ಚಿತ್ರದುರ್ಗ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಆಪಘಾತ.
ತಾಲ್ಲೂಕಿನ ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಸೋಮವಾರ ಅಪಘಾತಕ್ಕೀಡಾಗಿದೆ. ಶಾಸಕ ಸಮರ್ಥ್‌ ಅಪಾಯದಿಂದ ಪಾರಾಗಿದ್ದಾರೆ ಯಾವುದೇ ಪ್ರಾಣ ಆಪಾಯವಿಲ್ಲ

By shukradeshe news
editor m.rajappa vyasgondanahalli
Kannada | online news portal |Kannada news online date august 24 _9_2026

ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪ ಅಪಘಾತ ನಡೆದಿದೆ. ಮುಂದೆ ಹೋಗುತ್ತಿದ್ದ ಕಾರನ್ನು ಹಿಂದಿಕ್ಕಲು ಹೋದಾಗ ಆ ಕಾರಿಗೆ ಡಿಕ್ಕಿಯಾಗಿದೆ.

ಮುಂದಿನ ಕಾರು ಪಲ್ಟಿಯಾಗಿದ್ದು ಕಾರ್‌ನಲ್ಲಿದ್ದ ಬಳ್ಳಾರಿಯ ಸಂದೀಪ್‌ (47) ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಮರ್ಥ್‌ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ನಾಲ್ವರು ಇದ್ದರು, ಯಾರಿಗೂ ತೊಂದರೆಯಾಗಿಲ್ಲ. ಶಾಸಕರನ್ನು ಇನ್ನೊಂದು ಕಾರ್‌ನಲ್ಲಿ ದಾವಣಗೆರೆಗೆ ಕಳುಹಿಸಲಾಯಿತು. ಈ ಸಂಬಂಧ ಹಿರಿಯೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!