಬಿದ್ದು ಅಭಿಮಾನ ತೋರಿಸುವುದು ತರವಲ್ಲ ಅನೇಕ ಹಿರಿಯ ನಟರ ಬದುಕಿಗೆ ಜೀವ ತುಂಬುವಂತೆ ಹಾಸ್ಯಮಯವಾಗಿ ತಿಳಿಸಿದರು ಟೆನ್ನಿಸ್ ಕೃಷ್ಣ

ಈ ಸಂದರ್ಭದಲ್ಲಿ ಪೊಲೀಸ್ ಇನ್ಸಪಕ್ಟರ್ ಸಿದ್ದರಾಮಯ್ಯ. .ಕಾಂಗ್ರೆಸ್ ಮುಖಂಡ ಪ್ರಕಾಶರೆಡ್ಡಿ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ. ಸಾಹಿತಿ ಎನ್ ಟಿ ಎರ್ರಿಸ್ವಾಮಿ. ಮುಖಂಡ ಮಾಜಿ ಮಂಜಣ್ಣ. ಹಟ್ಟಿ ತಿಪ್ಪೇಸ್ವಾಮಿ.ಪತ್ರಕರ್ತ ಸಂಘದ ಅದ್ಯಕ್ಷ ಎಂ.ಲೋಕೇಶ್ ಐಹೊಳೆ ಅಂಬೇಡ್ಕರ್ ಪುತ್ಥಳಿ ಸಮಿತಿ ಮುಖಂಡ ಸಿದ್ದಪ್ಪ ಪೂಜಾರಿ.ಪ್ರಗತಿಪರ ಮುಖಂಡ ಮಹಾಲಿಂಗಪ್ಪ .ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ . ಗಾಯಕರಾದ ಹಾಲೇಶಪ್ಪ ನಾಗೇಶಿ .ವೃಷಬೇಂದ್ರ.ಚಂಪಕ್ಕ. ನೇತ್ರಾವತಿ. ನೀರಾವರಿ ಹೋರಾಟಗಾರ ಆರ್ ಒಬಳೇಶ್. ಮಹಿಳಾ ಹೋರಾಟಗಾರ್ತಿ ಇಂದ್ರಮ್ಮ .ದಾರಿದೀಪ ಟ್ರಸ್ಟ್ ನ ಸುಜಾತ ಪ್ರಕಾಶ.ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!