ಶುಕ್ರದೆಸೆ ನ್ಯೂಸ್:- ಬಿಜೆಪಿ ಪಕ್ಷದಲ್ಲಿ ಲಿಂಗಾಯತರ ಅಸಮಾಧಾನವಿಲ್ಲ:ಸಂಸದ ಜಿಎಂ ಸಿದ್ದೇಶ್ವರ್ ಸ್ಪಷ್ಟನೆ
ಜಗಳೂರು ಸುದ್ದಿ:ಬಿಜೆಪಿ ಪಕ್ಷದ ಲಿಂಗಾಯತ ಸಮುದಾಯದವರಲ್ಲಿ ಯಾವುದೇ ಅಸಮಾಧಾನವಿಲ್ಲ.ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಾಗುವುದು ಎಂದು ಸಂಸದ ಜಿಎಂ ಸಿದ್ದೇಶ್ವರ್ ಸ್ಪಷ್ಟನೆ ನೀಡಿದರು.
ತಾಲೂಕಿನ ದೇವಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳು ಸೇರಿದಂತೆ ಮೆದಕೇರನಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ ಲಿಂಗಾಯತ ಸಮುದಾಯದವರು ಪಕ್ಷ ತೊರೆದು ಹೋಗಿಲ್ಲ.ಅವರ ಚಿಕ್ಕಪುಟ್ಟ ಬೇಡಿಕೆಗಳನ್ನು ಉಸ್ತುವಾರಿ ಸರಿಪಡಿಸಲಾಗಿದೆ.ಪಕ್ಷದಿಂದ ಸಾಮಾನ್ಯ ಕಾರ್ಯಕರ್ತರು ಹೊರಗಡೆ ಹೋಗುವುದು.ಇತರೆ ಪಕ್ಷದಿಂದ ಬಿಜೆಪಿ ಸೇರ್ಪಡೆಯಾಗುವುದು ಸಹಜ ಇದರಿಂದ ಪಕ್ಷಕ್ಕೆ ಹಿನ್ನಡೆ ಸಾಧ್ಯವಿಲ್ಲ.ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಆಡಳಿತಕ್ಕೆ ಬರಲಿದೆ.ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ.ಜಗಳೂರಿನಲ್ಲಿ 50000 ಮತಗಳ ಅಂತರದಲ್ಲಿ ಎಸ್.ವಿ.ರಾಮಚಂದ್ರ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.
ಕ್ಷೇತ್ರದಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಸಾಕಾರಗೊಂಡಿವೆ.ಸಿಸಿರಸ್ತೆ,ಸೂರು,ಕುಡಿಯುವ ನೀರು,ಬೀದಿ ದೀಪ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ದಿಗೊಳಿಸಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ಬೆಂಬಲಿಸುವ ವಿಶ್ವಾಸವಿದೆ.ಚುನಾವಣೆ ಪ್ರಚಾರದ ವೇಳೆ ಪ್ರತಿ ಗ್ರಾಮಗಳಲ್ಲಿ ಅದ್ದೂರಿ ಸ್ವಾಗತ ಕಾರ್ಯಕರ್ತರ ಒಗ್ಗಟ್ಟು ನಮ್ಮಲ್ಲಿ ಉತ್ಸಾಹ ಮೂಡಿಸಿದೆ ಎಂದರು.
ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಜನರು ಮತ್ತೊಮ್ಮೆ ಆಶೀರ್ವಾದಿಸಬೇಕು.ಮೇ.10 ರಂದು ನಡೆಯಲಿರುವ ಚುನಾವಣೆಯಲ್ಲಿ ನನ್ನ ಗುರುತು ಕಮಲಕ್ಕೆ ಮತಚಲಾಯಿಸಿ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಬೇಕು.ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಸಹಕಾರ ಹಾಗೂ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳು ಗೆಲುವಿನ ಶ್ರೀರಕ್ಷೆಯಾಗಲಿವೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯರುಗಳು ಪಕ್ಷ ತೊರೆದು ಪಕ್ಷೇತರ ಅಭ್ಯರ್ಥಿ ಜೊತೆ ಸೇರ್ಪಡೆಯಾಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಗಮನಕ್ಕೆ ಬಂದಿಲ್ಲ ಹೋಗಿರಬಹುದು ವಿಶ್ವಾಸಕ್ಕೆ ಪಡೆದು ಬಿಜೆಪಿ ಭದ್ರಪಡಿಸಿಕೊಳ್ಳುತ್ತೇವೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.
ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿ ಸಂಜೀವ್ ಪಟೇಲ್,ಮುಖಂಡ ಸದಾಶಿವಪ್ಪ. ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ದೇವಿಕೆರೆ ಗ್ರಾಪಂ ಅದ್ಯಕ್ಷೆ ರಣದಮ್ಮ ಚಂದ್ರಪ್ಪ ಪ.ಪಂ ನಾಮನಿರ್ದೇಶಿತ ಸದಸ್ಯ ಬಿ.ಪಿ.ಸುಬಾನ್,ಶಿವಕುಮಾರ್ ಸ್ವಾಮಿ,ಮೆದಕೇರನಹಳ್ಳಿ ರಾಜಪ್ಪ,ಬಿದರಕೆರೆರವಿಕುಮಾರ್,ಸೇರಿದಂತೆ ಇದ್ದರು.